ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರಮ
ಮೈಸೂರು

ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರಮ

May 17, 2019

ಮೈಸೂರು ವಿಭಾಗದ ಜಿಲ್ಲೆಗಳ ನೂರಕ್ಕೂಹೆಚ್ಚು ಕೈಗಾರಿಕೋದ್ಯಮಿಗಳು ಭಾಗಿ

ಮೈಸೂರು: ಕೈಗಾ ರಿಕಾ ನೀತಿಯಲ್ಲಿ ತಾರತಮ್ಯದಿಂದಾಗಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಹೊಡೆತದಲ್ಲಿ ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ಕೈಗಾರಿಕೆಗಳು ಅಸ್ತಿತ್ವದಲ್ಲಿರುವುದೇ ಕಷ್ಟಕರವಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೋ ದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರು ವಿಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳ ಕೈಗಾರಿಕಾ ಸಂಘ ಗಳ ಪದಾಧಿಕಾರಿಗಳು, ಕೈಗಾರಿಕೋದ್ಯಮಿ ಗಳು ಸಂವಾದದಲ್ಲಿ ಭಾಗವಹಿಸಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮೈಸೂರು ಕೈಗಾರಿಕೆಗಳ ಸಂಘ ಮತ್ತು ಎಂಎಸ್ ಎಂಇ ಕೌನ್ಸಿಲ್‍ನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಕೆಐಎಡಿಬಿ ಭೂಸ್ವಾಧೀನ ಮಾಡಿದ ಸಂದರ್ಭ ಒಂದು ಪಹಣಿಗೆ ಒಬ್ಬರಿಗೆ ಕೆಲಸ ಕೊಡಬೇಕು ಎಂದಿದೆ. ಇದ ರಿಂದ ಕೈಗಾರಿಕೋದ್ಯಮಿಗಳು ತೊಂದರೆಗೆ ಸಿಲುಕುವಂತಾಗಿದೆ. ಆದರೆ ಕೈಗಾರಿಕೆಗಾಗಿ ಭೂ ಸ್ವಾಧೀನಪಡಿಸಿಕೊಂಡಾಗ ಭೂ ಮಾಲೀಕರಿಗೆ ಒಂದೇ ಸಾರಿಗೆ ಅವರಿಗೆ ನ್ಯಾಯೋಚಿತವಾದ ಎಲ್ಲಾ ಪರಿಹಾರ ವನ್ನು ಕೊಡುವುದು ಒಳಿತು. ಬೇರೆ ಕಮಿಟ್‍ಮೆಂಟ್ ಇಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಮೈಸೂರು ಮಹಾನಗರಪಾಲಿಕೆ ಯಿಂದ ಕೈಗಾರಿಕೆಗಳ ತ್ಯಾಜ್ಯ ಹಾಕುವ ಸ್ಥಳ ನೀಡಬೇಕು. ಕೈಗಾರಿಕಾ ಪ್ರದೇಶ ಗಳಲ್ಲಿ ಟ್ರಕ್ ಟರ್ಮಿನಲ್ ಕಡ್ಡಾಯವಾಗಿ ನಿರ್ಮಿಸಿಕೊಡಬೇಕು ಎಂದು ಅವರು ಸಲಹೆ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎ.ಎಸ್. ಸತೀಶ್ ಮಾತನಾಡಿ, ಮೈಸೂರಿನಲ್ಲಿ ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಹಾಗೂ ಪಿಸಿಬಿ ಚಿಪ್ ತಯಾರಿಕಾ ಘಟಕ ನಿರ್ಮಾಣ ವಿಳಂಬ ವಾಗಿರುವ ಬಗ್ಗೆ ಸಭೆಯ ಗಮನ ಸೆಳೆದರು.
ಮೈಸೂರು ಜಿಲ್ಲೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ಆಗಿಲ್ಲ. ಅದಕ್ಕೆ ಹೆಚ್ಚು ಪ್ರೋತ್ಸಾಹ ಅಗತ್ಯ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಕೈಗಾರಿಕೆಗಳ ಬಗ್ಗೆ ಗಮನ ಸೆಳೆದ ಚಾಮರಾಜನಗರದ ಕೈಗಾರಿಕೋದ್ಯಮಿಗಳು, ಕೈಗಾರಿಕೆಗಳ ವಿಚಾರ ದಲ್ಲಿ ಹಿಂದುಳಿದ ಚಾಮರಾಜನಗರ ಜಿಲ್ಲೆ ಕಡೆಗಣಿಸಲ್ಪಟ್ಟಿದೆ ಎಂದು ದೂರಿದರು.

