ಪ್ರಕೃತಿ ಸಂಪನ್ಮೂಲ ರಕ್ಷಣೆಗೆ `ಕಾವೇರಿ ಕೂಗು’ ರೀತಿಯ ಅಭಿಯಾನ ಅಗತ್ಯ
ಮೈಸೂರು

ಪ್ರಕೃತಿ ಸಂಪನ್ಮೂಲ ರಕ್ಷಣೆಗೆ `ಕಾವೇರಿ ಕೂಗು’ ರೀತಿಯ ಅಭಿಯಾನ ಅಗತ್ಯ

February 15, 2020

ಮೈಸೂರು, ಫೆ.14(ಎಂಟಿವೈ)- ಅರಣ್ಯ, ನದಿ ಸೇರಿದಂತೆ ಪ್ರಕೃತಿದತ್ತ ಸಂಪನ್ಮೂಲಗಳನ್ನು ಸಂರ ಕ್ಷಿಸುವ ನಿಟ್ಟಿನಲ್ಲಿ `ಕಾವೇರಿ ಕೂಗು’ ಮಾದರಿಯ ಅಭಿಯಾನ ಅಗತ್ಯವಾಗಿದೆ ಎಂದು ಮೈಸೂರು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ರುವ ವಿದ್ಯಾ ರಣ್ಯ ಕನ್ವೆನ್ಷನ್ ಹಾಲ್‍ನಲ್ಲಿ `ಈಶಾ ಫೌಂಡೇಷನ್‍ನ ಕಾವೇರಿ ಕೂಗು’ ಅಭಿಯಾನ ವತಿಯಿಂದ ಶುಕ್ರವಾರ ಆಯೋಜಿಸಿದ್ದ `ಲಕ್ಷ, ಲಕ್ಷ ಆದಾಯ ಪಡೆಯುವ ಅರಣ್ಯ ಕೃಷಿ ಸಂವಾದ’ ಉದ್ಘಾಟಿಸಿ, ಮಾತನಾಡಿದರು.

ಕಾವೇರಿ ನದಿ 50 ವರ್ಷಗಳ ಹಿಂದೆ ಹೇಗೆ ಸಂಪ ದ್ಭರಿತವಾಗಿತ್ತು. ಆದರಿಂದು ನದಿಯ ಸ್ಥಿತಿ ಅವಲೋ ಕಿಸಿದರೆ ಕಳವಳವಾಗುತ್ತದೆ. ನದಿ ರಕ್ಷಣೆಗೆ ತುರ್ತಾಗಿ ಅಭಿಯಾನ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು. ಕೃಷಿ ಭೂಮಿಯಲ್ಲಿ ರೈತರು ಆದಾಯ ನೀಡುವ ಮರಗಳನ್ನು ಬೆಳೆಸುವುದು ಅಗತ್ಯ. ಮರ ಗಳನ್ನು ಹೆಚ್ಚು ನೆಡುವುದರಿಂದ ಮಣ್ಣಿನ ಸಂರಕ್ಷಣೆ ಯಾಗುತ್ತದೆ. ಜತೆಗೆ ಸರ್ಕಾರವು ರೈತರಿಗೆ ವೃಕ್ಷ ಕೃಷಿಗೆ ಸ್ಪರ್ಧಾತ್ಮಕ ಮಾರುಕಟ್ಟೆ ಕಲ್ಪಿಸಿ ಕೊಡುವ, ಉತ್ತಮ ದರ ನಿಗದಿಪಡಿಸುವ ಮೂಲಕ ಪ್ರೋತ್ಸಾಹ ನೀಡಲಿದೆ. ರಾಜ್ಯದ ವಿವಿಧೆಡೆ 1.2 ಲಕ್ಷ ಹೆಕ್ಟೇರ್‍ಗಳಲ್ಲಿ ಮರಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪರಿಸರದ ಸಮತೋಲನ ಕಾಪಾಡಿಕೊಂಡಂತಾಗಿದೆ. ಜತೆಗೆ, ಕಳೆದ 2 ವರ್ಷಗಳಿಂದ ಮಳೆ ಪ್ರಮಾಣವೂ ಹೆಚ್ಚಾಗಿದೆ ಎಂದು ಗಮನ ಸೆಳೆದರು. ಅರಣ್ಯ ಕೃಷಿ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ ಎ.ಎಂ.ಅಣ್ಣಯ್ಯ ಮಾತ ನಾಡಿ, ಪ್ರಕೃತಿದತ್ತ ಸಂಪನ್ಮೂಲಗಳ ಸಂರಕ್ಷಣೆ ಕುರಿತಂತೆ ಜನಪ್ರತಿನಿಧಿಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಸಂರಕ್ಷಿಸುವ ಕಾರ್ಯಮಾಡಬೇಕು. ಆದರೆ, ಅವರು ಆ ಕಾರ್ಯ ಮಾಡದ ಕಾರಣ ಈಶಾ ಫೌಂಡೇಷನ್ ಸಂಸ್ಥಾಪಕ ಗುರು ಜಗ್ಗಿ ವಾಸುದೇವ್ ಅವರ ನೇತೃತ್ವ ದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ತಲಕಾವೇರಿಯಿಂದ ತಂಜಾವೂರಿನವರೆಗೂ ಬೈಕ್ ರ್ಯಾಲಿ ನಡೆಸಿ ಮೂಲಕ ರೈತರು, ಜನಸಾಮಾನ್ಯ ರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಿಡ ನೆಡುವುದು ಸುಲಭ. ಆದರೆ, ಅವುಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಪ್ರಕೃತಿಯಲ್ಲಿ ಸಮತೋಲನ ಇಲ್ಲದಿದ್ದರೆ ವಿವಿಧ ರೀತಿಯ ಸಮಸ್ಯೆ ಗಳು ಎದುರಾಗುತ್ತವೆ. ಪರಿಸರದ ಈ ಆಕ್ರಂದನವನ್ನು ಅರ್ಥಮಾಡಿಕೊಂಡು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ವಿಶ್ವದ ಹಲವು ರಾಷ್ಟ್ರ ಗಳಲ್ಲಿ ತಾಪಮಾನ ಏರಿಕೆ, ಕಾಡ್ಗಿಚ್ಚು, ಬರ, ಪ್ರವಾಹ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿರುವುದನ್ನು ಕಾಣಬಹುದು. ಇದಕ್ಕೆ ಪ್ರಕೃತಿಯೊಂದಿಗಿನ ಹೊಂದಾಣಿಕೆಯ ಕೊರ ತೆಯೇ ಪ್ರಮುಖ ಕಾರಣವಾಗಿದೆ. ಹೀಗಾಗಿ, ಮತ್ತೆ ಕಾವೇರಿಯನ್ನು 50 ವರ್ಷಗಳ ಹಿಂದಿನಂತೆ ಸಮೃದ್ಧ ವಾಗಿ ಹರಿಯುವುದನ್ನು ನೋಡಬೇಕಿದೆ. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಉತ್ತೇ ಜನದ ನುಡಿಗಳನ್ನಾಡಿದರು.

ರಾಜ್ಯದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶ ಇರ ಬೇಕಿತ್ತು. ಆದರೆ, ಕೇವಲ ಶೇ.22 ರಷ್ಟಿದೆ. ಅರಣ್ಯ ಮಾತ್ರವಲ್ಲ ರಸ್ತೆ, ಕಾಲುವೆ, ಬೆಟ್ಟ ಹೀಗೆ ಎಲ್ಲವನ್ನೂ ಒತ್ತುವರಿ ಮಾಡಲಾಗಿದೆ. ಒತ್ತುವರಿಯಾಗಿರುವ ಸರಕಾರಿ ಸ್ವತ್ತನ್ನು ಮರಳಿ ಪಡೆದು ಅಭಿವೃದ್ಧಿ ಪಡಿ ಸುವ ನಿಟ್ಟಿನಲ್ಲಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇರ ಬೇಕಾದುದು ಬಹಳ ಮುಖ್ಯ. ಗ್ಯಾಸ್, ಸೋಲಾರ್ ವ್ಯವಸ್ಥೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಮರಗಳ ಉಳಿವು ಸಾಧ್ಯವಾಗಿದೆ. ಅರಣ್ಯ ಅಭಿವೃದ್ಧಿಗಾಗಿ, ರೈತರ ಸಲಹೆಯಂತೆ ಕಾನೂನಿನಲ್ಲಿಯೂ ಅನೇಕ ಸುಧಾರಣೆಗಳನ್ನು ತರಲಾಗಿದೆ ಎಂದು ತಿಳಿಸಿದರು.

ರಾಜರು ಪ್ರಜೆಗಳ ಹಿತದೃಷ್ಟಿಯಿಂದ ಕೆರೆಗಳನ್ನು ತೋಡಿಸಿದರು, ಕನ್ನಂಬಾಡಿ ಕಟ್ಟೆ ಕಟ್ಟಿಸಿದರು. ಅರಣ್ಯ, ಸ್ವಚ್ಛತೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳ ಅಭಿ ವೃದ್ಧಿಗೆ ಶ್ರಮಿಸಿದರು. ಆದರೆ, ರಾಜಕಾರಣಿಗಳಿಗೆ ಇದ್ಯಾ ವುದರ ಅರಿವಿಲ್ಲ. ರಾಜಕೀಯವು ಜಾತಿ, ಧರ್ಮದ ಹಿಂದೆ ಬಿದ್ದಿದೆ. ಜನರಿಗೆ ಮೂಲಸೌಲಭ್ಯ ಒದಗಿಸು ವುದರಲ್ಲಿ ಹಿಂದೆ ಉಳಿದಿವೆ ಎಂದು ವಿಷಾದಿಸಿದ ರೈತ ಮುಖಂಡ ಅಶ್ವಥ್‍ನಾರಾಯಣ್, ಕಾಡು, ನೀರು, ಮಣ್ಣು ಸಂರಕ್ಷಣೆಗೂ ಅರಿವು ಮೂಡಿಸ ಬೇಕಿದೆ ಎಂದರು. ಅರಣ್ಯ ಕೃಷಿ ರೈತ ಮಹಿಳೆ ಕವಿತಾ ಉಮಾಶಂಕರ್ ಮಿಶ್ರಾ, ಡಿಸಿಎಫ್ ಕೆ.ಸಿ.ಪ್ರಶಾಂತ್, ಎಸಿಎಫ್ ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.

Translate »