ಮೈಸೂರು: ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ, ಅಂತರರಾಷ್ಟ್ರೀಯ ಮಾನ ದಂಡದ ಡಯಾಲಿಸಿಸ್ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.
ಬಳಿಕ ಮಾತನಾಡಿದ ಆಸ್ಪತ್ರೆಯ ಮೂತ್ರ ಪಿಂಡ ವಿಭಾಗದ ಮುಖ್ಯಸ್ಥ ಡಾ.ಪಿ.ಎಂ. ಉತ್ತಪ್ಪ, ಡಯಾಲಿಸಿಸ್ ರೋಗಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸುವ ಉದ್ದೇ ಶದಿಂದ ನಿರ್ಮಿಸಲಾಗಿದೆ. ಇದೊಂದು ಅತ್ಯಾಧುನಿಕ ಕೇಂದ್ರವಾಗಿದ್ದು, ಸುರಕ್ಷಿತ, ಸ್ವಚ್ಛ ಮತ್ತು ಶಾಂತ ವಾತಾವರಣದಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಮೂತ್ರಪಿಂಡ ಸಮಸ್ಯೆಗಳನ್ನು ಹೊಂದಿ ರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ವಾಗಿದ್ದು, ರೋಗಿಗಳ ಹಿತದೃಷ್ಟಿಯಿಂದ ಈ ಬಗೆಯ ಅತ್ಯಾಧುನಿಕ ಕೇಂದ್ರಗಳು ಅಗತ್ಯವಾಗಿವೆ. ಉತ್ತಮ ಹಾಗೂ ವಿಶಾಲ, ಸ್ವಚ್ಛ ಪರಿಸರವನ್ನು ಒದಗಿಸುವುದರಿಂದ ರೋಗಿಗಳ ಒಟ್ಟಾರೆ ಯೋಗಕ್ಷೇಮ ಮತ್ತು ಅವರ ಡಯಾಲಿಸಿಸ್ ಚಿಕಿತ್ಸೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಅನುಕೂಲಕರವಾಗಿದೆ ಎಂದರು.
ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಮಾತನಾಡಿ, ಹೊಸ ಕೇಂದ್ರ 12 ಪ್ರತ್ಯೇಕ ಡಯಾಲಿಸಿಸ್ ಘಟಕ ಗಳನ್ನು ಹೊಂದಿದೆ. ಇದು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಪ್ರತ್ಯೇಕ ಟಿವಿಗಳನ್ನು ಅಳವಡಿಸಲಾಗಿದೆ. ಇದರಿಂದ ರೋಗಿಗಳು ತಮ್ಮ ನೆಚ್ಚಿನ ಕಾರ್ಯಕ್ರಮ ಗಳನ್ನು ವೀಕ್ಷಿಸಬಹುದು ಮತ್ತು ಕೇಂದ್ರದ ಉಚಿತ ವೈದ್ಯಕೀಯ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದರು.
ಕೇಂದ್ರದ ವಿನ್ಯಾಸದಲ್ಲಿ ನೈಸರ್ಗಿಕ ಬೆಳಕಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದೇ ಪ್ರದೇಶದಲ್ಲಿ ಎ¯್ಲÁ ರೋಗಿಗಳ ಮೇಲ್ವಿಚಾರಣೆ ಮಾಡಲು ಮತ್ತು ಅವರ ಅಗತ್ಯತೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಹಾಯವಾಗುತ್ತದೆ. ಉನ್ನತ ಗುಣಮಟ್ಟ ವನ್ನು ನಿರ್ವಹಿಸಲು ಸುಲಭವಾಗಿದೆ ಎಂದು ತಿಳಿಸಿದರು. ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ಕರ್ನಲ್ ರಾಹುಲ್ ತಿವಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.