ಕಾಂಗ್ರೆಸ್‍ನಲ್ಲಿ ಮೂಲ, ವಲಸಿಗರ ನಡುವೆ ಜಟಾಪಟಿ
ಮೈಸೂರು

ಕಾಂಗ್ರೆಸ್‍ನಲ್ಲಿ ಮೂಲ, ವಲಸಿಗರ ನಡುವೆ ಜಟಾಪಟಿ

November 12, 2019

ಬೆಂಗಳೂರು, ನ.11(ಕೆಎಂಶಿ)- ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿ ತಂತೆ ಕಾಂಗ್ರೆಸ್ ಪಕ್ಷದಲ್ಲಿ ಮೂಲ ಮತ್ತು ವಲಸಿಗರ ನಡುವೆ ಜಟಾಪಟಿ ನಡೆದಿದೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ನಾಯಕರ ಮುಂದುವರೆದ ಎರ ಡನೇ ಸಭೆಯಲ್ಲೂ ಇದೇ ಪ್ರಸ್ತಾಪವಾ ಗಿದೆ. ಆದರೆ ಈ ಬಾರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆದಿದೆ.

ಪಕ್ಷ ಮತ್ತು ಬೆನ್ನಿಗೆ ಚೂರಿ ಹಾಕಿದವರಿಗೆ ಮಣೆ ಹಾಕದೇ ಸಂಘಟನಾತ್ಮಕ ಮತ್ತು ಗೆಲ್ಲುವ ಅಭ್ಯರ್ಥಿಗೆ ಅವಕಾಶ ಮಾಡಿ ಕೊಡಬೇಕೆಂದು ಶಿವಕುಮಾರ್ ಸಭೆಯಲ್ಲಿ ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ 8 ಕ್ಷೇತ್ರ ಗಳಿಗೆ ಆಯ್ಕೆಯನ್ನು ನೀವೇ ಮಾಡಿಕೊಂಡಿ ದ್ದೀರಿ, ಉಳಿದ ಕ್ಷೇತ್ರಗಳಿಗೆ ಆಯ್ಕೆ ಮಾಡುವ ಕ್ಷೇತ್ರಗಳಿಗೆ ನಮ್ಮ ಸಲಹೆ ಪರಿಗಣಿಸಿ, ಸಾಧ್ಯ ವಿಲ್ಲವೆಂದರೆ ನೀವೇ ಪಕ್ಷವನ್ನು ಮುನ್ನ ಡೆಸಿ ಎಂದು ಸಿದ್ದರಾಮಯ್ಯ ಮತ್ತು ಗುಂಡೂರಾವ್‍ಗೆ ಖಾರವಾಗಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಮತ್ತು ಗೋಕಾಕ್ ಕ್ಷೇತ್ರದ ಆಯ್ಕೆ ವಿಷಯದಲ್ಲೇ ಉಭಯ ನಾಯಕರ ನಡುವೆ ಘರ್ಷಣೆಗೆ ಕಾರಣವಾಯಿತು. ಜಾರಕಿಹೊಳಿ ಕುಟುಂಬ ಹೊರಗಡೆ ಜಗಳವಾಡಿದಂತೆ ನಾಟಕವಾಡಿ, ತಮ್ಮ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳು ತಮಗಿ ರಬೇಕೆಂದು ನೋಡಿಕೊಳ್ಳುತ್ತೆ ಎಂದು ಶಿವ ಕುಮಾರ್ ಸಭೆಯ ಮುಂದೆ ಬಿಡಿಸಿಟ್ಟರು.

