ಮೈಸೂರಲ್ಲಿ ವಿನೂತನ ರೀತಿ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿ
ಮೈಸೂರು

ಮೈಸೂರಲ್ಲಿ ವಿನೂತನ ರೀತಿ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿ

April 12, 2019

ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಿ, ಅವರಲ್ಲಿ ಸಂಚಾರ ನಿಯಮ ಅರಿವು ಮೂಡಿಸಲು ಮೈಸೂರು ಪೊಲೀ ಸರು ಹೊಸ ವಿಧಾನ ಆರಂಭಿಸಿದ್ದಾರೆ.

ಮೈಸೂರಿನ 52 ಸರ್ಕಲ್‍ಗಳು ಹಾಗೂ ಸಿಗ್ನಲ್ ಲೈಟ್ ಜಂಕ್ಷನ್‍ಗಳಲ್ಲಿ ಸ್ಪೀಕರ್ ಅಳವಡಿಸಿ ವೈರ್‍ಲೆಸ್ ಮೈಕ್ ಮೂಲಕ ಅರಿವು ಮೂಡಿಸಲು ಸಂಚಾರ ಪೊಲೀ ಸರು ಪಬ್ಲಿಕ್ ಅಡ್ರೆಸ್ ಸಿಸ್ಟಂ ಅನ್ನು ಜಾರಿ ಗೊಳಿಸಿದ್ದಾರೆ. `ನಿಮ್ಮ ಒಳಿತಿಗಾಗಿ ನಾವು’ (We Care for You) ಎಂಬ ಘೋಷದೊಂದಿಗೆ ಸಂಚಾರ ನಿಯಮ ವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಗರ ಪೊಲೀಸ್ ಕಮಿಷ್ನರ್ ಕೆ.ಟಿ.ಬಾಲಕೃಷ್ಣ ಅವರ ನಿರ್ದೇಶನದಂತೆ ಸಂಚಾರ ಎಸಿಪಿ ಜಿ.ಎನ್.ಮೋಹನ್ ನೂತನ ತಂತ್ರಜ್ಞಾನ ದೊಂದಿಗೆ ಹೊಸ ವಿಧಾನವನ್ನು ಜಾರಿ ಗೊಳಿಸುತ್ತಿದ್ದಾರೆ. ಮೊದಲು ಹಾರ್ಡಿಂಜ್ ಸರ್ಕಲ್ ಹಾಗೂ ಎಂಆರ್‍ಸಿ ಬಳಿಯ ಸರ್ಕಲ್‍ಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದರಿಂದ ಜನರಿಗೆ ಅನುಕೂಲವಾಗಿದ್ದು, ತಾವು ಮಾಡುವ ತಪ್ಪನ್ನು ತಿದ್ದಿಕೊಳ್ಳಲಾ ರಂಭಿಸಿದಾಗ ಮೈಸೂ ರಿನ ಉಳಿದೆಲ್ಲಾ ಸರ್ಕಲ್‍ಗಳಿಗೂ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಜಿ.ಎನ್. ಮೋಹನ್ `ಮೈಸೂರು ಮಿತ್ರ’ ನಿಗೆ ತಿಳಿಸಿದರು.

ಅರಮನೆ ಉತ್ತರ ಭಾಗದ ಸರ್ಕಲ್, ಕೆ.ಆರ್.ಸರ್ಕಲ್, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಜೆ.ಕೆ.ಗ್ರೌಂಡ್, ದಾಸಪ್ಪ ಸರ್ಕಲ್ ಸೇರಿದಂತೆ ಹಲವು ಜಂಕ್ಷನ್ ಗಳಲ್ಲಿ ಪಬ್ಲಿಕ್ ಅಡ್ರಸ್ ಸಿಸ್ಟಂ ಅನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ಪಾದಚಾರಿ ಮಾರ್ಕ್ ಮೇಲೆ ವಾಹನ ನಿಲ್ಲಿಸುವುದು ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದರೆ ಸರ್ಕಲ್‍ನಲ್ಲಿ ರುವ ಸಂಚಾರ ಪೊಲೀಸರು ವೈರ್‍ಲೆಸ್ ಮೈಕ್ ಮೂಲಕ ಪ್ರಕಟಿಸುತ್ತಾರೆ. ಸಿಗ್ನಲ್ ನಲ್ಲಿ ನಿಂತಿರುವವರಿಗೆಲ್ಲಾ ತಿಳಿದು ಮುಂದಿನ ಸರ್ಕಲ್‍ನಲ್ಲಿ ತಪ್ಪನ್ನು ಸರಿಪಡಿಸಿಕೊಳ್ಳು ತ್ತಾರೆ ಎಂಬುದು ಈ ಪದ್ಧತಿಯ ಉದ್ದೇಶ ವಾಗಿದೆ ಎಂದು ಮೋಹನ್ ತಿಳಿಸಿದರು.

ಪ್ರತೀ ಸರ್ಕಲ್‍ಗಳಲ್ಳೂ ಸ್ಪೀಕರ್ ಅಳ ವಡಿಸಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರು ಅಥವಾ ಹೋಂಗಾರ್ಡ್ ಗಳು ಅನೌನ್ಸ್ ಮಾಡಲು ತರಬೇತಿ ನೀಡ ಲಾಗಿದೆ. ಇನ್ನೊಂದು ವಾರದೊಳಗಾಗಿ ಮೈಸೂರಿನ ಎಲ್ಲಾ 52 ಸರ್ಕಲ್‍ಗಳಲ್ಲೂ ಸ್ಪೀಕರ್ ಅಳವಡಿಸುವ ಕೆಲಸ ಪೂರ್ಣ ಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ವಾಸ್ತವವಾಗಿ ಈ ವ್ಯವಸ್ಥೆ ಜಾರಿಗೆ ವರ್ಷದ ಹಿಂದೆಯೇ ಹಣ ಬಿಡುಗಡೆ ಯಾಗಿತ್ತು. ಆದರೆ ಕಾರ್ಯಾನುಷ್ಠಾನ ಗೊಳ್ಳುವುದು ಸ್ವಲ್ಪ ತಡವಾಗಿದೆ.

Translate »