ಇರ್ವಿನ್ ರಸ್ತೆ: ಪ್ರಯಾಣಿಕರ ಗಮನಕ್ಕೆ
ಮೈಸೂರು

ಇರ್ವಿನ್ ರಸ್ತೆ: ಪ್ರಯಾಣಿಕರ ಗಮನಕ್ಕೆ

February 3, 2019

ಮೈಸೂರು: ಮೈಸೂರು ನಗರದ ಇರ್ವಿನ್ ರಸ್ತೆಯ ಅಗಲೀಕರಣ ಕಾಮ ಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುವುದರಿಂದ ಆ ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿದ್ದ ಎಲ್ಲಾ ನಗರ ಸಾರಿಗೆ ವಾಹನಗಳನ್ನು ನಗರ ಬಸ್ ನಿಲ್ದಾಣ-ಲಕ್ಷ್ಮೀ ಟಾಕೀಸ್, ಶಾಂತಲ ಟಾಕೀಸ್, ರಾಮಸ್ವಾಮಿ ವೃತ್ತ, ಮೆಟ್ರೋಪೋಲ್ ವೃತ್ತ, ರೈಲ್ವೆ ನಿಲ್ದಾಣ, ಆಯುರ್ವೇದಿಕ್ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ ವೃತ್ತದವರೆಗೆ ಕಾರ್ಯಾಚರಿಸಿ ತಿರುವು ಪಡೆದು ನಂತರ ರೈಲ್ವೆ ನಿಲ್ದಾಣದ ಮುಖಾಂತರ ನಿಗದಿತ ಸ್ಥಳಗಳಿಗೆ ಕಾರ್ಯಾಚರಣೆ ನಡೆಯುತ್ತದೆ.

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸುವ ಅಥವಾ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರ ಬಸ್ ನಿಲ್ದಾಣ ಮತ್ತು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ನಡುವೆ ಫೀಡರ್ ಸರ್ವೀಸ್ ಮಾದರಿಯಲ್ಲಿ 4 ವಾಹನಗಳನ್ನು ಪ್ರತಿ 5ರಿಂದ 10 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕ ಪ್ರಯಾಣಿಕರು ವಾಹನಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Translate »