ಹುಣಸೂರು: ಇಂದು ಮಧ್ಯಾಹ್ನ ಹುಣಸೂರು ನಗರಸಭೆಯ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಅಧ್ಯಕ್ಷ ಹೆಚ್.ವೈ.ಮಹದೇವ್ 27.32 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ಮೂಲ ಭೂತ ಸೌಕರ್ಯ, ಕುಡಿಯುವ ನೀರು ಹಾಗೂ ಸ್ಮಶಾನ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಕಾಯ್ದಿರಿಸುವ 27.32 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸುತ್ತಿರುವುದಾಗಿ ಹೇಳಿದರು. 2019-20ನೇ ಸಾಲಿಗೆ ಎಲ್ಲ ಮೂಲಗಳಿಂದ 32,52,03,490 ರೂ. ಅದಾಯ ನಿರೀಕ್ಷಿಸಿದ್ದು, ಅದೇ ರೀತಿ 32, 24,71,700 ರೂ. ವೆಚ್ಚ ಪ್ರಸ್ತಾಪಿಸಲಾಗಿದೆ. ನಗರ ಸಭೆ ಕಚೇರಿಯಲ್ಲೇ ಪ್ರತ್ಯೇಕ ಬ್ಯಾಂಕ್ ಕೌಂಟರ್ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ಕಚೇರಿಯಲ್ಲಿ ಎಲ್ಲಾ ನೌಕರರು ಮತ್ತು ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಆರೋಗ್ಯ ಶಿಬಿರ, ಒತ್ತಡದ ಸಮಯದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡಲು ಅದ್ಯತೆ ನೀಡ ಲಾಗುವುದು ಎಂದರು.
ಸಾರ್ವಜನಿಕರು ಕುಳಿತಲ್ಲೇ ಸಂಬಂಧ ಪಟ್ಟ ಅಧಿಕಾರಿ, ಸಿಬ್ಬಂದಿ ಹಾಗೂ ಅಧ್ಯಕ್ಷರಿಗೆ ನೇರವಾಗಿ ವಾಟ್ಸಾಪ್ ಮುಖಾಂತರ ದೂರು ಸಲ್ಲಿಸಬಹುದು. ಅದಕ್ಕಾಗಿ ಅಥಾವ ವಾಟ್ಸಾಪ್. 8277777728 ನಂಬರ್ ವ್ಯವಸ್ಥೆ ಮಾಡಲಾಗಿದೆ ಎಂದರು. 2019-20ನೇ ಸಾಲಿನಲ್ಲಿ ನೈರ್ಮಲೀ ಕರಣ ಕ್ಕಾಗಿ 1.90 ಕೋಟಿ ರೂ. ಗಳನ್ನು ಕಾಯ್ದಿರಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಘನ ತ್ಯಾಜ್ಯ ನಿರ್ವಹಣೆಯಿಂದ 6,68,054,00 ರೂ. ಶುಲ್ಕ ವಸೂಲಾಗಿದೆ. ಕುಡಿಯುವ ನೀರಿಗಾಗಿ 83 ಲಕ್ಷ ಕಾಯ್ದಿರಿಸಲಾಗಿದೆ. ಕುಡಿಯುವ ನೀರಿಗಾಗಿ ಶಾಸಕರು ತಮ್ಮ ನಿಧಿಯಿಂದ 10 ಕೋಟಿ ಅನು ದಾನ ನೀಡುವು ದಾಗಿ ಭರವಸೆ ನೀಡಿದ್ದಾರೆ. ಹುಣಸೂರು ನಗರಸಭೆ 14 ಎಂ.ಎಲ್.ಡಿ ಸಾಮಥ್ರ್ಯದ ಕಾವೇರಿ ನೀರು ಸರಬರಾಜು ಯೋಜನೆ ಯಶಸ್ವಿಯಾಗಿ 2010ರಿಂದ ಚಾಲನೆಯಲ್ಲಿದೆ.
ಅದಾಯದ ಮೂಲಗಳು; ಎಸ್.ಎಫ್.ಸಿ ಮುಕ್ತ ನಿಧಿಯಿಂದ 4.00ಕೋಟಿ, ಎಸ್‍ಎಫ್‍ಸಿ ಕುಡಿಯುವ ನೀರು-60 ಲಕ್ಷ, ಎಸ್‍ಎಫ್‍ಸಿ ವಿಶೇಷ ಅನುದಾನ-2.00ಕೋಟಿ, 11ನೇ ಹಣಕಾಸು ಅನುದಾನ-8.85ಕೋಟಿ, ಎಸ್.ಎಫ್.ಸಿ ವೇತನ ಅನುದಾನ-3.15 ಕೋಟಿ, ಎಸ್.ಎಫ್.ಸಿ ವಿದ್ಯುಚ್ಛಕ್ತಿ ಅನುದಾನ -5.50ಕೋಟಿ, ಮನೆ ಕಂದಾಯ-4.00ಕೋಟಿ, ನೀರಿನ ಕಂದಾಯ-1.01ಕೋಟಿ, ಮಳಿಗೆಗಳ ಕಂದಾಯ-60 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ 17.50ಲಕ್ಷ ಹಾಗೂ ಇತರೆ ಅದಾಯ 12.50 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ.
ಖರ್ಚಿನ ಮೂಲಗಳು: ನೌಕರರ ವೇತನ-3.05ಕೋಟಿ, ನೈರ್ಮಲೀಕರಣ ವೆಚ್ಚ-1.90 ಕೋಟಿ, ಅಭಿವೃದ್ಧಿ ಕಾಮ ಗಾರಿಗಳಿಗಾಗಿ- 8.25 ಕೋಟಿ, ಸರ್ಕಾರಿ ಕಾರ್ಯಕ್ರಮಗಳ ವೆಚ್ಚ-8.25 ಲಕ್ಷ, ನಗರ ವ್ಯಾಪ್ತಿಯ ವಿದ್ಯುಚ್ಛಕ್ತಿ ಬಾಬ್ತು 5.50 ಕೋಟಿ, ವಾಹನಗಳ ನಿರ್ವಹಣೆ ವೆಚ್ಚ- 48.00 ಲಕ್ಷ, ಕಚೇರಿ ನಿರ್ವಹಣೆ ವೆಚ್ಚ-68.00 ಲಕ್ಷ, ನೂತನ ಕಚೇರಿ ಒಳ ವಿನ್ಯಾಸಕ್ಕಾಗಿ 80.00ಲಕ್ಷ ಹಾಗೂ ಇತರೆ ವೆಚ್ಚಗಳು- 18.50 ಲಕ್ಷಗಳು.
ಇಂದು ನಡೆದ ನಗರಸಭೆ ಸಾಮಾನ್ಯ ಸಭೆ ಒಂದು ಗಂಟೆ ತಡವಾಗಿ ಪ್ರಾರಂಭವಾದರೂ ಮೊದಲಿಗೆ ನಗರದಲ್ಲಿ ಉಲ್ಭಣಿಸಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಒಳ ಚರಂಡಿ ನೀರು ನದಿ ಸೇರುತ್ತಿರುವ ಬಗ್ಗೆ ಚರ್ಚಿಸಿ ಬಹುತೇಕ ಸದಸ್ಯರು ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷತೆ ಬಗ್ಗೆ ದೂರಿದರು.
ಇಂದು ಬೆಳಿಗ್ಗೆ 11 ಗಂಟೆಗೆ ಅರಂಭ ವಾಗಬೇಕಿದ್ದ ಸಾಮಾನ್ಯ ಸಭೆ ಮಧ್ಯಾಹ್ನ 12 ಅದರೂ ಪ್ರಾರಂಭವಾಗದೆ ಕೇವಲ ಅರು ಜನ ಮಹಿಳಾ ಸಭೆ ಅರಂಭವಾಗುತ್ತಿ ದ್ದಂತೆ ಹಿರಿಯ ಸದಸ್ಯ ಹಜರತ್ ಜಾನ್ ಮಾತನಾಡಿ, ನಮ್ಮ ಅವಧಿ ಮುಗಿಯುತ್ತ ಬಂದರೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದೇವೆ. ಇದಕ್ಕೆ ಅಧಿಕಾರಿಗಳೇ ಕಾರಣ ಎಂದರು.
ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಕೆ.ಅರ್.ನಗರದಿಂದ ಕಾವೇರಿ ನೀರು ತಂದರೂ ಜನರಿಗೆ ನೀರಿನ ಬವಣೆ ನೀಗಿ ಸಲು ಸಾಧ್ಯ ವಾಗಿಲ್ಲ. ಈ ಯೋಜನೆಯಲ್ಲಿ ಕೆ.ಅರ್. ನಗರದ 4 ಗ್ರಾಮಗಳು ಮತ್ತು ಹುಣಸೂರಿನ 9 ಗ್ರಾಮಗಳಿಗೆ ನೀರು ಕೊಟ್ಟು ನಂತರವೇ ನಗರಕ್ಕೆ ನೀರು ಪೂರೈಸಬೇಕಾಗಿದೆ. ಇದ ರಿಂದ ನಗರಕ್ಕೆ ಪರಿಪೂರ್ಣವಾದ ನೀರು ಪೂರೈಸುವಲ್ಲಿ ವಿಫಲರಾಗಿದ್ದೇವೆ ಎಂದರು.
ಇದಕ್ಕೆ ಉತ್ತರಿಸಿದ ವಾಟರ್ ಬೋರ್ಡ್ ಎಇ ಸಯ್ಯದ್ ಅಪ್ಸರ್, ಈ ಹಿಂದೆ 2006 ರಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆ ಯಡಿ 18.25 ಕೋಟಿ ವೆಚ್ಚದಲ್ಲಿ ರೂಪಿಸಿ ಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ 2009ರಲ್ಲಿ ಹುಣಸೂರು ನಗರದ ಕಲ್ಕುಣಿಕೆ, ಸಬ್ಬಿರ್ ನಗರ, ನರಸಿಂಹಸ್ವಾಮಿ ಬಡಾವಣೆ ಗಳಲ್ಲಿ ಮೂರು ಒವರ್ ಹೇಡ್ ಟ್ಯಾಂಕ್ ನಿರ್ಮಿಸಿ ಈ ಭಾಗದ ಜನರಿಗೆ ಕಾವೇರಿ ಕುಡಿಯುವ ನೀರುಣಿಸಲು ಮತ್ತು ನೀರಿನ ವಿತರಣಾ ವ್ಯವಸ್ಥೆಗಾಗಿ ಮತ್ತೆ 34.35 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿಕೊಳಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಕುಡಿಯುವ ನೀರು ಸಮಸ್ಯೆ ಸರಿದೂಗಿಸಬಹುದು ಎಂದರು.
ವಿ.ಪಿ.ಬೋರೆ ಮತ್ತು ಚಿಕ್ಕ ಹುಣಸೂರು ಕಡೆಗಳಿಂದ ಹರಿದು ಬರುವ ಚರಂಡಿ ನೀರು ದಾವಣಿ ಬೀದಿ ಹತ್ತಿರ ಬ್ಲಾಕ್ ಆಗುತ್ತಿದೆ. ಇದ ರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗುತ್ತಿದೆ ಎಂದು ಸದ್ಯಸೆ ಸುನೀತಾ ಜಯ ರಾಮೇಗೌಡ ಸಭೆ ಗಮನಕ್ಕೆ ತಂದರು.
ಸಭೆಯಲ್ಲಿ ಅಧ್ಯಕ್ಷರಾದ ಹೆಚ್.ವೈ. ಮಹದೇವ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣರಾಜಗುಪ್ತ, ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿಶಿವರಾಜ್, ಪೌರಾಯುಕ್ತ ಶಿವಪ್ಪ ನಾಯಕ, ಇಂಜಿನಿಯರ್ ಪಾರ್ವತಿದೇವಿ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು.