ಪ್ರಕೃತಿ ವಿಕೋಪದಿಂದ ಕಾಡು  ಪ್ರಾಣಿಗಳೂ ಸಂತ್ರಸ್ತ
ಕೊಡಗು

ಪ್ರಕೃತಿ ವಿಕೋಪದಿಂದ ಕಾಡು ಪ್ರಾಣಿಗಳೂ ಸಂತ್ರಸ್ತ

December 22, 2018

ಮಡಿಕೇರಿ: ಕೊಡಗಿನಲ್ಲಿ ಘಟಿಸಿದ ಪ್ರಕೃತಿ ವಿಕೋಪದಲ್ಲಿ ಮಾನ ವರು ಮಾತ್ರ ಸಂತ್ರಸ್ತರಾಗಿಲ್ಲ. ಬದಲಿಗೆ ವನ್ಯಜೀ ವಿಗಳು ಕೂಡ ತಮ್ಮ ಆವಾಸ ಸ್ಥಾನ ಕಳೆದುಕೊಂಡು ನಿರಾಶ್ರಿತವಾಗಿವೆ. ಅದರಲ್ಲೂ ಕಾಡು ಕುರಿ, ಮುಳ್ಳು ಹಂದಿ ಯಂತಹ ಮೂಕ ಪ್ರಾಣಿಗಳು ಕೂಡ ನೆಲೆ ಕಂಡು ಕೊಳ್ಳಲು ಹೆಣಗಾಡುತ್ತಿವೆ. ಕಾಡು ಕುರಿಯಂತಹ ತೀರಾ ಮೃದು ಹೃದಯದ ಪ್ರಾಣಿಗಳ ಸಂಖ್ಯೆಯಂತು ವಿನಾಶದ ಅಂಚಿಗೆ ಬಂದು ತಲುಪಿದೆ.

ಮಾನವನ ಕಳ್ಳಬೇಟೆ ಮತ್ತು ಪ್ರಕೃತಿ ಯಲ್ಲಾದ ಏರುಪೇರು ಈ ಜೀವ ಸಂಕು ಲದ ಮೇಲೆ ಅಡ್ಡ ಪರಿಣಾಮ ಬೀರಿದೆ. ಅರಣ್ಯ ನಾಶ, ಕಾಡ್ಗಿಚ್ಚು, ಪಕೃತಿ ಮೇಲೆ ಮಾನವನ ಹಸ್ತಕ್ಷೇಪದಿಂದ ಕಾಡು ಕುರಿಯ ಸಂತತಿ ವಿನಾಶದೆಡೆಗೆ ಸಾಗಿದೆ. ಹೀಗಾಗಿ ಈ ಮೂಕ ಮತ್ತು ಸಾಧು ಸ್ವಭಾವದ ಕಾಡು ಕುರಿಗಳು ಕಾಫಿ ತೋಟಗಳಲ್ಲಿ ತಮ್ಮ ಆವಾಸ ಸ್ಥಾನ ಕಂಡು ಕೊಂಡಿದ್ದವು. ಆದರೆ ಪರಿಣಾಮವೆಂಬಂತೆ ಮಾನವನ ಚಪಲದ ಬೇಟೆಗೆ ಈ ಮುಗ್ಧ ಜೀವಿಗಳು ಹೆಚ್ಚಾಗಿ ಬಲಿಯಾಗುತ್ತಿದೆ.

