ಕಲೆ, ಭಾಷೆ ಉಳಿವಿಗೆ ಅವಿರತ ಪ್ರಯತ್ನ ಅಗತ್ಯ: ಪ್ರೊ.ವಿದ್ಯಾಶಂಕರ್
ಮೈಸೂರು

ಕಲೆ, ಭಾಷೆ ಉಳಿವಿಗೆ ಅವಿರತ ಪ್ರಯತ್ನ ಅಗತ್ಯ: ಪ್ರೊ.ವಿದ್ಯಾಶಂಕರ್

March 4, 2020

ಮೈಸೂರು,ಮಾ.3(ವೈಡಿಎಸ್)-ಕಲೆ, ಭಾಷೆಯ ಉಳಿವಿಗೆ ಅವಿರತ ಪ್ರಯತ್ನ, ಹೋರಾಟಗಳು ನಡೆಯಬೇಕಿದೆ ಎಂದು ಕರಾಮುವಿ ಕುಲಪತಿ ಪ್ರೊ.ವಿದ್ಯಾಶಂಕರ್ ಅಭಿಪ್ರಾಯಪಟ್ಟರು.

ಲಕ್ಷ್ಮೀಪುರಂನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ 3 ದಿನಗಳ ಕಾಲ ಆಯೋಜಿಸಿರುವ `ಗಂಗೂ ಬಾಯಿ ಹಾನಗಲ್-107ನೇ ಜನ್ಮದಿನೋತ್ಸವ’ ಹಾಗೂ ಅಂತರ ವಿಶ್ವವಿದ್ಯಾಲಯ-ಕಾಲೇಜು ಗಳ `ಸಾಂಸ್ಕøತಿಕ ಕಲಾಪ್ರತಿಭೋತ್ಸವ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿ ದರು. ಸರ್ಕಾರ ಸಂಗೀತ ವಿವಿ ಸ್ಥಾಪಿಸುವ ಮೂಲಕ ಪ್ರದರ್ಶಕ ಕಲೆಗಳನ್ನು ಪೆÇ್ರೀತ್ಸಾಹಿ ಸಿದೆ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ತಮ್ಮಲ್ಲಿನ ಕಲೆ ಪ್ರದರ್ಶಿಸಲಿದ್ದಾರೆ ಎಂದರು.

ಸಂಗೀತ ವಿವಿ ಹಂಗಾಮಿ ಕುಲಪತಿ ನಾಗೇಶ್ ಬೆಟ್ಟಕೋಟೆ ಬಹಳ ಆಸಕ್ತಿ ಯಿಂದ ಏಳೆಂಟು ತಿಂಗಳಲ್ಲಿ ಸಂಗೀತ ವಿವಿಯನ್ನು ಸಾಕಷ್ಟು ಅಭಿವೃದ್ಧಿಪಡಿಸಿ ದ್ದಾರೆ. ಯಾವುದೇ ಕುಲಪತಿ ಮನಸ್ಸು ಮಾಡಿದರೆ ತಮ್ಮ ವಿವಿಯ ಕಾರ್ಯಗಳನ್ನು ಅತ್ಯಂತ ವೇಗವಾಗಿ ಮಾಡಬಹುದು. ಒಳ್ಳೆಯ ಕೆಲಸಕ್ಕೆ ಯಾರೂ ಅಡ್ಡಿ ಬರುವುದಿಲ್ಲ. ಕೆಲಸ ಮಾಡುವ ಮನಸ್ಸು ಮುಖ್ಯ. ಸರ್ಕಾರ ರಾಜ್ಯ ಮಟ್ಟದ ಸಂಗೀತ ವಿವಿ ಸ್ಥಾಪಿಸಿ, ಪದವಿ ಕೊಡುವುದಕ್ಕೆ ಮಾತ್ರ ಸೀಮಿತ ವಾಗಿಸದೆ ಸಂಗೀತ ಪ್ರಿಯರನ್ನು ತನ್ನತ್ತ ಆಕರ್ಷಿಸುವ ಮೂಲಕ ಎಲ್ಲಾ ಕಲೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.

ನಟ ಮಂಡ್ಯ ರಮೇಶ್, ಖ್ಯಾತ ಭರತ ನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆ ಸ್ವಾಮಿ, ಖ್ಯಾತ ಅಂತಾರಾಷ್ಟ್ರೀಯ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ, ಸಂಗೀತ ವಿವಿ ಪ್ರಭಾರ ಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಪ್ರೊ. ಆರ್.ರಾಜೇಶ್, ಹಣಕಾಸು ಅಧಿಕಾರಿ ಎಂ. ಲೋಕೇಶ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯಿತು.

Translate »