ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ
ಮೈಸೂರು

ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ

May 17, 2019

ಮೈಸೂರು : ಕಾನೂನಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಿದ್ದು, ಜನರು ಕಾನೂನನ್ನು ಪಾಲಿಸಬೇಕು ಎಂದು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ತಿಳಿಸಿದರು.

ಮೈಸೂರಿನ ಜೆ.ಪಿ.ನಗರ ಕೈಗಾರಿಕಾ ಪ್ರದೇಶದಲ್ಲಿ ರುವ ಪೇಜ್ ಇಂಡಸ್ಟ್ರೀಸ್ ಗಾರ್ಮೆಂಟ್ ಕಾರ್ಖಾ ನೆಯ ಕಾರ್ಮಿಕರಿಗೆ ಕಾನೂನು ಅರಿವು ಮೂಡಿ ಸಲು ಮೈಸೂರು ವಕೀಲರ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ದೇಶವು ಉತ್ತಮ ಸ್ಥಿತಿಯಲ್ಲಿರಲು ಭಾರತ ಸಂವಿಧಾನವೇ ಕಾರಣ. ಸಂವಿಧಾನದಿಂದ ನಮಗೆ ಮತದಾನ ಮಾಡುವ ಅತೀ ದೊಡ್ಡ ಹಕ್ಕು ದೊರೆ ತಿದೆ. ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡು ವಾಗ ಪ್ರಜ್ಞಾವಂತರಾಗಿ ಯಾವುದಕ್ಕೂ ಅಪೇಕ್ಷೆ ಪಡದೇ ಆಯ್ಕೆ ಮಾಡಬೇಕು ಎಂದರು.

ಇಂದು ಅನೇಕ ಕಡೆ ಗೂಡ್ಸ್ ವಾಹನಗಳಲ್ಲಿ ಸಾರ್ವ ಜನಿಕರು ಹಾಗೂ ಕಾರ್ಮಿಕರು ಸಂಚರಿಸುತ್ತಿದ್ದಾರೆ. ಇದು ಉಚ್ಛನ್ಯಾಯಾಲಯದ ಆದೇಶದನ್ವಯ ಅಪ ರಾಧವಾಗಿದೆ. ಗೂಡ್ಸ್ ವಾಹನವನ್ನು ಸರಕು ಸಾಗಾ ಣಿಕೆಗೆ ಬಳಸಬೇಕು. ಸಾರ್ವಜನಿಕರು ಸಂಚಾರಕ್ಕೆ ಬಳಸಬಾರದು. ಜನಸಾಮಾನ್ಯರಿಗೆ ಮಾಹಿತಿ ನೀಡಲು ಕಾನೂನು ಅರಿವು ಅವಶ್ಯಕವಾಗಿದೆ. ಇದಕ್ಕಾಗಿಯೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಮುಖ್ಯವಾಗಿ ಕಾರ್ಖಾನೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಗೂಡ್ಸ್ ವಾಹನಗಳನ್ನು ಸಾರ್ವಜನಿಕರು ಪ್ರಯಾ ಣಕ್ಕೆ ಉಪಯೋಗಿಸಬಾರದು. ಗೂಡ್ಸ್ ವಾಹನದಲ್ಲಿ ಪ್ರಯಾಣಿಕರಾಗಿ ಸಂಚರಿಸುವಾಗ ಅಪಘಾತವಾದರೆ ಕಾನೂನು ನೆರವು ಸಿಗುವುದಿಲ್ಲ ಎಂದು ತಿಳಿಸಿದರು.

ಕಾನೂನು ಅರಿವು ಎಲ್ಲರಿಗೂ ತುಂಬಾ ಮುಖ್ಯ. ಗೂಡ್ಸ್ ವಾಹನಗಳಲ್ಲಿ ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಸಂಚರಿಸುತ್ತಿದ್ದಾರೆ ಇದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಜನರು ಯಾವ ವಾಹನದಲ್ಲಿ ಸಂಚರಿಸಬೇಕು. ಯಾವುದರಲ್ಲಿ ಸಂಚರಿಸಬಾರದು ಎಂಬ ಅರಿವು ಮೂಡಿಸುವುದು ತುಂಬಾ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಜಿಎಂ ಪೆÇ್ರಡಕ್ಷನ್ ಮ್ಯಾನೇ ಜರ್ ಕೆ.ಬಾಬುರಾಜು, ಮೈಸೂರು ವಕೀಲರಾದ ಮರಪ್ಪ, ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಸೀನಿ ಯರ್ ಮ್ಯಾನೇಜರ್ ವಿ.ಆರ್.ಪ್ರಸಾದ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಸ್.ಶಶಿಧರ್, ಕೆ.ಗೀತಾ, ವೀಣಾ, ನಿಖಿಲ್‍ಚಂದ್ರ ಉಪಸ್ಥಿತರಿದ್ದರು.

Translate »