ಹೃದಯಾಘಾತಕ್ಕೆ ಬಲಿ: ವಿಶೇಷವಾಗಿ ಕಾಡು ಪ್ರಾಣಿಗಳ ಪೈಕಿ ಜಿಂಕೆ ಮತ್ತು ಕಾಡು ಕುರಿ ತೀರಾ ಮೃದು ಹೃದಯವನ್ನು ಹೊಂದಿವೆ. ಹೀಗಾಗಿ ಈ 2 ಪ್ರಾಣಿಗಳನ್ನು ಹೃದ ಯಾಘಾತಕ್ಕೆ ಹೆಚ್ಚಾಗಿ ಒಳಗಾಗುವ ಜೀವಿ ಗಳೆಂದು ಪರಿಗಣಿಸಲ್ಪಟ್ಟಿದೆ. ಸಹಜ ವಾಗಿಯೇ ಈ ಗುಣ ಕಾಡುಕುರಿ ಸಂತ ತಿಗಳು ಕ್ಷೀಣಿಸಲು ಒಂದು ಕಾರಣವಾಗಿ ರಬಹುದೆಂದು ವನ್ಯಜೀವಿ ವೈದ್ಯಕೀಯ ಮೂಲಗಳು ಅಭಿಪ್ರಾಯಪಡುತ್ತವೆ. 7 ರಿಂದ 9 ಕೆ.ಜಿ.ಯಷ್ಟು ತೂಗುವ ಈ ಪ್ರಾಣಿ ಗಳ ಆಯುಷ್ಯ 7 ರಿಂದ 9 ವರ್ಷಗಳಿಗೆ ಮಾತ್ರ ಮೀಸಲಿರಬಹುದೆಂದು ಅಂದಾ ಜಿಸಲಾಗಿದೆಯಾದರೂ, ನಿಖರ ಆಯುಷ್ಯ ದಾಖಲಿಲ್ಲ.

ಈ ಜೀವಿಗಳು ಮಾಂಸಹಾರಿ ಪ್ರಾಣಿ ಗಳ ಪಾಲಿಗೆ ಸುಲಭ ಬೇಟೆಯಾಗುವ ಕಾರಣ ಅವುಗಳ ಸಂತತಿ ವಿರಳವಾಗಲು ಕಾರಣ ಎನ್ನಲಾಗುತ್ತಿದೆ. ಪೊದೆಗಳು, ಬೆಟ್ಟ ಸಾಲು ಮತ್ತು ಕಾಫಿ ತೋಟಗಳನ್ನೆ ಈ ಜೀವಿಗಳು ಹೆಚ್ಚಾಗಿ ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಸಸ್ಯಹಾರಿ ಪ್ರಾಣಿಯಾದ ಕಾಡುಕುರಿ ಗರಿಕೆ ಹುಲ್ಲು ಮತ್ತು ಕೆಳಗೆ ಬೀಳುವ ಕಾಡು ಹಣ್ಣುಗಳನ್ನು ಹೆಕ್ಕಿ ತಿನ್ನುವುದು ಅವುಗಳ ಆಹಾರ ಪದ್ದತಿ ಎಂದು ಗುರುತಿಸಲಾಗಿದೆ.

ಕಾಡುಕುರಿ ರಕ್ಷಣೆ: ಪ್ರಕೃತಿ ವಿಕೋ ಪದಿಂದ ಬಹುತೇಕ ನಾಶವಾಗಿರುವ ಮಕ್ಕಂದೂರು ಸಮೀಪದ ಕಾಫಿ ತೋಟದ ಒಳಗೆ ಚರಂಡಿಯಲ್ಲಿ ಸಿಲು ಕಿದ್ದ ಕಾಡುಕುರಿ ಮರಿಯನ್ನು ಎಸ್ಟೇಟ್‍ನ ರೈಟರ್ ವಿಜು ಕಾರ್ಯಪ್ಪ ಎಂಬುವರು ರಕ್ಷಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದರು.
ಡಿ.ಎಫ್.ಓ. ಮಂಜುನಾಥ್ ಕಾಡು ಕುರಿಯನ್ನು ಪರೀಕ್ಷಿಸಿ ಕುಶಾಲನಗರದ ವಲಯ ಅರಣ್ಯ ಅಧಿಕಾರಿಗೆ ಹಸ್ತಾಂ ತರಿಸಿದ್ದಾರೆ. 2 ತಿಂಗಳ ಪ್ರಾಯದ ಕಾಡು ಕುರಿಯನ್ನು ಕುಶಾಲನಗರದ ಜಿಂಕೆ ಉದ್ಯಾನದಲ್ಲಿ ಸಾಕಿ ಸಲುಹುದಾಗಿ ಡಿಎಫ್‍ಓ ಮಂಜುನಾಥ್ ತಿಳಿಸಿದ್ದಾರೆ.

Translate »