ಮತದಾರರ ಮನೋಭಾವನೆ ಬದಲಾಗಬೇಕು
ಮೈಸೂರು

ಮತದಾರರ ಮನೋಭಾವನೆ ಬದಲಾಗಬೇಕು

January 13, 2019

ಮೈಸೂರು: ಬರೀ ಮಾತು, ಹಣ, ಜಾತಿಗೆ ಓಟು ಹಾಕುವ ಮನೋ ಭಾವವನ್ನು ಮತದಾರರು ಬೆಳೆಸಿಕೊಂಡಿ ದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಹೇಳಿದರು.

ಮೈಸೂರು ನಗರ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಎನ್.ಆರ್.ಮೊಹ ಲ್ಲಾದ ರಿಲಯನ್ಸ್ ಫಂಕ್ಷನ್ ಹಾಲ್‍ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗ ವಾಗಿ ಹಮ್ಮಿಕೊಂಡಿದ್ದ ‘ವಿಭಿನ್ನ ವಿಚಾರ ಗಳ ಮುಖಾಮುಖಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದಾರತೆ ಯಿಂದ ಮತ ಹಾಕುತ್ತೇವೆ ಎಂಬ ಮನೋ ಭಾವವನ್ನು ಮತದಾರರು ಬಿಡಬೇಕು ಎಂದರು.

ಹಿಂದೆ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಸ್ವಾತಂತ್ರ್ಯ ನಂತರ 21 ವರ್ಷದ ಪ್ರಜೆಗಳಿಗೆ ಮತದಾನದ ಹಕ್ಕು ಕಲ್ಪಿಸಲಾಗಿತ್ತು. ಆದರೆ, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ಈ ದೇಶ ವನ್ನು ಮುನ್ನಡೆಸುವ ಶಕ್ತಿ ಯುವಜನತೆಗೆ ಇದೆ ಎಂದು 18 ವರ್ಷದಿಂದಲೇ ಮತ ದಾನ ಮಾಡುವ ಹಕ್ಕನ್ನು ನಿಮಗೆ ಕಲ್ಪಿಸಿ ದರು ಎಂದು ವಿದ್ಯಾರ್ಥಿಗಳಿಗೆ ಮನ ವರಿಕೆ ಮಾಡಿದರು.

ಕಪ್ಪು ಹಣ, ನಕಲಿ ನೋಟು, ಉಗ್ರ ಗಾಮಿಗಳನ್ನು ನಿಗ್ರಹಿಸಲು ನೋಟು ಅಮಾನ್ಯೀಕರಣದ ಉದ್ದೇಶವನ್ನು ಮುಂದಿರಿಸಿದರು. ಆರ್‍ಬಿಐನ್ನು ಹೊರ ಗಿಟ್ಟು, ಗವರ್ನರ್‍ಗೂ ವಿಚಾರ ತಿಳಿಯ ದಂತೆ ನೋಟು ಅಮಾನ್ಯೀಕರಣ ಮಾಡಲಾಯಿತು. ಆದರೆ, ವಾಸ್ತವ ಬೇರೆಯೇ ಆಯಿತು. ನೋಟು ಅಮಾನ್ಯೀಕರಣ ಮಾಡಿದ ದೇಶಗಳು ಸಂಕಷ್ಟದಲ್ಲಿ ಸಿಲುಕಿವೆ ಎಂದು ವಿಶ್ಲೇಷಿಸಿದರು.

ಮಾಜಿ ಸಂಸದ ಸಿ.ಹೆಚ್.ವಿಜಯ ಶಂಕರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಎಐಸಿಸಿ ವಕ್ತಾರರಾದ ಐಶ್ವರ್ಯ ಮಹಾದೇವು, ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ ಅಮೃತ್ ಗೌಡ, ಶಿವಕುಮಾರ್, ಕಾರ್ಯದರ್ಶಿ ಲೋಕೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಸಿನ್ ಖಾನ್, ನಗರಾಧ್ಯಕ್ಷ ರಾಜ ರಾಜೇಂದ್ರ, ಡಿಸಿಸಿ ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು.

Translate »