ಮೈಸೂರಿಗರು ಅಧಿಕ ಆರೋಗ್ಯವಂತರು
ಮೈಸೂರು

ಮೈಸೂರಿಗರು ಅಧಿಕ ಆರೋಗ್ಯವಂತರು

May 17, 2019

ಮೈಸೂರು: ಆರೋ ಗ್ಯವು ಜಾಗತಿಕ ಮಟ್ಟದ ವಿಷಯವಾಗಿದ್ದು, ಪ್ರತಿಯೊಬ್ಬರೂ ಆರೋಗ್ಯವನ್ನು ಉತ್ತಮ ವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ದೇಶ, ಸಮಾಜ ಆರೋಗ್ಯವಾಗಿರುತ್ತದೆ ಎಂದು ಯುವರಾಜ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯಲ್ಲಿನ ರೋಟರಿ ಸಭಾಂಗಣದಲ್ಲಿ ವಿಜಯ ಫೌಂಡೇಷನ್ ಮತ್ತು ಹಾರ್ಟ್‍ಫುಲ್‍ನೆಸ್ ಎಜುಕೇಷನ್ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಡಾ.ಬಿ. ಆರ್.ಪೈ ಅವರು ರಚಿಸಿರುವ ಮಕ್ಕಳ ಕುರಿತ `ಹೆಲ್ತ್ ಎಜುಕೇಷನ್’ ಕೃತಿಯನ್ನು ಬಿಡು ಗಡೆಗೊಳಿಸಿ ಮಾತನಾಡಿದ ಅವರು, ಪ್ರತಿ ಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ ವಾಗಿದ್ದು, ದೈಹಿಕ ಹಾಗೂ ಮಾನಸಿಕ ವಾಗಿ ಕಾಪಾಡಿಕೊಳ್ಳಬೇಕಿದೆ ಎಂದರು.

ಮೈಸೂರು ಒಡೆಯರು ಜನಸಾಮಾ ನ್ಯರ ಆರೋಗ್ಯದ ದೃಷ್ಟಿಯಿಂದ ಮೈಸೂ ರನ್ನು ಯೋಜನಾ ಬದ್ಧವಾಗಿ ಕಟ್ಟಿದ್ದು, ಉಳಿ ದೆಲ್ಲ ಭಾಗಕ್ಕಿಂತ ಮೈಸೂರಿನವರು ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದರು.

ಬಿ.ಆರ್.ಪೈ ಅವರು ಹೆಲ್ತ್ ಎಜುಕೇ ಷನ್ ಕೃತಿ ರಚಿಸಿರುವುದು ಸಂತೋಷದ ವಿಷಯ. ಇದರಲ್ಲಿ ವ್ಯಾಯಾಮ, ಯೋಗ, ಧ್ಯಾನ, ಆಹಾರಪದ್ಧತಿ ಹೀಗೆ ಆರೋಗ್ಯದ ಬಗ್ಗೆ ಹಲವು ಮಾಹಿತಿ ನೀಡಿದ್ದು, ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢ ರಾಗಲು ಸಹಕಾರಿಯಾಗಲಿದೆ. ಇಂತಹ ಸಮಾಜಮುಖಿ ಕಾರ್ಯಕ್ಕೆ ಯಾವಾ ಗಲೂ ರಾಜಮನೆತನದ ಸಹಕಾರವಿರು ತ್ತದೆ ಎಂದು ಭರವಸೆ ನೀಡಿದರು.

ಮೈಸೂರು ಗ್ರಾಹಕ ಪರಿಷತ್‍ನ ಸಂಸ್ಥಾ ಪಕ ಡಾ.ಭಾಮಿ ವಿ.ಶೆಣೈ ಮಾತನಾಡಿ, ಬಹಳ ಮಂದಿಗೆ ಆರೋಗ್ಯದ ಬಗ್ಗೆ ಕಾಳಜಿ ಯಿಲ್ಲ. ಆರೋಗ್ಯ ಹದಗೆಟ್ಟಾಗ ಹೆಚ್ಚು ಕಾಳಜಿ ವಹಿಸುತ್ತಾರೆ. ಇದು ದುರಂತ. ನಾವು ವಾಸಿಸುವ ಪರಿಸರವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ರಿಗೆ ಇದರ ಅರಿವೇ ಇಲ್ಲ. ಬಿ.ಆರ್.ಪೈ ಅವರ ಕೃತಿಯು 96 ಪುಟಗಳನ್ನು ಹೊಂದಿದ್ದು, ಆರೋಗ್ಯದ ಬಗ್ಗೆ ಸವಿಸ್ತಾರ ವಾಗಿ ವಿವರಿಸಲಾಗಿದೆ. ಇದನ್ನು ಮಕ್ಕಳಿಗೆ ನೀಡುವ ಅಗತ್ಯವಿದೆ ಎಂದರು.

ಶುದ್ಧ ಗಾಳಿ, ಆಹಾರ, ಪರಿಸರದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಒಂದು ವೇಳೆ ಎಚ್ಚರವಹಿಸದಿದ್ದರೆ ಹಲವು ರೀತಿಯ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ, ಆರೋಗ್ಯ ಶಿಕ್ಷಣವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯವಂತರಾಗ ಬೇಕು ಎಂದು ಹೇಳಿದರು.

ಅದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಎನ್. ಚಂದ್ರಶೇಖರ್ ಮಾತನಾಡಿ, ಆರೋಗ್ಯ ಶಿಕ್ಷಣ ಪುಸ್ತಕ ಓದಿ ಸುಮ್ಮನಾದರೆ ಏನೂ ಪ್ರಯೋಜನವಿಲ್ಲ. ಬದಲಾಗಿ ಅಳವಡಿಸಿ ಕೊಳ್ಳಬೇಕು. ಜತೆಗೆ ಪೋಷಕರು ಮಕ್ಕಳಿಗೂ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಕೃತಿಕರ್ತೃ ಡಾ.ಬಿ.ಆರ್.ಪೈ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು, ಮಹಿಳೆ ಯರು, ಪುರುಷರು ಖಿನ್ನತೆಗೆ ಒಳಗಾಗುತ್ತಿದ್ದು, ಇದಕ್ಕೆ ಬದಲಾದ ಜೀವನ ಶೈಲಿ, ಒತ್ತಡವೇ ಮುಖ್ಯ ಕಾರಣ. ಹಾಗಾಗಿ ಆರೋಗ್ಯ ಕುರಿತ ಕೃತಿಗಳನ್ನು ಓದುವುದರ ಜತೆಗೆ ಅಳವಡಿಸಿ ಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಾರ್ಟ್‍ಪುಲ್ ನೆಸ್ ಎಜುಕೇಷನ್ ಟ್ರಸ್ಟ್‍ನ ಕೆ.ಮಧು ಸೂಧನ್ ಮತ್ತಿತರರು ಉಪಸ್ಥಿತರಿದ್ದರು.

Translate »