ವಿದ್ಯೆಗೆ ಯಾವುದೇ ರೀತಿಯ ಭೇದವಿಲ್ಲ: ಬನ್ನೂರು ರಾಜು
ಮೈಸೂರು

ವಿದ್ಯೆಗೆ ಯಾವುದೇ ರೀತಿಯ ಭೇದವಿಲ್ಲ: ಬನ್ನೂರು ರಾಜು

May 17, 2019

ಮೈಸೂರು: ವಿದ್ಯೆಗೆ ಬಡವ-ಬಲ್ಲಿದ, ಮೇಲು-ಕೀಳು, ಜಾತಿ-ಗೀತಿ, ಧರ್ಮ-ಪಂಥಗಳೆಂಬ ಯಾವುದೇ ರೀತಿಯ ಭೇದ ಭಾವವಿಲ್ಲ. ಯಾರು ಶ್ರಮವಹಿಸಿ ಶ್ರದ್ಧೆಯಿಂದ ಓದುತ್ತಾರೋ ಅವರಿಗೆ ವಿದ್ಯೆ ನಿರ್ವಂಚನೆಯಿಂದ ಒಲಿಯುತ್ತದೆ.ಇದು ತಾರತಮ್ಯವಿಲ್ಲದ ತಾಯಿ ಶಾರದೆಯ ಬಹು ದೊಡ್ಡ ಗುಣ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಶ್ರೀ ಶಿರಡಿ ಸಾಯಿ ಮಂದಿರ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ನಗ ರದ ರಾಮಾನುಜ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಎಸ್ಸೆಸೆಲ್ಸಿ ಮತ್ತು ಪಿಯು ಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು.

ಯಾವುದೇ ತರಗತಿಯಿರಲಿ ವಿದ್ಯಾರ್ಥಿ ಗಳು ಕಷ್ಟ ಪಟ್ಟು ಓದುವುದಕ್ಕಿಂತ ಹೆಚ್ಚಾಗಿ ಇಷ್ಟಪಟ್ಟು ಓದಬೇಕು. ಕಲಿಕೆಯಲ್ಲಿ ಶ್ರದ್ಧೆ ಯಿರಬೇಕು. ಪಾಸು ಮಾಡೇ ಮಾಡುತ್ತೇ ನೆಂಬ ಛಲವಿರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ವಿದ್ಯೆ ಯಾರೂ ಕದಿಯ ಲಾಗದ ಅಮೂಲ್ಯ ಸಂಪತ್ತು. ಇದನ್ನು ಗಳಿಸುವುದರಲ್ಲಿದೆ ವಿದ್ಯಾರ್ಥಿಗಳ ತಾಕತ್ತು ಎಂದು ಹೇಳಿದ ಅವರು, ಇದನ್ನರಿತು ಸಾಧನೆಯ ಹಾದಿಯಲ್ಲಿ ಹಿಂದೆ ಗುರು ಗಳನ್ನು ಇಟ್ಟುಕೊಂಡು ಮುಂದೆ ಗುರಿ ಇಟ್ಟು ಕೊಂಡು ಸಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರ ಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿ ಯಮ್ಮ, ಶ್ರೀ ಶಿರಡಿ ಸಾಯಿ ಮಂದಿರದ ಗೋಪಾಲಸ್ವಾಮಿ, ವಿಶ್ರಾಂತ ಶಿಕ್ಷಕರಾದ ವೆಂಕಟೇಶಯ್ಯ, ಸಾಹಿತಿಗಳಾದ ಮುತ್ತು ಸ್ವಾಮಿ, ನಾಗರತ್ನ, ನಾರಾಯಣ ರಾವ್, ಹೊಮ್ಮ ಮಂಜುನಾಥ್, ವಿಶ್ರಾಂತ ಇಂಜಿನಿಯರ್ ರಾಜಾರಾವ್ ಮುಂತಾ ದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಗಾಯಕ ಉಮಾಪತಿ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನಲ್ಲಿ ನಡೆದ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ಎಂ.ಆರ್. ಇಂಚನ, ಅಂಕಿತ, ಮೇಘನಾ, ಪ್ರದೀಪ್ ಆರಾಧ್ಯ, ಚಿನ್ಮಯಿ, ಕುಸುಮಾಬಾಯಿ, ಜೆ. ಅಮೃತ, ಪ್ರವೀಣ್, ಶ್ರೀನಿವಾಸ, ಎಸ್.ಎಂ. ದಿಲೀಪ್, ಎಸ್.ಸಿಂಚನ, ಅರ್ಚನಾ, ಎಂ.ಎನ್.ವರ್ಷ, ಆರ್.ರಾಧಿಕಾ, ಚಿನ್ಮಯಿ, ಎ.ಪ್ರೇರಣ, ಹಿತೇಶ್ ಲಕ್ಷ್ಮಣ್ ಮುಂತಾ ದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Translate »