ಬಿಬಿಎಂಪಿಯಲ್ಲಿ ನೂರಾರು ಕೋಟಿಯ ಬೃಹತ್ ಭ್ರಷ್ಟಾಚಾರ: 254 ಇಂಜಿನಿಯರ್ಸ್‍ಗೆ ಹಿಂಬಡ್ತಿ ಆತಂಕ
ಮೈಸೂರು

ಬಿಬಿಎಂಪಿಯಲ್ಲಿ ನೂರಾರು ಕೋಟಿಯ ಬೃಹತ್ ಭ್ರಷ್ಟಾಚಾರ: 254 ಇಂಜಿನಿಯರ್ಸ್‍ಗೆ ಹಿಂಬಡ್ತಿ ಆತಂಕ

November 24, 2019

ಮೈಸೂರು,ನ.23-ಬೆಂಗಳೂರು ಬೃಹತ್ ನಗರಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ದಶಕದ ಹಿಂದೆ ನಡೆದಿದ್ದ ಕಾಮಗಾರಿ ಸಂಬಂಧಿತ ನೂರಾರು ಕೋಟಿ ರೂ. ಭ್ರಷ್ಟಾಚಾರ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಇದರಲ್ಲಿ ಭಾಗಿಯಾಗಿ ರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರ ಆದೇಶಿ ಸಿದೆ. ಈ ಮೂಲಕ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲೂ ಕೇಳಿಬರುತ್ತಿರುವ ಅಕ್ರಮ ಆರೋಪಕ್ಕೂ ತಾರ್ಕಿಕ ಅಂತ್ಯ ಸಿಗಬಹುದೆಂಬ ನಿರೀಕ್ಷೆ ಗಟ್ಟಿಯಾದಂತಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಮಲ್ಲೇಶ್ವರ, ರಾಜ ರಾಜೇಶ್ವರಿನಗರ ಹಾಗೂ ಗಾಂಧಿನಗರ ಕ್ಷೇತ್ರದಲ್ಲಿ 2008ರಿಂದ 2012ರ ನಡುವೆ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿರುವ ಪ್ರಕರಣ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್‍ದಾಸ್ ನೇತೃ ತ್ವದ ಸಮಿತಿ ನೀಡಿದ್ದ ವರದಿಯನ್ವಯ ಕ್ರಮ ಕೈಗೊಳ್ಳುವಂತೆ ಮೈಸೂರಿನ ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಅಧ್ಯಕ್ಷತೆಯ ವಿಧಾನಮಂಡಲ ಅಧೀನ ಶಾಸನ ರಚನಾ ಸಮಿತಿ ಶಿಫಾ ರಸ್ಸು ಮಾಡಿದ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಸರ್ಕಾರ ಆದೇಶಿಸಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ವಿವಿಧ ಇಲಾಖೆ ಅಧಿಕಾರಿಗಳನ್ನು ತಕ್ಷಣ ಮಾತೃ ಇಲಾಖೆಗೆ ವರ್ಗಾವಣೆ ಮಾಡಿ, ಅವರಿಗೆ ಮುಂಬಡ್ತಿ ನೀಡಿದ್ದರೆ ಅದನ್ನು ಹಿಂಪಡೆದು, ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ನಿಯೋಜಿ ಸಬೇಕು. 254 ಇಂಜಿನಿಯರ್‍ಗಳನ್ನು ತಪ್ಪಿ ತಸ್ಥರೆಂದು ಚಾರ್ಜ್ ಶೀಟ್ ದಾಖಲಿಸಿ, ಮಾತೃ ಇಲಾಖೆಗೆ ವರ್ಗಾಯಿಸಬೇಕು. ಎಲ್ಲಾ ಅಧಿಕಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸಬೇಕು. ನಿವೃತ್ತಿಯಾಗಿದ್ದರೆ ಅಂತಹವರ ನಿವೃತ್ತಿ ವೇತನವನ್ನು ತಡೆ ಹಿಡಿಯಬೇಕು. 