ರಾಜ್ಯದ ಕೆಲ ವಿವಿಗಳಲ್ಲಿ ಕನ್ನಡ ಕಣ್ಮರೆ!
ಮೈಸೂರು

ರಾಜ್ಯದ ಕೆಲ ವಿವಿಗಳಲ್ಲಿ ಕನ್ನಡ ಕಣ್ಮರೆ!

January 8, 2019

ಮೈಸೂರು: ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿವಿಧ ಕೋರ್ಸ್ ಗಳಲ್ಲಿ ಕನ್ನಡ ವಿಷಯವನ್ನು ಮೊಟಕು ಗೊಳಿಸಲಾಗುತ್ತಿರುವುದರ ವಿರುದ್ಧ ಅಧ್ಯಾಪಕ ವರ್ಗ ದಂಗೆ ಏಳುವಂತೆ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಸಲಹೆ ನೀಡಿದ್ದಾರೆ.

ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾ ನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ, ಅಲ್ಲಮ್ಮ ಪ್ರಭು ಸಂಶೋಧನಾ ಕೇಂದ್ರದ ಸಂಯು ಕ್ತಾಶ್ರಯದಲ್ಲಿ ಸೋಮವಾರ ನಡೆದ ಪುನಶ್ಚೇತನ' ಕೃತಿ ಬಿಡುಗಡೆ ಹಾಗೂಕನ್ನಡ ಸಾಹಿತ್ಯ; ಬೋಧನೆ ಮತ್ತು ಸಂಶೋ ಧನೆಯ ಹೊಸ ಸಾಧ್ಯತೆಗಳ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಹಲವು ವಿಶ್ವವಿದ್ಯಾಲಯ ಹಾಗೂ ಕಾಲೇಜು ಗಳಲ್ಲಿ ಕನ್ನಡ ವಿಷಯವನ್ನು ಮೊಟಕು ಗೊಳಿಸಲಾಗಿದೆ. ಎಂಎ, ಬಿಬಿಎಂ, ವೈದ್ಯಕೀಯ ಶಿಕ್ಷಣ ಇನ್ನಿತರ ವಿಷಯಗಳಲ್ಲಿ ಕನ್ನಡ ಅಧ್ಯಯನ ಅಗತ್ಯವಿಲ್ಲ ಎಂದು ತೆಗೆದು ಹಾಕುತ್ತಿರುವುದು ಕಂಡು ಬಂದಿದೆ. ಈ ಕ್ರಮದ ವಿರುದ್ಧ ಅಧ್ಯಾಪಕ ವರ್ಗ ಸಂಘಟನೆ ಯಾಗಿ ದಂಗೆ ಏಳುವ ಮೂಲಕ ಕನ್ನಡ ವಿರೋಧಿ ನಿಲುವು ತಾಳುವವರಿಗೆ ಕಠಿಣ ಎಚ್ಚರಿಕೆ ನೀಡಬೇಕು ಎಂದರು.

ವಿಶ್ವವಿದ್ಯಾಲಯಗಳು ಪ್ರಯೋಗ ಶಾಲೆಗಳಾಗುತ್ತಿವೆ. ನನ್ನ ಅಧ್ಯಾಪಕ ಜೀವ ನದ 40 ವರ್ಷಗಳಲ್ಲಿ ಇತ್ತೀಚಿನ 10 ವರ್ಷದಲ್ಲಿ ತೊಳಲಾಟ ಅನುಭವಿಸಿದ್ದೇನೆ. ವಾರ್ಷಿಕ ಪರೀಕ್ಷೆಯನ್ನು ತೆಗದು ಹಾಕಿ, ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿ ದರು. ನಮ್ಮ ಶಿಕ್ಷಣ ಪದ್ಧತಿ ಬಿಟ್ಟು ಪಾಶ್ಚಿ ಮಾತ್ಯ ಶಿಕ್ಷಣ ಪದ್ಧತಿ ಅಳವಡಿಸಿ ವಿವಿ ಗಳನ್ನು ಪ್ರಯೋಗ ಶಾಲೆಗಳನ್ನಾಗಿ ಮಾಡು ತ್ತಿರುವುದು ಆತಂಕದ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಅವರ ಮೇಲೆ ಪ್ರಯೋಗ ನಡೆಸುತ್ತಿದ್ದೇವೆ ಎಂದು ಅನಿಸುತ್ತಿದೆ. ಅಸಹಜವಾಗಿ ಬೋಧನೆ ಮಾಡಲಾಗುತ್ತಿದೆ ಎಂದು ಅಸ ಮಾಧಾನ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆಗೊಳಿಸಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣ ದಲ್ಲಿ ಅಧ್ಯಾಪಕರ ಪಾತ್ರ ಪ್ರಮುಖ. ಮಕ್ಕಳ ಮತ್ತು ಯುವ ಸಮುದಾಯದ ಬದುಕಿನ ಶಿಲ್ಪಿಗಳು ಶಿಕ್ಷಕರೇ ಆಗಿದ್ದಾರೆ. ಅಧ್ಯಾಪಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಯಾವುದೇ ವಿವಿ, ಶಿಕ್ಷಣ ಸಂಸ್ಥೆ ಅಲ್ಲಿ ಕೆಲಸ ಮಾಡುವ ಶಿಕ್ಷಕರ ಕ್ರಿಯಾಶೀಲತೆ ಮತ್ತು ಆದರ್ಶ ವನ್ನು ಅವಲಂಬಿಸಿರುತ್ತದೆಯೇ ಹೊರತು ಕಟ್ಟಡ, ಸಾಮಥ್ರ್ಯ, ಸೊಬಗನ್ನು ಅವ ಲಂಬಿಸಿರುವುದಿಲ್ಲ. ಪ್ರಾಧ್ಯಾಪಕ ವರ್ಗ ತಮ್ಮ ಸಾಮಥ್ರ್ಯಕ್ಕೆ ಸಾಣೆ ಹಿಡಿಯಬೇಕು. ಅಧ್ಯಾಪಕ ವರ್ಗದ ಮುಖ್ಯ ಗುರಿ ಕರ್ತವ್ಯ. ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತ ರಾಗಿರುವುದು ಅನಿವಾರ್ಯವೂ ಹಾಗೂ ತುರ್ತು ಕ್ರಮವೂ ಆಗಿದೆ ಎಂದು ಅಭಿ ಪ್ರಾಯಪಟ್ಟರು.

ಚಿತ್ರದುರ್ಗದ ಶ್ರಿ ಮುರುಘಾರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕಾರ್ಯ ಕ್ರಮದಲ್ಲಿ ಇದೇ ವೇಳೆ ವಿವಿಧ ವಿಷಯ ಗಳ ಕುರಿತು ವಿಚಾರಗೋಷ್ಠಿ ನಡೆಯಿತು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಎಸ್. ತಾರಾನಾಥ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕೃತಿಯ ಪ್ರಧಾನ ಸಂಪಾದಕ ಪ್ರೊ.ನೀಲಗಿರಿ ತಳವಾರ್, ಕೃತಿಯ ಸಂಪಾದಕ ಡಾ.ಸಿ. ಟಿ.ಜಯಣ್ಣ, ಡಾ.ಜಿ.ಎಸ್.ಅಶೋಕ್ ಉಪಸ್ಥಿತರಿದ್ದರು.

Translate »