ಅಧಿಕಾರ ಇಲ್ಲದಿದ್ದಾಗಲೂ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಅಭಿಮಾನವಿತ್ತು: ಜಿಟಿಡಿ
ಮೈಸೂರು

ಅಧಿಕಾರ ಇಲ್ಲದಿದ್ದಾಗಲೂ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಅಭಿಮಾನವಿತ್ತು: ಜಿಟಿಡಿ

January 13, 2019

ಬನ್ನೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಈ ಹಿಂದೆ ಅಧಿಕಾರ ಇಲ್ಲದಿದ್ದಾ ಗಲೂ ರೈತರ ಪರ ಅತ್ಯಂತ ಹೆಚ್ಚಿನ ಕಾಳಜಿ ಹೊಂದಿದ್ದರು. ತಮ್ಮ ಕೈಯಿಂದ ರೈತರ ಸಂಕಷ್ಟಕ್ಕೆ ನೆರವು ನೀಡುತ್ತಿದ್ದರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ ತಿಳಿಸಿದ್ದಾರೆ.

ಅವರು ಇಂದು ಇಲ್ಲಿನ ಸರೋವರ ವೀರಾಂಜನೇಯ ಸೇವಾ ಸಮಿತಿ ಹಮ್ಮಿ ಕೊಂಡಿದ್ದ ಜೋಡಿ ಎತ್ತು ಹಾಗೂ ಹಸು ಗಳ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯದ ಯಾವುದೇ ಭಾಗದಲ್ಲಿ ರೈತರು ಸಂಕಷ್ಟ ಪರಿಸ್ಥಿತಿಗೀಡಾದರೆ ಕುಮಾರ ಸ್ವಾಮಿ ಮರುಗುತ್ತಿದ್ದರು. ಕೂಡಲೇ ಅವರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಮಂಡ್ಯದಲ್ಲಿ ಈ ಹಿಂದೆ ಅಧಿಕ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿ ಕೊಂಡರು. ಹೀಗೆ ಆತ್ಮಹತ್ಯೆ ಮಾಡಿಕೊಂಡ ಪ್ರತೀ ರೈತನ ಮನೆ ಬಾಗಿಲಿಗೆ ಖುದ್ದು ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದರು. ಅಲ್ಲದೇ ನೆರ ವನ್ನೂ ನೀಡುತ್ತಿದ್ದರು ಎಂದು ಸ್ಮರಿಸಿದರು. ಕಳೆದ ಚುನಾವಣೆ ಯಲ್ಲಿ ಜೆಡಿಎಸ್‍ಗೆ ಬಹುಮತ ಸಿಗಲಿಲ್ಲ.

ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಬೇಕಾ ಯಿತು. ಆದರೆ ತಾವು ನೀಡಿದ ಹೇಳಿಕೆ ಯಂತೆ ರೈತರ ಸಾಲ ಮನ್ನಾ ಘೋಷಿಸಿ ದ್ದಾರೆ. ತಮ್ಮ ಮಾತು ಉಳಿಸಿಕೊಳ್ಳಲು ಇನ್ನಿಲ್ಲದ ಪರಿಶ್ರಮ ಪಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಿಸ್ಥಿತಿ ಬಗ್ಗೆ ನೊಂದು ನುಡಿದರು.

ಸಾಲ ಮನ್ನಾ ಒಂದೇ ಅಲ್ಲದೇ ರೈತರಿಗೆ ಇನ್ನಿತರ ಸೌಕರ್ಯ ಗಳನ್ನು ಮಾಡಿಕೊಡುವ ಬಗ್ಗೆಯೂ ಕುಮಾರಸ್ವಾಮಿ ಅವರು ಚಿಂತನೆ ನಡೆಸಿ ದ್ದಾರೆ. ರೈತರ ಬೆಳೆಗೆ ಸೂಕ್ತ ಬೆಲೆ, ಮಧ್ಯ ವರ್ತಿಗಳ ಹಾವಳಿ ಹತ್ತಿಕ್ಕು ವುದು, ಸ್ವಾವಲಂಭಿಯಾಗಿ ರೈತರು ಬದುಕು ಸಾಗಿಸಲು ಅವಶ್ಯವಿರುವ ಸೌಕರ್ಯ ಗಳನ್ನು ಕಲ್ಪಿ ಸುವ ಬಜೆಟ್‍ನಲ್ಲಿ ಹಣ ಮೀಸಲಿಡಲು ನಿರ್ಧರಿಸಿದ್ದಾರೆ. ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಧೈರ್ಯ ಗೆಡ ಬಾರದು ಎಂದು ಜಿಟಿಡಿ ಹೇಳಿದರು.

ತಮ್ಮ ಕೃಷಿ ಚಟುವಟಿಕೆಗಳ ಬಗ್ಗೆ ಮೆಲುಕು ಹಾಕಿದ ಜಿ.ಟಿ.ದೇವೇಗೌಡರು, ನನಗೂ ಎತ್ತುಗಳನ್ನು ಕಂಡರೆ ಬಹಳ ಪ್ರೀತಿ. ಚುಂಚನಕಟ್ಟೆ ಜಾತ್ರೆ ಸೇರಿದಂತೆ ಹಲವಾರು ದನದ ಜಾತ್ರೆಗೆ ಹೋಗಿ ಎತ್ತುಗಳನ್ನು ನೋಡಿಕೊಂಡು ಬರುತ್ತಿದ್ದೆ. ಈಗಲೂ ಲಕ್ಷಾಂತರ ರೂ. ಎತ್ತುಗಳನ್ನು ಸಾಕಿ, ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವುದು ಸಂತೋಷಕರ ಸಂಗತಿ ಎಂದು ಅಭಿಪ್ರಾಯಪಟ್ಟರು.

ರೈತರಿಗೆ ಹಸು, ಎತ್ತುಗಳೇ ಸಂಗಾತಿಗಳು. ಅವುಗಳನ್ನು ಪೋಷಿಸಿದಷ್ಟೂ ಅವರ ಜೀವನ ಹಸನಾಗುತ್ತದೆ. ಈಗಂತೂ ಹಳ್ಳಿಗಳಲ್ಲಿ ದನಗಳನ್ನು ಸಾಕುವವರು ಅಪರೂಪವಾಗುತ್ತಿ ದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

Translate »