ಚಾ.ನಗರ ಜಿಲ್ಲೆಯಲ್ಲಿ ಶೂನ್ಯ ಕೈಗಾರಿಕೆ: ಚಾಮರಾಜನಗರ ಜಿಲ್ಲಾ ಸಣ್ಣ ಕೈಗಾರಿಕೆ ಗಳ ಸಂಘದ ಅಧ್ಯಕ್ಷ ಎ.ಜಯಸಿಂಹ ಮಾತನಾಡಿ, ಕೈಗಾರಿಕೆಗಳ ವಿಚಾರದಲ್ಲಿ ಜಿಲ್ಲೆ ಶೂನ್ಯ ಕೈಗಾರಿಕೆ ಎಂದೇ ಹೇಳಬ ಹುದು. ಹಾಗಾಗಿ ಹಿಂದುಳಿದ ಈ ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು. ನಗರಸಭೆ ಮತ್ತು ಪಂಚಾಯ್ತಿ ಗಳಿಂದ ಆಸ್ತಿ ತೆರಿಗೆ ವಿನಾಯಿತಿ ನೀಡ ಬೇಕು. ವಿದ್ಯುಚ್ಛಕ್ತಿ ಬಿಲ್‍ನಲ್ಲೂ ಶೇ.50 ರಷ್ಟು ವಿನಾಯಿತಿ ನೀಡಬೇಕು. ಐದು ವರ್ಷಗಳ ಕಾಲ ಜಿಎಸ್‍ಟಿಯಿಂದ ವಿನಾ ಯಿತಿ ನೀಡಬೇಕು. ಅಲ್ಲದೆ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಲಹೆ ನೀಡಿದರು.

ಮತ್ತೊಬ್ಬ ಕೈಗಾರಿಕೋದ್ಯಮಿ ಎಲ್. ಸುರೇಶ್ ಮಾತನಾಡಿ, ಕೊಯಮತ್ತೂರಿ ನಲ್ಲಿ ಕೈಗಾರಿಕೋದ್ಯಮಿಗಳ ರೋಡ್ ಶೋ ಸಂದರ್ಭದಲ್ಲಿ ಸಾವಿರಾರು ಕೋಟಿ ಬಂಡವಾಳ ಹೂಡಲು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಮುಂದಾದರು. ಆದರೆ 1400 ಎಕರೆ ಕೈಗಾರಿಕಾ ಪ್ರದೇಶ ದಲ್ಲಿ ನೀರು ಸೇರಿದಂತೆ ಯಾವುದೇ ಮೂಲ ವ್ಯವಸ್ಥೆ ಇಲ್ಲದೆ ಕೈಗಾರಿಕೋದ್ಯಮಿ ಗಳೂ ಇಲ್ಲಿಗೆ ಬರಲು ಹಿಂಜರಿದರು. ಹೀಗಾಗಿ ಜಿಲ್ಲೆಯ ಕೈಗಾರಿಕೆಯಲ್ಲಿ ಹಿನ್ನಡೆ ಕಾಣುವಂತಾಗಿದೆ ಎಂದು ದೂರಿದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿ ರುವ ಕನಕಪುರ ಮಾರ್ಗ ಬೆಂಗಳೂರು-ಕೊಳ್ಳೇಗಾಲ-ಚಾಮರಾಜನಗರ ರೈಲು ಮಾರ್ಗ ಶೀಘ್ರ ಆದರೆ ಜಿಲ್ಲೆಯ ಕೈಗಾ ರಿಕೆಗಳ ಅಭಿವೃದ್ಧಿಗೆ ಉತ್ತೇಜನ ಸಿಕ್ಕಂತಾ ಗುತ್ತದೆ. ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳು ಆಗಬೇಕು. ಅಲ್ಲದೆ ತಮಿಳುನಾಡು, ಕೇರಳಕ್ಕೆ ಹೋಗುತ್ತಿರುವ ಅರಿಶಿಣವನ್ನು ಜಿಲ್ಲೆಯಲ್ಲಿಯೇ ಉಳಿಸಲು ಅರಿಶಿಣ ಪಾರ್ಕ್ ಶೀಘ್ರ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಗಣಿ ಉದ್ಯಮವನ್ನೂ ಕೈಗಾರಿಕೆ ಎಂದು ಪರಿಗಣಿಸಿ: ಚಾಮರಾಜನಗರ ಜಿಲ್ಲಾ ಗಣಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ ಅವರು, ಜಿಲ್ಲೆಯಲ್ಲಿ 70 ಕರಿಕಲ್ಲು ಗಣಿಗಳು ನಡೆಯುತ್ತಿದ್ದು, 5 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಉದ್ದಿಮೆಯನ್ನು ಏಕೆ ಕೈಗಾರಿಕೆ ಎಂದು ಪರಿಗಣಿಸಬಾರದು ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಬೆಂಗಳೂರಿನ ಕೈಗಾರಿಕಾ ನೀತಿ ಮತ್ತು ಉತ್ತೇಜನದ ಅಧಿಕ ನಿರ್ದೇ ಶಕ ಎಸ್.ಹೆಚ್.ವೀರಣ್ಣ, ಬೆಂಗಳೂರು ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಸತೀಶ್, ಪ್ಲಾನಿಂಗ್ ಮತ್ತು ಯೋಜನೆಯ ಜಂಟಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಚಾಮ ರಾಜನಗರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಎನ್.ಮರುಳೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »