ಮೈಸೂರು: ಗತಿಸಿದ ಘಟನೆಗಳಿಂದ ಪಾಠ ಕಲಿತು ವರ್ತ ಮಾನದ ಕಡೆ ಗಮನ ಹರಿಸಿದರೆ ಮಾತ್ರ ಯಶಸ್ಸಿನ ಶಿಖರವೇರಲು ಸಾಧ್ಯ ಎಂದು ಜಾರ್ಖಂಡ್ ಸರ್ಕಾರದ ಸ್ಟೇಟ್ ಡೆವ ಲಪ್‍ಮೆಂಟ್ ಕೌನ್ಸಿಲ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಸ್ವರೂಪ್ ಅಭಿಪ್ರಾಯಪಟ್ಟರು
ಮೈಸೂರಿನ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ 66ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತ ನಾಡಿದ ಅವರು, ಜೀವನದಲ್ಲಿ ಪ್ರತಿನಿತ್ಯ ಎದುರಾಗುವ ಘಟನೆಗಳು ನಮಗೆ ಪಾಠ ಕಲಿಸುತ್ತವೆ. ಆದರೆ, ನಿಶ್ಚಿತ ಗುರಿಯನ್ನು ಸಾಧಿಸಬೇಕಾದರೆ ವರ್ತಮಾನದ ಬಗ್ಗೆ ಆಲೋಚನೆ ಮಾಡಬೇಕು ಎಂದರು.
ಇತರರು ಏನು ಮಾಡುತ್ತಿದ್ದಾರೆ. ಅವರು ನಮಗಿಂತ ಚೆನ್ನಾಗಿದ್ದಾರೆ ಎಂದು ಇನ್ನೊ ಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳ ಬೇಡಿ. ಇದರಿಂದ ನಿಮ್ಮ ಸಮಯ ಮತ್ತು ಶಕ್ತಿ ಹಾಳಾಗುತ್ತದೆಯೇ ಹೊರತು ಯಾವುದೇ ಅನುಕೂಲಗಳಾಗುವುದಿಲ್ಲ. ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ, ಪ್ರಯೋಜನ ವಿಲ್ಲದ ವಿಷಯಗಳ ಬಗ್ಗೆ ಚರ್ಚೆ ಮಾಡು ತ್ತಲೇ ಅಮೂಲ್ಯ ಸಮಯ ವ್ಯರ್ಥ ಮಾಡಿ ಕೊಳ್ಳುತ್ತಾರೆ. ಅಂತರಂಗದ ಆಳಕ್ಕೆ ಇಳಿದು ನನ್ನಿಂದಾದ ತಪ್ಪೇನು ಎಂಬುದನ್ನು ತಿಳಿಯಬೇಕು. ಹಾಗೆಯೇ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಹೇಳಿದರು.ಪ್ರತಿಯೊಬ್ಬರಲ್ಲೂ ಧನಾತ್ಮಕ ಚಿಂತನೆ ಗಳು ವೃದ್ಧಿಸಬೇಕು. ಅಪಾರ ಶಕ್ತಿ ನಿಮ್ಮಲ್ಲಿದ್ದು, ಅದರ ಅರಿವನ್ನು ಪಡೆದುಕೊಳ್ಳಬೇಕು. ಜಾಗೃತರಾಗಿ ಜೀವನ ನಡೆಸಬೇಕು. ಸ್ವಂತಿಕೆ ಯನ್ನು ಬೆಳೆಸಿಕೊಳ್ಳಬೇಕು. ಬೇರೆಯವ ರನ್ನು ಹಿಂಬಾಲಿಸದೆ, ನಿಮ್ಮನ್ನೇ ಇತರರು ಹಿಂಬಾಲಿಸುವಂತೆ ಸಾಧನೆ ಮಾಡಿ ತೋರಿ ಸಬೇಕು ಎಂದು ಸಲಹೆ ನೀಡಿದರು.
ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಾನಂದ ಮಾತನಾಡಿ, ನಮ್ಮ ಮಿತಿ ಯಲ್ಲಿ ನಾವಿರಬೇಕು. ಅರಿವನ್ನು ವಿಸ್ತರಿಸಿ, ಸಂಕುಚಿತ ಮನೋಭಾವ ತೊರೆದು ವಿಸ್ತಾರದ ಕಡೆಗೆ ಸಾಗಬೇಕು. ಸ್ವಾರ್ಥ ವಿನಾಶವಾದರೆ, ನಿಶ್ವಾರ್ಥ ವಿಶಾಲವಾ ದದ್ದು. ಭಾವದಿಂದ ಪ್ರತಿಯೊಬ್ಬರೊಂದಿಗೆ ಸ್ಪಂದಿಸಬೇಕು ಎಂದರು.
ರಾಮಕೃಷ್ಣ ವಿದ್ಯಾಸಂಸ್ಥೆ ಮುಖ್ಯಸ್ಥ ಯುಕ್ತೇಶಾನಂದ ಸ್ವಾಮೀಜಿ, ಪ್ರಾಂಶು ಪಾಲ ಎಸ್.ಬಾಲಾಜಿ ಉಪಸ್ಥಿತರಿದ್ದರು.
