ಸ್ತ್ರೀವಾದ ಚಿಂತನೆ ಮತ್ತು ಹೋರಾಟ ಕೃತಿ ಬಿಡುಗಡೆ
ಮೈಸೂರು

ಸ್ತ್ರೀವಾದ ಚಿಂತನೆ ಮತ್ತು ಹೋರಾಟ ಕೃತಿ ಬಿಡುಗಡೆ

November 25, 2019

ಮೈಸೂರು,ನ.24(ಎಂಟಿವೈ)- ಸ್ತ್ರೀವಾದ ಶಸ್ತ್ರಾಸ್ತ್ರ ಯುದ್ಧವಲ್ಲ. ಶಾಂತಿ, ಕರುಣೆ ಯಿಂದ ರೂಪುಗೊಂಡಿರುವ ಹೋರಾಟ. ಸಮಾಜದಲ್ಲಾಗುವ ಎಲ್ಲಾ ಬೆಳವಣಿಗೆ ಯನ್ನು ನಿರ್ಣಯಿಸುವ ಅರ್ಹತೆಯಲ್ಲಿ ಮಹಿಳೆಯರಿಗೂ ಪಾಲು ಸಿಗುವವರೆಗೂ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಡಾ.ವಿಜಯಮ್ಮ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಅಭಿರುಚಿ ಪ್ರಕಾಶನ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಭಾನುವಾರ ನಡೆದ ಶ್ರೀಮತಿ ಎಚ್.ಎಸ್. ಅವರ `ಸ್ತ್ರೀವಾದ ಚಿಂತನೆ ಮತ್ತು ಹೋರಾಟ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪಿತೃ ಪ್ರಧಾನವಾಗಿರುವ ನಮ್ಮ ಸಮಾಜದ ವ್ಯವಸ್ಥೆ ಮಹಿಳೆಯನ್ನು ಸರಿ ಯಾದ ರೀತಿಯಲ್ಲಿ ವ್ಯಾಖ್ಯಾನಿಸಿಲ್ಲ. ಅದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಳ್ಳುವುದರೊಂದಿಗೆ ಸಮಾಜ ಸೃಷ್ಟಿಸಿ ರುವ ಸ್ತ್ರೀವಿರೋಧಿ ನಿಲುವನ್ನು ಪ್ರಶ್ನಿ ಸುವ, ಕಟುವಾಗಿ ಟೀಕಿಸುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಪುರುಷ ಪ್ರಧಾನ ವ್ಯವಸ್ಥೆಯ ಮನಸ್ಸು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದರೂ ಅದನ್ನು ಸರಿದಾರಿಗೆ ತರುವ ಗುಣ ಮುಖ್ಯ. ಇತ್ತೀ ಚಿನ ದಿನಗಳಲ್ಲಿ ಅನೇಕ ಪುರುಷರಿಗೆ ಸ್ತ್ರೀವಾದ ಅರ್ಥ ಆಗುತ್ತಿದೆ. ಇಂತಹ ವಾತಾವರಣ ಇರುವಾಗಲೇ ಪುರುಷರ ಪ್ರಜ್ಞೆಯ ಆಳಕ್ಕೆ ಸ್ತ್ರೀವಾದ ತಲುಪುವಂತೆ ನೋಡಿಕೊಳ್ಳ ಬೇಕು. ಮಹಿಳೆಯರಿಗೆ ಅವಕಾಶ ನೀಡಿ ದರೂ ಸಮರ್ಥವಾಗಿ ನಿರ್ವಹಿಸುವುದಿಲ್ಲ ಎಂಬ ಆರೋಪ ರಾಜಕೀಯ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಮನೆ, ಹೊಲ-ಗದ್ದೆಯಲ್ಲಿ ಕೆಲಸ ಮಾಡುವ ಹೆಣ್ಣನ್ನು ಚುನಾವಣೆ ಯಲ್ಲಿ ಗೆಲ್ಲಿಸಿ ಕೆಲಸ ಮಾಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಯಾವುದೇ ಕ್ಷೇತ್ರದಲ್ಲಾದರೂ ಮಹಿಳೆಯರು ಕೆಲಸ ಮಾಡುವಂತೆ ಪ್ರೇರೇಪಣೆ ನೀಡುವ ಮನ ಸ್ಥಿತಿ ಬೆಳೆಸುವುದು ಅಗತ್ಯ ಎಂದರು.

ಮಹಿಳೆಯರು ಗಂಡಸರಿಗಿಂತ ಒಳ್ಳೆಯ ವರೂ ಅಲ್ಲ, ಕೆಟ್ಟವರೂ ಅಲ್ಲ. ಹೆಣ್ಣಿನ ಮೇಲೆ ಒಳ್ಳೆಯತನವನ್ನು ಹೇರಲಾಗಿದೆ. ಅದು ನಮ್ಮ ತಲೆ ಮೇಲೆ ಶಿಲುಬೆಯಂತೆ ಕುಳಿತಿದೆ. ಅದರಿಂದ ನಾವು ಬಿಡುಗಡೆ ಪಡೆಯಬೇಕು. ನಾವೂ ಅವರಂತೆ ಮನುಷ್ಯರು. ಪರಸ್ಪರರು ಮನುಷ್ಯರಾಗಿ ಜತೆಯಲ್ಲಿ ಇರುವುದಕ್ಕೆ ನಾವು ಪಣ ತೊಡಬೇಕು ಎಂದರು.

ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಡಾ.ಸವಿತಾ ಬನ್ನಾಡಿ ಮಾತನಾಡಿ, ಸಮಾಜದಲ್ಲಿ ಸ್ತ್ರೀವಾದ ಕುರಿ ತಂತೆ ಪೂರ್ವಾಗ್ರಹ ಪೀಡಿತರಾಗಿರುವ ಮನಸ್ಥಿತಿಗಳ ಸಂಖ್ಯೆ ಹೆಚ್ಚಾಗಿದೆ. ಸ್ತ್ರೀಯರೇ ಸ್ತ್ರೀ ಪ್ರಜ್ಞೆಯನ್ನು ವಿಸ್ಮøತಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ತ್ರೀವಾದ ವನ್ನು ಮಹಿಳೆಯರು ಇನ್ನಷ್ಟು ಗಟ್ಟಿಗೊಳಿಸ ಬೇಕು. ಶ್ರೀಮತಿ ಹೆಚ್.ಎಸ್. ಅವರಂತೆ ತಜ್ಞತೆ ದಾಖಲಿಸಲು ಬರೆಯುತ್ತಿಲ್ಲ. ಹೆಣ್ಣು ಮತ್ತು ಗಂಡಿನ ಸಂಬಂಧಗಳಲ್ಲಿ ಆವರಿಸಿ ರುವ ಸಿಕ್ಕು(ಗಂಟು)ಗಳನ್ನು ಬಿಡಿಸಿಕೊಂಡು ಬೆರೆಯಲು ಬೇಕಿರುವ ಹದಕ್ಕಾಗಿ ಬರೆಯು ತ್ತಿದ್ದಾರೆ. ಈ ಕಾರಣದಿಂದಲೇ ಸ್ತ್ರೀವಾದದ ಮೇಲೆ ನಮಗೆ ನಂಬಿಕೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ವಹಿಸಿದ್ದರು. ಸಮತಾ ಅಧ್ಯಯನ ಕೇಂದ್ರದ ಚಂದ್ರಮತಿ ಸೋಂದಾ, ಪ್ರಕಾಶಕ ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

Translate »