ಮೈಸೂರು: ಷೇರುಗಳಲ್ಲಿ ಹಣ ಹೂಡಿದರೆ ಹೆಚ್ಚಿನ ಬಡ್ಡಿ ಕೊಡುವುದಾಗಿ ನಂಬಿಸಿ ವಂಚಿಸಿರುವುದಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ನಗರದ ರವಿ ಪ್ರಕಾಶ್ ಎಂಬುವವರು ಸೌಂದರ್ಯ ಸಿಂಹ ಫೈನಾನ್ಸ್ ಸಂಸ್ಥೆಯ ಡೈರಕ್ಟರ್ ಗೋವಿಂದರಾಜನ್ ವಿರುದ್ದ ದೂರು ನೀಡಿದ್ದಾರೆ. ಷೇರು ಮತ್ತು ಕಮಾಡಿಟಿಯಲ್ಲಿ ಹಣವನ್ನು ಹೂಡಿಸಿ ಅದಕ್ಕೆ ತಕ್ಕ ಹಾಗೆ ಶೇಕಡ 13 ರಿಂದ 24 ರವರಗೆ ಬಡ್ಡಿಯನ್ನು ಕೊಡುವುದಾಗಿ ಹೇಳಿ ವ್ಯವಹಾರವನ್ನು ನಡೆಸುತ್ತಿದ್ದರು. ಈ ಸಂಬಂಧ ರವಿ ಪ್ರಕಾಶ್ 10 ಲಕ್ಷ ರೂಗಳನ್ನು ಕೆನರಾ ಬ್ಯಾಂಕ್ ಚೆಕ್‍ಗಳ ಮೂಲಕ ನೀಡಿದ್ದಾರೆ. ಆದರೆ, 6 ಲಕ್ಷ ರೂಗಳಿಗೆ ಮಾತ್ರ ಅಗ್ರಿಮೆಂಟ್ ನೀಡಿದ್ದು, ಇನ್ನುಳಿದ ಹಲವಾರು ಜನರಿಂದ ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ ಎಂದು ರವಿ ಪ್ರಕಾಶ್ ಅನುಮಾನ ವ್ಯಕ್ತಪಡಿಸಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.