ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ
ಮೈಸೂರು

ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

April 12, 2019

ಮೈಸೂರು: ಮೈಸೂ ರಿನ ಮಾನಸಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸಾಧಕರಾದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ವಿಶೇಷ ಪ್ರಾಧ್ಯಾಪಕ ಪ್ರೊ.ಮೇವಾ ಸಿಂಗ್ ಅವ ರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಇದೇ ವೇಳೆ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ ಮಾತ ನಾಡಿ, ಇಂದು ಮೈಸೂರು ವಿವಿ ದೇಶದ ಗಮನವನ್ನು ಸೆಳೆಯಲು ಪ್ರೊ.ಕೆ.ಎಸ್. ರಂಗಪ್ಪ ಕಾರಣರಾಗಿದ್ದಾರೆ. ದೇಶದಲ್ಲಿ ಮೈಸೂರು ವಿವಿ 54ನೇ ಸ್ಥಾನವನ್ನು ಪಡೆದಿದ್ದು, ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ವಿವಿ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ಹೊಸ ಹೊಸ ವಿಧಾನಗಳನ್ನು ತೆಗೆದುಕೊಳ್ಳಬೇಕು. ಅಧ್ಯಾ ಪಕರ ನೇಮಕಾತಿಯ ವೇಳೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾನ್ಯ ಉಪನ್ಯಾಸಕರಾಗಿ ಬಂದ ಪ್ರೊ.ಹೇಮಂತಕುಮಾರ್ ಇಂದು ವಿವಿಯ ಕುಲಪತಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಕಾರ್ಯವೈಖರಿ ಮತ್ತು ಪರಿಶ್ರಮ ವಾಗಿದೆ. ಪ್ರಾಧ್ಯಾಪಕ ವೃತ್ತಿಯ ಜತೆಗೆ ಆಡ ಳಿತ ಅಪಾರ ಅನುಭವವನ್ನು ಹೊಂದಿ ರುವ ಅವರು ಮೈಸೂರು ವಿವಿಯನ್ನು ದೇಶದ ಪ್ರಥಮ ಸ್ಥಾನದಲ್ಲಿ ನಿಲ್ಲುವ ಕೆಲಸ ವನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ಶೈಕ್ಷಣಿಕ ವೃತ್ತಿಯೊಂದಿಗೆ ವಿವಿ ನೀಡಿದ ಜವಾಬ್ದಾರಿಯನ್ನು ಪ್ರೊ.ಹೇಮಂತ ಕುಮಾರ್ ಅವರು ಯಶಸ್ವಿಯಾಗಿ ನಿರ್ವ ಹಿಸಿದ್ದಾರೆ. ಅದರಂತೆ ಪ್ರೊ.ರಂಗಪ್ಪ ಅವ ರದು ಮೈಸೂರು ವಿವಿಗೆ ಅದ್ಭುತ ಕೊಡುಗೆ ಯಾಗಿದೆ. ವಿವಿಯ ಅಭಿವೃದ್ಧಿಯ ಕಡೆ ಎಲ್ಲಾ ಸಿಬ್ಬಂದಿ ಕೈಜೋಡಿಸಬೇಕು. ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ವಿವಿಯ ಘನತೆ ಯನ್ನು ಎತ್ತಿಹಿಡಿಯಬೇಕಿದೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಮಾತನಾಡಿ, ವಿವಿಯ ಅಭಿವೃದ್ಧಿಯಲ್ಲಿ ಎಲ್ಲಾ ಅಧ್ಯಾಪಕರು ಕೈಜೋ ಡಿಸಿದರೆ ಬಹುಶಃ ಪ್ರಪಂಚದಲ್ಲೇ ಮೈವಿವಿ ಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯ ಬಹುದು. ಒಳ್ಳೆಯರಾಗುವುದರ ಜತೆಗೆ ಒಳ್ಳೆಯ ಕೆಲಸವನ್ನು ಮಾಡಬೇಕು. ವಿವಿಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕಿದೆ. ಮೈಸೂರು ವಿವಿ ಕುಲ ಸಚಿವ ಪ್ರೊ.ಲಿಂಗರಾಜ ಗಾಂಧಿ, ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ, ಉಪಾ ಧ್ಯಕ್ಷೆ ಪ್ರೊ.ಹೆಚ್.ಎಂ.ವಸಂತಮ್ಮ, ಕಾರ್ಯ ದರ್ಶಿ ಪ್ರೊ.ಎಸ್.ಉಮೇಶ್ ಇದ್ದರು.

Translate »