ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ದಾಳಿ ಪ್ರಕರಣ: ವಿರಾಜಪೇಟೆ, ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕೊಡಗು

ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ದಾಳಿ ಪ್ರಕರಣ: ವಿರಾಜಪೇಟೆ, ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ

February 14, 2019

ವಿರಾಜಪೇಟೆ: ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಮೇಲೆ ಜೆಡಿಎಸ್ ಪಕ್ಷದ ಕೆಲವರು ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ವೀರಾಜಪೇಟೆ ತಾಲೂಕು ಬಿಜೆಪಿ ಸಮಿತಿಯ ಕಾರ್ಯ ಕರ್ತರು ಇಂದು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು. ಪ್ರೀತಂ ಗೌಡರ ಹಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ನೇರ ಹೊಣೆಯಾಗಿ ದ್ದಾರೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊ ಳ್ಳಬೇಕೆಂದು ಆಗ್ರಹಿಸಿ ಸ್ಥಳದಲ್ಲಿಯೇ ತಾಲೂಕು ತಹಶಿಲ್ದಾರ್ ಗೋವಿಂದರಾಜು ಅವರಿಗೆ ಮನವಿ ನೀಡಿ ಇದನ್ನು ರಾಜ್ಯಪಾ ಲರಿಗೆ ಸಲ್ಲಿಸುವಂತೆ ಒತ್ತಾಯಿಸಿದರು.

ತಾಲೂಕು ಬಿಜೆಪಿ ಸಮಿತಿಯ ಅಧ್ಯಕ್ಷ ಅರುಣ್ ಭೀಮಯ್ಯ ಪ್ರತಿಭಟನಕಾರರನ್ನು ದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವ ಸ್ಥೆಯಲ್ಲಿ ಶಾಸಕರ ಮೇಲಿನ ಹಲ್ಲೆ ಖಂಡ ನೀಯ. ಜೆಡಿಎಸ್‍ನ ಗೂಂಡಾ ಪ್ರವೃತ್ತಿ ಯನ್ನು ಖಂಡಿಸುತ್ತೇವೆ. ಸರಕಾರ ಜನ ತೆಯ ಬಗ್ಗೆ ಕಾಳಜಿ ವಹಿಸದೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದು ದುರದೃಷ್ಟ. ಬಿಜೆಪಿ ಪಕ್ಷವನ್ನು ಹತ್ತಿಕ್ಕಲೇ ಬೇಕು ಎಂಬ ಉದ್ದೇಶದಿಂದ ನಡೆಸುತ್ತಿರುವ ಷಡ್ಯಂತರ ವಾಗಿದೆ. ಆದರೆ ಬಿಜೆಪಿ ಇದನ್ನು ದಿಟ್ಟ ವಾಗಿ ಎದುರಿಸಿ ಪ್ರೀತಂಗೌಡರಿಗೆ ಬೆಂಬಲ ವಾಗಿ ನಿಲ್ಲಲಿದೆ. ರಾಜ್ಯದ ಅಭಿವೃದ್ಧಿ ಮರೆತು ಗೂಂಡಾಗಿರಿಗೆ ಬೆಂಬಲವಾಗಿ ರುವ ಸಮ್ಮಿಶ್ರ ಸರಕಾರದಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಮುಂದು ವರಿಯುವ ನೈತಿಕತೆಯಿಲ್ಲ ಎಂದು ಅರುಣ್ ಭೀಮಯ್ಯ ದೂರಿದರು.

ಜಿಲ್ಲಾ ಬಿಜೆಪಿ ಸಮಿತಿಯ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ ಮಾತನಾಡಿ, ಕೊಡಗಿನಲ್ಲಿ ಬಾಂಗ್ಲಾ ವಲಸಿಗರ ಬಗ್ಗೆ ನಾವು ವಿರೋಧಿಸುತ್ತಲೇ ಬಂದಿದ್ದೇವೆ. ಆದರೆ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂದು ಜಿಲ್ಲೆ ಯಲ್ಲಿ ಕಾನೂನು ವ್ಯವಸ್ಥೆಗೆ ಧಕ್ಕೆಯಾ ಗುತ್ತಿದ್ದು, ಕೊಲೆ, ಅತ್ಯಾಚಾರ ನಡೆಸುತ್ತಿ ರುವುದು ಬಾಂಗ್ಲಾ ದೇಶಿಗರು ಹಾಗೂ ಅಸ್ಸಾಂನವರಿಂದ ಇವರನ್ನು ಪತ್ತೆಹಚ್ಚಿ ಕೂಡಲೇ ಕೊಡಗು ಜಿಲ್ಲೆಯಿಂದ ಹೊರ ಕಳಿಸಿದರೆ ಮಾತ್ರ ಇಲ್ಲಿನ ಜನತೆ ನೆಮ್ಮದಿ ಯಿಂದ ಇರಲು ಸಾಧ್ಯ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಘಟ ಕದ ಅಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕಾಂತಿ ಸತೀಶ್, ವಿರಾಜಪೇಟೆ ನಗರ ಬಿಜೆಪಿ ಅಧ್ಯಕ್ಷ ಅಂಜಪರುವಂಡ ಅನಿಲ್ ಮಂದಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಅಚ್ಚಪಂಡ ಮಹೇಶ್ ಗಣಪತಿ, ಭವ್ಯ ಚಿಟ್ಟಿಯಪ್ಪ, ತಾಲೂಕು ಪಂಚಾ ಯಿತಿ ಸದಸ್ಯರಾದ ಬಿ.ಎಂ.ಗಣೇಶ್, ಅಜಿತ್ ಕರುಂಬಯ್ಯ, ಪಟ್ಟಣ ಪಂಚಾ ಯಿತಿ ಸದಸ್ಯರಾದ ಹರ್ಷವರ್ಧನ, ಆಶಾ ಸುಬ್ಬಯ್ಯ, ಯಶೋಧ, ಸುನಿತಾ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಕುಶಾಲನಗರ ವರದಿ: ಬಿಜೆಪಿ ಶಾಸಕ ಪ್ರಿತಂಗೌಡ ಅವರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆ ಸಿದ ಘಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಸೋಮವಾರಪೇಟೆ ತಾಲೂಕು ಯುವ ಮೋರ್ಚಾದ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ ನೇತೃತ್ವದಲ್ಲಿ ಜಮಾಯಿಸಿದ ಯುವ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ನಿವಾಸದ ಮೇಲೆ ದಾಳಿ ನಡೆಸಿ ಬಿಜೆಪಿ ಕಾರ್ಯಕರ್ತರಿಗೆ ಕಲ್ಲಿನಿಂದ ಹಲ್ಲೆ ನಡೆಸಿ ರುವ ಆರೋಪಿಗಳನ್ನು ತಕ್ಷಣ ಬಂಧಿಸ ಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಎಂ.ಡಿ.ಕೃಷ್ಣಪ್ಪ, ಜೆಡಿಎಸ್ ಕಾರ್ಯಕರ್ತರು ಗೂಂಡಾಗಿರಿ ಪ್ರದರ್ಶಿಸಿ ದೌರ್ಜನ್ಯ ಎಸಗಿದ್ದಾರೆ. ದಾಂಧಲೆ ನಡೆಸಿದ ಸಚಿವ ರೇವಣ್ಣ ಅವರ ಬೆಂಬಲಿಗರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಯ ನೈತಿಕ ಹೊಣೆ ಹೊತ್ತು ರೇವಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಪಪಂ ಸದಸ್ಯರಾದ ಅಮೃತ್‍ರಾಜ್, ಬಿ.ಜಯವರ್ಧನ (ಕೇಶವ), ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಪಕ್ಷದ ಮುಖಂಡರಾದ ಜಿ.ಎಲ್.ನಾಗರಾಜ್, ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ವರದ, ನಿಸಾರ್ ಅಹಮ್ಮದ್, ಎಚ್.ಎನ್. ರಾಮಚಂದ್ರ, ಎಂ.ಎಂ.ಚರಣ್, ವೈಶಾಖ್, ಚೆಲುವರಾಜು, ಅನೀಶ್ ಮತ್ತಿತರರು ಇದ್ದರು.

Translate »