ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗಾಗಿ ಫೆ.23ರಂದು ಬೃಹತ್ ಉದ್ಯೋಗ ಮೇಳ
ಮೈಸೂರು

ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗಾಗಿ ಫೆ.23ರಂದು ಬೃಹತ್ ಉದ್ಯೋಗ ಮೇಳ

February 19, 2019

ಮೈಸೂರು: ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗಾ ವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಂಜನಗೂಡು ತಾಲೂಕಿನ ತಾಂಡವಪುರದ ಅಗ್ನಿ ನೇತ್ರಾಂ ಬಿಕ ದೇವಾಲಯ ಆವರಣದಲ್ಲಿ ಫೆ.23 ರಂದು ಬೆಳಿಗ್ಗೆ 9ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರ ಫೌಂಡೇಶನ್ ಗ್ರಾಮೀ ಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಉದ್ಯೋಗ ಮೇಳ ನಡೆಸ ಲಾಗುತ್ತಿದೆ. ಫೆ.23ರಂದು ಬೆಳಿಗ್ಗೆ 9ರಿಂದ ಸಂಜೆವರೆಗೂ ನಡೆಯಲಿರುವ ಮೇಳದಲ್ಲಿ ವರುಣಾ ಕ್ಷೇತ್ರದ ವಿವಿಧ ಗ್ರಾಮಗಳ ನಿರು ದ್ಯೋಗಿ ಯುವಕ-ಯುವತಿಯರು ಪಾಲ್ಗೊ ಳ್ಳಬಹುದಾಗಿದೆ. ಈ ಮೇಳದಲ್ಲಿ ಇನ್ಫೋ ಸಿಸ್, ಈಗಲ್, ಏಮ್ಸ್, ಕೋಟಕ್, ಟಿವಿಎಸ್, ಫ್ರೆಶ್ ವರ್ಲ್ಡ್, ಮುತ್ತೂಟ್ ಫೈನಾನ್ಸ್, ಜಸ್ಟ್ ಡಯಲ್, ಹೆಚ್‍ಜಿಎಸ್, ಯುರೇಕಾ ಸೇರಿದಂತೆ 100ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ. ಸುಮಾರು 5 ಸಾವಿರಕ್ಕೂ ಹೆಚ್ಚು ಹುದ್ದೆ ಗಳಿಗೆ ವಿವಿಧ ಕಂಪನಿಗಳು ಅರ್ಹ ಅಭ್ಯರ್ಥಿ ಗಳನ್ನು ನೇಮಕ ಮಾಡಿಕೊಳ್ಳಲಿವೆ. 8ನೇ ತರಗತಿ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪೆÇ್ಲೀಮಾ, ಬಿಇ, ನರ್ಸಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿ ರುವವರು ಹಾಗೂ ವಾಹನ ಚಾಲಕರು, ವಿಶೇಷ ಚೇತನ ಅಭ್ಯರ್ಥಿಗಳು ಭಾಗವ ವಹಿಸಬಹುದು ಎಂದರು.ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾ ಕಾಂಕ್ಷಿಗಳಿಗೆ ನೋಂದಣಿ ಉಚಿತವಾಗಿರು ತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಗು ವುದು. ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿ ದರು. ಹೆಚ್ಚಿನ ವಿವರಗಳಿಗೆ ಮೊ.87223 32266, 9880178959, 9880626 344ನ್ನು ಸಂಪರ್ಕಿಸುವಂತೆ ಕೋರಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡ ಬೇಕೆಂಬುದು ಪಕ್ಷದ ಕಾರ್ಯಕರ್ತರ ಹಾಗೂ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರ ಹಂಚಿಕೆ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದು ಪಕ್ಷದ ಕಾರ್ಯಕರ್ತರು ಆ ತೀರ್ಮಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಹಿಂದೆಯೇ ಅಭಿವೃದ್ಧಿಯಾಗಿದೆ: ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಅಭಿವೃದ್ಧಿ ಮಾಡಿದ್ದಾರೆ. ವರುಣಾ ಕ್ಷೇತ್ರದ ಅಭಿ ವೃದ್ಧಿಗೆ ಸಿದ್ದರಾಮಯ್ಯನವರ ಕೊಡುಗೆ ಅಪಾರ. ಈಗ ಕುಡಿಯುವ ನೀರು, ಕೆರೆ ತುಂಬಿಸುವುದು, ಏತ ನೀರಾವರಿ, ರಸ್ತೆ, ಚರಂಡಿ ಅಳಿದುಳಿದ ಕಾಮಗಾರಿಗಳ ಬಗ್ಗೆ ಒತ್ತು ನೀಡಲಾಗುತ್ತಿದೆ. ಸುದ್ದಿಗೋಷ್ಠಿ ಯಲ್ಲಿ ಅಕ್ಷರ ಫೌಂಡೇಷನ್‍ನ ಕುಮಾರ್ ಉಪ್ಪಾರ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕಾಂಗ್ರೆಸ್ ಮುಖಂಡÀ ಬಸವ ರಾಜ್, ರಂಗಸ್ವಾಮಿ, ವರುಣ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »