ಅವರೇಕಾಳು ತಿಂಡಿ-ತಿನಿಸು ಸವಿಯುವ ಸದವಕಾಶ
ಮೈಸೂರು

ಅವರೇಕಾಳು ತಿಂಡಿ-ತಿನಿಸು ಸವಿಯುವ ಸದವಕಾಶ

January 13, 2019

ಮೈಸೂರು: ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಆಲಮ್ಮ ಕಲ್ಯಾಣ ಮಂಟಪ ಆವರಣದಲ್ಲಿ ಎರಡು ದಿನಗಳ ಅವರೇ ಕಾಳು ಮೇಳ ಆರಂಭವಾಯಿತು.

ನಗರದ ಚಾಟ್ಸ್ ಮನೆ ಆಯೋಜಿಸಿರುವ ಅವರೇಕಾಯಿ ಮೇಳ ದಲ್ಲಿ 5 ಮಳಿಗೆ ತೆರೆಯಲಾಗಿದ್ದು, ಅವರೇಕಾಳಿ ನಿಂದ ತಯಾರಿಸಿರುವ ಬಗೆ ಬಗೆ ಖಾದ್ಯ, ತಿಂಡಿ, ತಿನಿಸು ಗ್ರಾಹಕರ ನಾಲಿಗೆಯಲ್ಲಿ ನೀರೂರಿಸುತ್ತಿದೆ.

ಸುಗ್ಗಿಕಾಲದ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ಮೇಳದಲ್ಲಿ ಅವರೇಕಾಳಿನ ಹೋಳಿಗೆ, ಪೊಂಗಲ್, ದೋಸೆ, ಪಲಾವ್, ಉಪ್ಪಿಟ್ಟು, ಅಕ್ಕಿರೊಟ್ಟಿ, ಪಲ್ಯ ಸೇರಿದಂತೆ ಸುಮಾರು 20 ಬಗೆಯ ತಿನಿಸು ಲಭ್ಯವಿದೆ.

ಬೆಳಿಗ್ಗೆ 8 ರಿಂದ ಸಂಜೆವರೆಗೂ ಅವರೆಕಾಳಿನ ತಿನಿಸು ದೊರೆಯುತ್ತದೆ. ಮೇಳಕ್ಕೆ ಬರುವ ಗ್ರಾಹಕರು ಕುಳಿತುಕೊಂಡು ವಿವಿಧ ಆಹಾರ ಸೇವಿಸಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

Translate »