ಅವನಿಲ್ಲದಿದ್ದರೆ, ಇವನು, ಇವನಿಲ್ಲದಿದ್ದರೆ ಅವನು ಎನ್ನುವಂತೆ ಸಹೋದರರೇ ಹಂಚಿ ಕೊಳ್ಳುತ್ತಾರೆ. ಇದಕ್ಕೆ ಅವಕಾಶ ನೀಡುವುದು ಬೇಡ. ಆ ಕ್ಷೇತ್ರಗಳಲ್ಲಿ ಬೇರೆಯವರು ಬೆಳೆ ಯಲು ಅವಕಾಶ ಮಾಡಬೇಕು. ಆ ಕುಟುಂಬ ತಮ್ಮ ರಾಜಕೀಯ ಲಾಭಕ್ಕಾಗಿ ಯಾರಿಗೆ ಬೇಕಾದರೂ ಚೂರಿ ಇರಿಯು ತ್ತಾರೆ, ಪಕ್ಷಕ್ಕೂ ಯಾಮಾರಿಸುತ್ತಾರೆ. ಇಂತಹವರಿಗೆ ಅವಕಾಶ ಮಾಡಿಕೊಡಬಾರ ದೆಂದು ಶಿವಕುಮಾರ್ ಪಟ್ಟು ಹಿಡಿದು, ಬಿಜೆಪಿಯಿಂದ ಹೊರಬಂದಿರುವ ರಾಜು ಕಾಗೆಗೆ ಕಾಗವಾಡ ಕ್ಷೇತ್ರ, ಅಶೋಕ್ ಪೂಜಾರಿಗೆ ಗೋಕಾಕ್ ಕ್ಷೇತ್ರದ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದರು.

ಗೋಕಾಕ್ ಕ್ಷೇತ್ರದಿಂದ ಲಖನ್ ಜಾರಕಿ ಹೊಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ಸಿದ್ಧರಾಮಯ್ಯ ಪಟ್ಟು ಹಿಡಿದಾಗ ಶಿವ ಕುಮಾರ್ ಬಲವಾಗಿ ತಮ್ಮ ವಾದ ಮಂಡಿ ಸಿದ್ದಲ್ಲದೆ, ಅಶೋಕ್ ಪೂಜಾರಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.ಜಾರಕಿಹೊಳಿ ಸಹೋದರರು ರಾಜ ಕೀಯಕ್ಕೆ ತಲೆಬಾಗುವುದು ಬೇಡ. ಸಹೋ ದರರು ಮಾತನಾಡಿಕೊಂಡು ಒಂದೊಂದು ಕಡೆ ಇರುತ್ತಾರೆ. ತಮ್ಮ ಹಿತ ಕಾಪಾಡಿ ಕೊಳ್ಳುತ್ತಾರೆ. ಆದರೆ ಅವರ ಹಿಡಿತದಿಂದ ಗೋಕಾಕ್ ಕ್ಷೇತ್ರ ಮುಕ್ತವಾಗಬೇಕು.

ಈಗಾಗಲೇ ಮೊದಲ 8 ಕ್ಷೇತ್ರಗಳಿಗೆ ನಿಮಗೆ ಬೇಕಾದವರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೀರಿ. ಉಳಿದ ಕ್ಷೇತ್ರಗಳಲ್ಲಿ ನಮ್ಮ ಮಾತಿಗೂ ಮನ್ನಣೆ ನೀಡಿ, ಇದು ಸಾಧ್ಯವಿಲ್ಲವೆಂದರೆ,

ನಿಮ್ಮ ಪಾಡು ನಿಮಗೆ, ನಮ್ಮ ಪಾಡು ನಮಗೆ ಎಂದು ಖಾರವಾಗಿ ಸಿದ್ದರಾಮಯ್ಯನವ ರಿಗೆ ಶಿವಕುಮಾರ್ ತಿಳಿಸಿದ್ದಾರೆ. ಹೀಗೆ ರಾಜ್ಯ ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗ ಕಾಂಗ್ರೆಸ್ಸಿಗರ ನಡುವೆ ಕಚ್ಚಾಟ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಸಭೆಯ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಾಕಿ 7 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಇಂದು ನಡೆದ ಸಭೆ ಅಪೂರ್ಣ ಗೊಂಡಿದ್ದು ಬುಧವಾರದ ನಂತರ ಪುನಃ ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣ ಗೊಳಿಸುತ್ತೇವೆ ಎಂದರು. ಬಹುತೇಕ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಂದೆರಡು ಕ್ಷೇತ್ರಗಳ ವಿಷಯದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಆದರೆ ಈ ವಿಷಯದಲ್ಲಿ ಯಾವ ರೀತಿಯ ತೊಂದರೆಯೂ ಇಲ್ಲ ಎಂದರು.

Translate »