ಮೈಸೂರಿನಲ್ಲಿ ಹಾಕಿ ಕೂರ್ಗ್ ತಂಡಕ್ಕೆ ಗೆಲುವು
ಕೊಡಗು

ಮೈಸೂರಿನಲ್ಲಿ ಹಾಕಿ ಕೂರ್ಗ್ ತಂಡಕ್ಕೆ ಗೆಲುವು

December 22, 2018

ಗೋಣಿಕೊಪ್ಪಲು: ಹಾಕಿ ಮೈಸೂರು ವತಿಯಿಂದ ಅಲ್ಲಿನ ಮಹಾರಾಜಾಸ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಶುಭಾರಂಭ ಮಾಡಿದೆ.

ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಕಿಕೂರ್ಗ್ ತಂಡ 7-0 ಗೋಲುಗಳ ಮೂಲಕ ಹಾಕಿ ಬಳ್ಳಾರಿ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಹಾಕಿಕೂರ್ಗ್ ಪರ ಲಿಕಿತ್ 3 ಗೋಲು ಹೊಡೆದರು. 7 ಹಾಗೂ 8ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಹಾಗೂ 36ನೇ ನಿಮಿಷದಲ್ಲಿ ಲಿಖಿತ್ ಫೀಲ್ಡ್ ಗೋಲು ಬಾರಿಸಿದರು. 22 ಹಾಗೂ 9ನೇ ನಿಮಿಷದಲ್ಲಿ ಚಿಟ್ಯಪ್ಪ 2 ಗೋಲು, 42ರಲ್ಲಿ ಬೋಪಣ್ಣ, 44ರಲ್ಲಿ ಮಂಜುನಾಥ್ ಗೋಲು ಹೊಡೆದರು. ತಂಡದ ತರಬೇತು ದಾರರಾಗಿ ಲೋಕೇಶ್, ವ್ಯವಸ್ಥಾಪಕರಾಗಿ ಅರ್ಜುನ ಪಾಲ್ಗೊಂಡಿದ್ದಾರೆ.

Translate »