95 ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಅಳವಡಿಸಿರುವ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳು ವಂತೆ ಸರ್ಕಾರ ಖಡಕ್ ಆದೇಶ ನೀಡಿದೆ. ಸದ್ಯ 254 ಇಂಜಿನಿಯರ್‍ಗಳು ಹಿಂಬಡ್ತಿ ಆತಂಕದಲ್ಲಿದ್ದಾರೆ. ಈಗಾಗಲೇ ಕಾಮಗಾ ರಿಗಳಲ್ಲಿ ಅಕ್ರಮ ಎಸಗಿರುವ ಆರೋಪ ದಡಿ ಬಿಬಿಎಂಪಿ 25 ಇಂಜಿನಿಯರ್ ಗಳನ್ನು ಮಾತೃ ಇಲಾಖೆಗೆ ವಾಪಸು ಕಳು ಹಿಸಿದೆ. 32 ಗುತ್ತಿಗೆದಾರರ ಕಪ್ಪುಪಟ್ಟಿಗೆ ಸೇರಿಸಿ, ವರದಿಯಂತೆ ವಸೂಲಿ ಮಾಡ ಬೇಕಿರುವ 676 ಕೋಟಿ ರೂ.ಗಳಲ್ಲಿ 350 ಕೋಟಿ ರೂ.ಗಳನ್ನು ವಸೂಲಿ ಮಾಡ ಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ದಶಕದಿಂದ ನೆನೆಗುದಿಯಲ್ಲಿತ್ತು: ಬಿಬಿ ಎಂಪಿ ವ್ಯಾಪ್ತಿಯ ಮಲ್ಲೇಶ್ವರ, ರಾಜ ರಾಜೇ ಶ್ವರಿನಗರ ಹಾಗೂ ಗಾಂಧಿನಗರ ಕ್ಷೇತ್ರದ 198 ವಾರ್ಡ್‍ಗಳ ಕಾಮಗಾರಿಗಳಲ್ಲಿ ನಡೆದಿ ರುವ ಭ್ರಷ್ಟಾಚಾರದ ಬಗ್ಗೆ ಪರಿಶೀಲನೆಯನ್ನು ಮೊದಲಿಗೆ ಆಡಿಟ್ ಕಮಿಟಿಗೆ ವಹಿಸಲಾ ಗಿತ್ತು. ಆದರೆ ಅಧಿಕಾರಿಗಳು ಸೂಕ್ತ ದಾಖಲೆ ಗಳನ್ನೇ ಒದಗಿಸದೆ ಅಸಹಕಾರ ತೋರಿದರು. ನಂತರ ಲೋಕಾಯುಕ್ತದಲ್ಲೂ ತನಿಖೆ ನಡೆದು, ನಿವೃತ್ತ ಐಎಎಸ್ ಅಧಿಕಾರಿ ಕಠಾ ರಿಯಾ ನೇತೃತ್ವದ ಸಮಿತಿಗೆ ವಹಿಸಲಾ ಯಿತು. ಸುಮಾರು 10 ಸಾವಿರ ಸೈನ್ ಬೋರ್ಡ್ ಗಳನ್ನು ಅನಧಿಕೃತವಾಗಿ ಅಳವಡಿಸಿದ್ದು, ಇದರಿಂದ ಸಾವಿರ ಕೋಟಿ ರೂ. ನಷ್ಟವಾ ಗಿದೆ. ಕಸ ವಿಲೇವಾರಿ, ಖಾತೆ ಮಾಡು ವಲ್ಲಿ ಅಕ್ರಮ ನಡೆದಿದೆ, ಕಾಮಗಾರಿಗಳಲ್ಲೂ ಸಾಕಷ್ಟು ನ್ಯೂನತೆಗಳಿವೆ ಎಂದು ಆ ಸಮಿತಿ ವರದಿ ನೀಡಿತ್ತು. ನಂತರದಲ್ಲಿ ಸಮಗ್ರ ತನಿಖೆಗಾಗಿ ಸಿಐಡಿಗೆ ಪ್ರಕರಣ ವಹಿಸಿದ್ದ ರಿಂದ 76 ಕಡತಗಳ ವಿಚಾರಣೆ ನಡೆಸಿ, 44 ಅಧಿಕಾರಿಗಳು ಸೇರಿದಂತೆ ಹಲವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ವರದಿ ನೀಡಲಾಗಿತ್ತು. ಬಳಿಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್ ದಾಸ್ ನೇತೃತ್ವದ 5 ಸದಸ್ಯರ ಸಮಿತಿ ರಚಿಸಲಾಗಿತ್ತು. ಅಧಿಕಾರಿಗಳ ಅಸಹಕಾ ರದ ನಡುವೆಯೂ 2 ವರ್ಷಗಳ ಕಾಲ ಸುದೀರ್ಘ ತನಿಖೆ ನಡೆಸಿ, ಕಾಮಗಾರಿ ಅಳತೆ ಪುಸ್ತಕ, ಅಂದಾಜು ಮೊತ್ತ, ಕಾರ್ಯಾ ದೇಶ, ಬಿಲ್ ಬಿಡುಗಡೆಗೆ ಇನ್ನಿ ತರ ಕಾರ್ಯ ಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸಿತ್ತು. ಆದರೆ ಇಷ್ಟೆಲ್ಲಾ ತನಿಖೆ ನಡೆದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

