ಮಾಕುಟ್ಟ ರಸ್ತೆ ಸಂಚಾರಕ್ಕೆ ಮುಕ್ತ
ಕೊಡಗು

ಮಾಕುಟ್ಟ ರಸ್ತೆ ಸಂಚಾರಕ್ಕೆ ಮುಕ್ತ

December 22, 2018

ವಿರಾಜಪೇಟೆ:  ಕಳೆದ ಆಗಸ್ಟ್‍ನಲ್ಲಿ ನೆರೆ ಹಾವಳಿಯಿಂದ ಭೂಕುಸಿತವುಂಟಾಗಿ ಸಂಚಾರ ಸ್ಥಗಿತ ಗೊಂಡಿದ್ದ ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿಯ ಮಾಕುಟ್ಟ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಜೂನ್-ಜುಲೈ ತಿಂಗಳು ಸುರಿದ ಭಾರಿ ಮಹಾ ಮಳೆಯಿಂದಾಗಿ ಭೂಕುಸಿದ ಕಾರಣ ಅನೇಕ ಕಡೆ ಗಳಲ್ಲಿ ಮರಗಳು ರಸ್ತೆಗೆ ಉರುಳಿದಲ್ಲದೆ, ಬರೆಕುಸಿದು ಕೊಡಗು ಕೇರಳ ಮಾಕುಟ್ಟ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ನಂತರ ಇತ್ತೀಚೆಗೆ ಈ ರಸ್ತೆಯನ್ನು ದುರಸ್ಥಿ ಪಡಿಸಿದ ಬಳಿಕ ಲಘು ವಾಹನ ಸಂಚಾ ರದ ನಂತರ ಕೊಡಗು ಜಿಲ್ಲಾ ಆಡಳಿತ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೂ ಇನ್ನು ರಸ್ತೆ ದುರಸ್ತಿ ತಡೆಗೋಡೆಗಳು ಸೇರಿದಂತೆ ಅನೇಕ ಕಾಮಗಾರಿಗಳು ಬಾಕಿ ಉಳಿದಿರುವುದು ಕಂಡು ಬಂದಿದೆ. ಮಾಕುಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಭಿಯಂತರರೊಂದಿಗೆ ಭೇಟಿ ನೀಡಿದ ಜಿಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಕೊಡಗಿನಿಂದ ಕೇರ ಳಕ್ಕೆ ಹತ್ತಿರ ಇರುವುದರಿಂದ ಈ ರಸ್ತೆಯಲ್ಲಿ ಪ್ರತಿನಿತ್ಯ ಸರಕಾರಿ ಹಾಗೂ ಖಾಸಗಿಬಸ್ಸು ಗಳು ಮತ್ತು ಪ್ರವಾಸಿಗರು ಸೇರಿದಂತೆ 50ಕ್ಕೂ ಹೆಚ್ಚು ಬಸ್ಸುಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ.

ಇದೀಗ ಕೇರಳದ ಕಣ್ಣೂರುನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಗೊಂಡಿದ್ದು, ಇದೇ ಮಾಕುಟ್ಟ ರಸ್ತೆಯಲ್ಲಿಯೇ ಹೆಚ್ಚು ವಾಹನಗಳು ಓಡಾಡಬೇಕಾಗಿರುವುದರಿಂದ ಈ ರಸ್ತೆಯನ್ನು ಅಗಲೀಕರಣಗೊಳಿಸಬೇಕಿದೆ. ರಸ್ತೆಯಲ್ಲಿ ಹೆಚ್ಚು ತಿರುವು ಇರುವ ಕಡೆ ಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದ ಮಹೇಶ್, ಮಾಕುಟ್ಟ, ಕರ್ನಾಟಕ- ಕೇರಳಗಡಿ ಭಾಗವಾಗಿದೆ. ಈ ರಸ್ತೆಯ ಎಡ ಬದಿಯಲ್ಲಿ ಬ್ರಹ್ಮಗಿರಿ ವನ್ಯ ಜೀವಿ ಅರಣ್ಯ- ಬಲಭಾಗದಲ್ಲಿ ಮೀಸಲು ಅರಣ್ಯ ಇರುವುದರಿಂದ ಇದನ್ನು ರಕ್ಷಿಸ ಬೇಕಿದೆ ಎಂದರು.

ಈ ಸಂದರ್ಭ ಬಿಜೆಪಿಯ ಬಿ.ಜಿ.ಸಾಯಿನಾಥ್ ಇದ್ದರು. ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಎಂ.ಇ.ಸುರೇಶ್ ಮಾತನಾಡಿ, ವಿರಾಜಪೇಟೆ ತಾಲೂಕಿನ ಕೆಲವು ಕಡೆಗಳ ರಸ್ತೆ ಕಾಮಗಾರಿ ಮತ್ತು ಕೊಣ ನೂರು-ಮಾಕುಟ್ಟ ರಸ್ತೆ ಅಭಿವೃದ್ಧಿಗಾಗಿ ರೂ.9 ಕೋಟಿ 30 ಲಕ್ಷ ಮಾಕುಟ್ಟ ಅಂಬು ಹೋಟೆಲ್ ಬಳಿಯ ಸೇತುವೆ ನಿರ್ಮಾಣಕ್ಕೆ ರೂ.1 ಕೋಟಿ, ಇದೇ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ 55 ಲಕ್ಷ, ಮೋರಿಗಳ ನಿರ್ಮಾಣ ರೂ.30 ಲಕ್ಷ ಹಾಗೂ ಸಮೀಪದ ಬೇತ್ರಿ ಗ್ರಾಮದ ಕಾವೇರಿ ಹೊಳೆ ಸೇತುವೆ ಬಳಿ ಪಕ್ಕದಲ್ಲಿ ಕಿರು ಸೇತುವೆಗೆ ರೂ.75 ಲಕ್ಷದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

Translate »