ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಮರೆ
ಮೈಸೂರು

ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಮರೆ

March 4, 2020

`ಸಮಕಾಲೀನ ಕನ್ನಡ ಸಾಹಿತ್ಯ’ ವಿಚಾರ ಸಂಕಿರಣದಲ್ಲಿ ಪ್ರೊ.ನೀಲಗಿರಿ ಎಂ.ತಳವಾರ್ ವಿಷಾದ
ಮೈಸೂರು, ಮಾ.3(ಪಿಎಂ)- ಮಾನ ವನ ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಕಡಿಮೆಯಾಗುತ್ತಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧÀ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ಎಂ.ತಳವಾರ್ ವಿಷಾದಿಸಿದರು.

ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸ್ನಾತಕ ವಿಭಾಗದ ವತಿಯಿಂದ ಯುಜಿಸಿ ಪ್ರಾಯೋಜಿತ `ಸಮಕಾಲೀನ ಕನ್ನಡ ಸಾಹಿತ್ಯ-ಸವಾಲು ಮತ್ತು ಸಾಧÀ್ಯತೆಗಳು’ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾ ಟಿಸಿ ಅವರು ಮಾತನಾಡಿದರು.

ಅಧÀ್ಯಕ್ಷತೆ ವಹಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹ ತೊರೆದು ಕನ್ನಡವನ್ನು ಉಳಿಸಿ ಬೆಳೆಸಲು ಮುಂದಾಗಬೇಕು. ಇದಕ್ಕೆ ಸರ್ಕಾರವೂ ಪೂರಕವಾದ ಕ್ರಮ ಕೈಗೊಳ್ಳಬೇಕು ಎಂದರು.

`ಸೃಜನಶೀಲ ಸಾಹಿತ್ಯ’ ಕುರಿತು ಹಂಪಿ ವಿವಿ ಪ್ರಾಧ್ಯಾಪಕ ಅಮರೇಶ ನುಗಡೋಣಿ ಮಾತನಾಡಿ, ರೈತರ ಆತ್ಮಹತ್ಯೆಗಳು, ಮಹಿಳೆ ಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹಾಗೂ ಖಾಸಗೀಕರಣದ ತಲ್ಲಣಗಳ ಕುರಿತು ಎಷ್ಟು ಸಾಹಿತ್ಯ ರಚನೆಯಾಗಿವೆ? ಎಂದು ಪ್ರಶ್ನಿಸಿದರಲ್ಲದೆ, ಸಾಹಿತ್ಯದಲ್ಲಿ ಕಲ್ಪನಾಶಕ್ತಿ ಇರಬೇಕು. ರಚನೆಗೆ ತಕ್ಕ ಭಾಷೆಯೂ ಅಗತ್ಯ. ಇದೆಲ್ಲವನ್ನೂ ಬಳಸಿ ಸೃಜನಶೀಲ ಸಾಹಿತ್ಯವನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ಕನ್ನಡ ಸ್ನಾತ ಕೋತ್ತರ ವಿಭಾಗದ ಮುಖ್ಯಸ್ಥ ಬಿ.ಎಸ್. ಸುದೀಪ್, ಕನ್ನಡ ಸ್ನಾತಕ ವಿಭಾಗದ ಮುಖ್ಯಸ್ಥೆ ಎನ್.ಮಹೇಶ್ವರಿ ಮತ್ತಿತರರಿದ್ದರು.

ಪ್ರಸ್ತುತ ಸೂಕ್ಷ್ಮತೆ, ಸಂವೇದನಾಶೀಲತೆ ಕಡಿಮೆಯಾಗುತ್ತಿದೆ. ಅಧ್ಯಯನ ಮತ್ತು ಸಾಹಿತ್ಯ ತೊಡಕು ಎದುರಿಸುತ್ತಿವೆ. ಜನರು ಕೇವಲ ಮಾತನಾಡಿಕೊಂಡು ಹೋಗುತ್ತಿದ್ದಾರೆ. ಹಗಲು, ರಾತ್ರಿ ಮಾತಿನಲ್ಲೇ ಮುಳುಗಿದ್ದಾರೆ. ಇದು ಮೌನವನ್ನು ಕೊಲ್ಲುತ್ತಿದೆ. ಮೌನ ಮಾನವನ ಬದುಕಿಗೆ ಅತ್ಯಗತ್ಯ. ಮೌನದಿಂದ ಆತ್ಮಾವÀಲೋಕನ ಸಾಧÀ್ಯ. ಆದರೆ ಇಂದು ಆತ್ಮಾವಲೋಕನವಿಲ್ಲದೆ ಅಭಿರುಚಿಯೇ ಹಾಳಾಗುತ್ತಿದೆ -ಪ್ರೊ.ನೀಲಗಿರಿ ಎಂ.ತಳವಾರ್

Translate »