15 ಶಾಸಕರು ಹಾಗೂ 5 ಮಂದಿ ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿ ತಿಯ ಈ ಹಿಂದಿನ 2 ಸಮಿತಿಗಳಿಗೂ ಅಧಿಕಾರಿಗಳು ಸಹಕರಿಸಿರಲಿಲ್ಲ. ಆದರೆ 2 ತಿಂಗಳ ಹಿಂದೆ ರಚನೆಯಾದ ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆಯ ಸಮಿತಿ, ಹಳೆಯ ಕಡತಗಳ ವಿಲೇವಾರಿಗೆ ಮುಂದಾ ಯಿತು. ಅದರಲ್ಲಿ ಅತೀಹೆಚ್ಚು ಭ್ರಷ್ಟಾಚಾರ ನಡೆದಿರುವ ಬಿಬಿಎಂಪಿ ಕಾಮಗಾರಿ ಪ್ರಕ ರಣಕ್ಕೆ ಆದ್ಯತೆ ನೀಡಿ, ನಾಗಮೋಹನ್ ದಾಸ್ ಸಮಿತಿ ಹಾಗೂ ಸಿಐಡಿ ವರದಿ ಯನ್ನು ಸಮಗ್ರವಾಗ ಕ್ರೋಢೀಕರಿಸಿ, ಕ್ರಮಕ್ಕೆ ಮುಂದಾಯಿತು. ಬೆಂಕಿ ಅವಘಡದಲ್ಲಿ ದಾಖಲೆಗಳು ನಾಶವಾಗಿವೆ ಎಂದು ಬಚಾವಾ ಗಲು ಯತ್ನಿಸಿದ್ದರು. ಆದರೆ ಅವಘಡದಲ್ಲಿ ಸದರಿ ಕಡತಗಳು ನಾಶವಾಗಿಲ್ಲ ಎಂಬು ದನ್ನು ದೃಢೀಕರಿಸಿದ್ದ ಸಿಐಡಿ ಬಿ ರಿಪೋರ್ಟ್ ಸಂಗ್ರಹಿಸಿದ್ದ ಸಮಿತಿ, ಬಿಬಿಎಂಪಿಯಲ್ಲೇ ಸಭೆ ನಡೆಸಿ, ಮಾಹಿತಿ ಕಲೆ ಹಾಕಿತ್ತು. ಸರ್ಕಾ ರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳ ಸಹಕಾರದೊಂದಿಗೆ ಅಧೀನ ಶಾಸನ ರಚನಾ ಸಮಿತಿ ಕಳೆದ 5 ವಾರಗಳಲ್ಲೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಸರ್ಕಾರಕ್ಕೆ ಶಿಫಾರಸ್ಸು ಮಾಡಿತು ಎಂದು ಮೂಲಗಳು ತಿಳಿಸಿವೆ.

Translate »