ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ
ಕೊಡಗು

ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ

January 6, 2019

ಕುಶಾಲನಗರ: ಕೊಡವ ಸಮುದಾಯದ ಸಮಗ್ರ ಅಭಿವೃದ್ಧಿಗೆ ಜನಾಂಗದ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ಹೇಳಿದರು

ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೊರ್ಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಿದೆ. ಕೊಡವ ಬುಡಕಟ್ಟು ಸ್ಥಾನಮಾನದ ಅಧ್ಯಯನ ಸಮೀಕ್ಷೆ ನಿಟ್ಟಿನಲ್ಲಿ ಬೆಂಗಳೂ ರಿನ ಕೊಡವ ಸಮಾಜ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಐಟಿಸಿ ಕಂಪನಿಯ ನಿವೃತ್ತ ಹಿರಿಯ ಉಪಾಧ್ಯಕ್ಷ ಕಂಬೇಯಂಡ ಸುನಿಲ್ ಬಿದ್ದಪ್ಪ, ಪ್ರತಿಯೊಬ್ಬರಿಗೂ ಭಾಷಾಭಿಮಾನ ಮುಖ್ಯವಾಗ ಬೇಕಾಗಿದ್ದು, ಮನೆ ಭಾಷೆಗೆ ಒತ್ತು ನೀಡುವುದು ಯುವಪೀಳಿ ಗೆಯ ಆದ್ಯ ಜವಬ್ದಾರಿಯಾಗಿದೆ. ಈ ಮೂಲಕ ಕೊಡವ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿದರು.

ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಡಿ ಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ವಿರಾಜಪೇಟೆ ಅಧ್ಯಕ್ಷ ವಾಂಚಿರ ನಾಣಯ್ಯ, ಪೆÇನ್ನಂಪೇಟೆ ಸಮಾಜದ ಚೊಟ್ಟೆಕ್‍ಮಾಡ ರಾಜೀವ್ ಅಪ್ಪಯ್ಯ, ಅಮ್ಮತ್ತಿಯ ಅಧ್ಯಕ್ಷ ಮೂಕೊಂಡ ಬೋಸ್ ಮಂದಣ್ಣ, ಗೋಣಿಕೊಪ್ಪದ ಚಕ್ಕೆರ ಸೋಮಯ್ಯ, ಗರ್ವಾಲೆ ಅಧ್ಯಕ್ಷ ಸರ್ಕಂಡ ಗಣಪತಿ, ಮಕ್ಕಂದೂರು ಅಧ್ಯಕ್ಷ ನಾಪಂಡ ರವಿಕಾಳಪ್ಪ, ಸುಂಟಿಕೊಪ್ಪದ ಚೇಂದ್ರಿಮಾಡ ಎ.ಕರುಂಬಯ್ಯ, ಸಕಲೇಶಪುರದ ನಿಡುಮಂಡ ಎಸ್. ವಿಠಲ, ಮಾಜಿ ಅಧ್ಯಕ್ಷ ಮೇವಡ ಚಿಂಗಪ್ಪ, ಮಂಡೇಪಂಡ ಬೋಸ್ ಮೊಣ್ಣಪ್ಪ, ಜೆಮ್ಸಿ ಪೆÇನ್ನಪ್ಪ ಮತ್ತಿತರರು ಇದ್ದರು.

Translate »