ಸಾಮಾನ್ಯ ಜ್ಞಾನ ಸ್ಪರ್ಧೆ: ಸದ್ವಿದ್ಯಾ ಶಾಲೆ ಚಾಂಪಿಯನ್
ಸ್ವಾಮಿ ಶಾಂಭವಾನಂದಜೀ ಮೆಮೋರಿಯಲ್ 47ನೇ ಅಂತರ ಶಾಲಾ ಸಾಮಾನ್ಯ ಜ್ಞಾನ ಸ್ಪರ್ಧೆಯ ಶಾಲಾ ವಿಭಾಗದಲ್ಲಿ ಸದ್ವಿದ್ಯಾ ಶಾಲೆ ಪ್ರಥಮ, ಎಕ್ಸೆಲ್ ಪಬ್ಲಿಕ್ ಶಾಲೆ ದ್ವಿತೀಯ, ಮಾನಸ ಸರೋವರ ಪುಷ್ಕರಣಿ ಶಾಲೆ ತೃತೀಯ, ಭಾರತೀಯ ವಿದ್ಯಾಭವನ್ ನಾಲ್ಕನೇ, ಜೆಎಸ್‍ಎಸ್ ಪಬ್ಲಿಕ್ ಶಾಲೆ ಐದನೇ ಹಾಗೂ ಸೆಂಟ್ ಜೋಸೆಫ್ ಕೇಂದ್ರ ಶಾಲೆ ಆರನೇ ಸ್ಥಾನ ಪಡೆದವು. ಒಟ್ಟಾರೆ ಚಾಂಪಿಯನ್ ಪಟ್ಟವನ್ನು ಸದ್ವಿದ್ಯಾ ಶಾಲೆ ಪಡೆದುಕೊಂಡಿತು.
10ನೇ ತರಗತಿ ವಿಭಾಗದಲ್ಲಿ ಕೌಟಿಲ್ಯ ವಿದ್ಯಾಲಯದ ಕೌಶಿಕ್ ಎಸ್.ನಂದನ್ ಪ್ರಥಮ ಸ್ಥಾನ ಪಡೆದರೆ, ಸದ್ವಿದ್ಯಾ ಶಾಲೆಯ ಟಿ.ಸಾತ್ವಿಕ್ ಗೌಡ ದ್ವಿತೀಯ ಹಾಗೂ ಕಿಸನ್ ಯು.ಕಾಂತಾವರ್ ತೃತೀಯ ಸ್ಥಾನ ಪಡೆದರು. ವಿಶೇಷ ಬಹುಮಾನವನ್ನು ಸದ್ವಿದ್ಯಾ ಶಾಲೆಯ ಎನ್.ಸನತ್ ಆಚಾರ್ಯ, ಅಪ್ರಮೇಯ ದಿನೇಶ್, ಎಸ್. ಕಾವ್ಯ, ವಿಜಯ ವಿಠಲ ಶಾಲೆಯ ನಿರಂತರ ದಿನೇಶ್ ಹಾಗೂ ಸೆಂಟ್ ಜೋಸೆಫ್ ಕೇಂದ್ರೀಯ ಶಾಲೆಯ ತನುಶ್ರೀ ಡಿ. ಅಸರ್ ಪಡೆದರು.
9ನೇ ತರಗತಿ ವಿಭಾಗದಲ್ಲಿ ಸದ್ವಿದ್ಯಾ ಶಾಲೆಯ ಜಿ.ಡಯಾನ್ ಪ್ರಥಮ ಸ್ಥಾನ ಪಡೆದರೆ, ಮಾನಸ ಸರೋವರ ಪುಷ್ಕರಣಿ ಶಾಲೆಯ ಸಿ.ಜೆ. ಆಕಾಂಕ್ಷ್ ದ್ವಿತೀಯ ಹಾಗೂ ಜೆಎಸ್‍ಎಸ್ ಪಬ್ಲಿಕ್ ಶಾಲೆಯ ವೈ.ಎಸ್. ಪೂರ್ವಿಕ್ ಗೌಡ ತೃತೀಯ ಸ್ಥಾನ ಪಡೆದರು. ವಿಶೇಷ ಬಹುಮಾನವನ್ನು ಸದ್ವಿದ್ಯಾ ಶಾಲೆಯ ಸೌರವ್ ಎಸ್. ಅವಧಾನಿ, ಯು.ಸುಹಾಸ್, ಡಿ. ದೀಪಕ್, ಎಕ್ಸೆಲ್ ಪಬ್ಲಿಕ್ ಶಾಲೆಯ ಮಾನಸ್ ಕುಡ್ಲಾಪುರ್ ರಾಕೇಶ್, ಸೇಂಟ್ ಜೋಸೆಫ್ ಕೇಂದ್ರೀಯ ಶಾಲೆಯ ವೈ. ಸೋಹನ್‍ಕುಮಾರ್ ಪಡೆದುಕೊಂಡರು.