ನಾನು ಸಿದ್ದರಾಮಯ್ಯ ಅಭಿಮಾನಿ
ಮೈಸೂರು

ನಾನು ಸಿದ್ದರಾಮಯ್ಯ ಅಭಿಮಾನಿ

May 17, 2019

ಹಾಸನ: ನನ್ನ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಅವರು ರೇವಣ್ಣಗೂ ಮುಖ್ಯಮಂತ್ರಿ ಯಾಗುವ ಅರ್ಹತೆ ಇದೆ ಎಂದು ಹೇಳಿರಬಹುದು, ಹಿಂದಿನಿಂದಲೂ ಅವರು ನನ್ನ ಹಿತೈಷಿ, ನಾನು ಅವರ ಅಭಿಮಾನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

‘ರೇವಣ್ಣ ಅವರಿಗೂ ಸಿ.ಎಂ ಆಗುವ ಅರ್ಹತೆ ಇದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಕುರಿತು ಹೊಳೆನರಸೀಪುರ ದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿ ಸಿಎಂ ಆಗಿರುವಾಗ ನಾನು ಸಿಎಂ ಆಗುವ ಪ್ರಶ್ನೆ ಎಲ್ಲಿಂದ ಬಂತು. ಅವರು ಅಧಿಕಾರದಲ್ಲಿ ಇರುವಾಗಲೇ ನಾವು ಪೈಪೋಟಿಗೆ ಬರುವುದಿಲ್ಲ, ಯಾವ ಹಿನ್ನೆಲೆಯಲ್ಲಿ ಈ ರೀತಿ ಚರ್ಚೆಯಾಗಿದೆಯೋ ಗೊತ್ತಿಲ್ಲ ಎಂದರು.

‘ರಾಜ್ಯ ದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ, ನಾವು ಅಣ್ಣ, ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಪಪಡಿಸಿದರು.

ಪ್ರಜ್ವಲ್ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಒಮ್ಮೆ ಚುನಾವಣಾಧಿಕಾರಿ ನಾಮಪತ್ರ ಅಂಗೀಕರಿಸಿದ ಮೇಲೆ ಅದನ್ನು ತಿರಸ್ಕರಿಸುವ ಅಧಿಕಾರ ಇಲ್ಲ. ಏನಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಚುನಾವಣಾ ಆಯೋಗ ಯಾವ ಆಧಾರದ ಮೇಲೆ ಹೀಗೆ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಎ.ಮಂಜು ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

Translate »