ವಿದೇಶಯಾನಕ್ಕೆ 2000 ಕೋಟಿ ಖರ್ಚು ಮಾಡಿದ್ದೇ ನರೇಂದ್ರ ಮೋದಿ ಸಾಧನೆ
ಮೈಸೂರು

ವಿದೇಶಯಾನಕ್ಕೆ 2000 ಕೋಟಿ ಖರ್ಚು ಮಾಡಿದ್ದೇ ನರೇಂದ್ರ ಮೋದಿ ಸಾಧನೆ

April 12, 2019

ಮೈಸೂರು: ಐದು ವರ್ಷದ ಆಡಳಿತದಲ್ಲಿ 2,000 ಕೋಟಿ ರೂ. ವಿದೇಶಯಾನಕ್ಕೆ ಖರ್ಚು ಮಾಡಿದ್ದೇ ಪ್ರಧಾನಿ ಮೋದಿ ಮಾಡಿರುವ ಬಹು ದೊಡ್ಡ ಸಾಧನೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಲೇವಡಿ ಮಾಡಿದರು.

ಮೋದಿ ಐದು ವರ್ಷದ ಅವಧಿಯಲ್ಲಿ 19 ದಿನ ಸದನದಲ್ಲಿ ಕೂತಿದ್ದಾರೆ. ಉಳಿದ ದಿನವೆಲ್ಲಾ ವಿದೇಶಕ್ಕೆ ಓಡಾಡಿದ್ದಾರೆ. ಹಸಿ ಸುಳ್ಳಿನ ಸರದಾರ, ಮಾತಿನ ಮೋಡಿಯ ಮೋದಿ ನೀಡಿದ ಸುಳ್ಳು ಉದ್ಯೋಗದ ಭರವಸೆ, ಕಪ್ಪು ಹಣ ತಂದು 15 ಲಕ್ಷ ರೂ. ಜನರ ಖಾತೆಗೆ ಹಾಕುವುದಾಗಿ ಹೇಳಿ ದ್ದರು. ಹಾಕಿದರೇ? ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಓಟಿಗಾಗಿ ಡ್ರಾಮಾ, ಜನರಿಗೆ ನಾಮ ಹಾಕುವ ಮೋದಿ ಶ್ರೀಮಂತರ ಸಾಲಮನ್ನಾ ಮಾಡಿ, ರೈತರ ಸಾಲಮನ್ನಾ ಮಾಡಲಿಲ್ಲ. ಶ್ರೀಮಂತರಿಗೆ ಸಿಹಿ, ಬಡವರಿಗೆ ಕಹಿ ನೀಡಿ ದವರು ಎಂದು ಟೀಕಿಸಿದರು. ಪೆಟ್ರೋಲ್ ತೆರಿಗೆಯಲ್ಲಿ ಬಂದ 11,000 ಕೋಟಿ ಹಣ ಎಲ್ಲಿ ಹೋಯಿತು? ಎಂದೂ ಪ್ರಶ್ನಿಸಿದರು. ಯಾವ ಸಾಧನೆಯನ್ನೂ ಮಾಡದ ನರೇಂದ್ರ ಮೋದಿ, ತಮ್ಮ ಸಾಧನೆಗಳಿದ್ದರೆ ಹೇಳುವು ದನ್ನು ಬಿಟ್ಟು, ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ಸಾಧನೆ ಜನರ ಮುಂದಿದೆ. ಜನರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್. ಮಧ್ಯಾಹ್ನದ ಬಿಸಿಯೂಟ ತಂದಿದ್ದು ಯಾರು? ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ತಂದವರು ಯಾರು? ಬಡತನ ಪ್ರಮಾಣ 2.2ಕ್ಕೆ ಇಳಿಸಿದ್ದು ಯಾರು? ಇಸ್ರೋ ಸ್ಥಾಪಿಸಿದ್ದು ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಮೋದಿ ಮುಂದಿಟ್ಟರು.

ಕಾಂಗ್ರೆಸ್ ಸರ್ಕಾರದ ನಿರ್ಮಲ ಭಾರತ್ ಕಾರ್ಯಕ್ರಮವನ್ನು ಸ್ವಚ್ಛ ಭಾರತ್ ಎಂದು ಮಾಡಿದ್ದೀರಿ. ಈ ಹಿಂದೆ ಇದ್ದ ಜನೌ ಷಧಿಯನ್ನು ಪ್ರಧಾನಮಂತ್ರಿ ಜನೌಷಧಿ ಎಂದು ಕರೆದಿದ್ದೀರಿ. ಐದು ವರ್ಷ ಅಧಿ ಕಾರದಲ್ಲಿದ್ದಾಗ ಸುಮ್ಮನಿದ್ದು ರಾಮಂದಿರ ನಿರ್ಮಾಣ ವಿಚಾರವನ್ನು ಈಗೇಕೆ ತಂದಿರಿ? ತಮ್ಮ ಅಧಿಕಾರ ಅವಧಿಯಲ್ಲಿ ಎಷ್ಟು ಪತ್ರಿಕಾ ಗೋಷ್ಠಿ ನಡೆಸಿದ್ದೀರಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸರ್ಕಾರ ಪ್ರಣಾಳಿಕೆ ಯಲ್ಲಿ ತಿಳಿಸಿದಂತೆ ಮಾಡಿದ್ದಾರೆ. ಇದು ಸುಳ್ಳಾಗಲು ಸಾಧ್ಯವೇ ಇಲ್ಲ ಎಂದ ಅವರು, ಸಂಸದ ಪ್ರತಾಪಸಿಂಹರದ್ದು ಹಿಡಿತವಿಲ್ಲದ ನಾಲಿಗೆ, ದುರಹಂಕಾರದ ವ್ಯಕ್ತಿ ಎಂದು ಜರಿದರು.

ಬಿಜೆಪಿ ಹಿಡನ್ ಅಜೆಂಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಇಂದು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಬಂದಿದೆ. ಪ್ರಜಾಪ್ರಭುತ್ವದ ಅಳಿವು-ಉಳಿವಿನ ಆತಂಕ ಎದುರಾಗಿದೆ. ಸಂವಿಧಾನವನ್ನೇ ಬದಲಿಸುವ ಮಾತ ನಾಡುತ್ತಿದ್ದಾರೆ. ಸಂವಿಧಾನವನ್ನು ನಾಶ ಮಾಡಿ ಪರ್ಯಾಯವಾಗಿ ಮನುಧರ್ಮ ಶಾಸ್ತ್ರವನ್ನು ಅನುಷ್ಠಾನಕ್ಕೆ ತರುವುದು ಅವರ ಹಿಡನ್ ಅಜೆಂಡಾ ಆಗಿದೆ. ಇದು ದೇಶದ್ರೋಹಿ ಕೃತ್ಯ, ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಕೋಮುವಾದಿ ಸರ್ಕಾರ ಮತ್ತೆ ಅಧಿ ಕಾರಕ್ಕೆ ಬಂದರೆ ಪ್ರಜಾತಂತ್ರ ಹೋಗಿ ಸರ್ವಾಧಿಕಾರ ತಾಂಡವವಾಡುತ್ತದೆ. ಈ ಬಗ್ಗೆ ಮತದಾರರು ಎಚ್ಚೆತ್ತು ಕೊಳ್ಳಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೇ ಪ್ರಜಾಪ್ರಭುತ್ವ, ಸಂವಿಧಾನವನ್ನು ಸಂರಕ್ಷಿಸ ಬೇಕಾಗಿದೆ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಗತಿಪರರಾದ ಹಿ.ಶಿ. ರಾಮಚಂದ್ರೇಗೌಡ, ಪ್ರೊ.ರುದ್ರಪ್ಪ ಹನ ಗೋಡು, ಪ್ರೊ.ಕೆ.ಎಂ. ಜಯರಾಮಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಅರ್ಕೇಶ್ ಇತರರು ಉಪಸ್ಥಿತರಿದ್ದರು.

Translate »