ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಸಿದ್ದಾಪುರದಲ್ಲಿ ಪ್ರತಿಭಟನೆ
ಕೊಡಗು

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಸಿದ್ದಾಪುರದಲ್ಲಿ ಪ್ರತಿಭಟನೆ

January 6, 2019

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾವಚಿತ್ರವನ್ನು ಸುಟ್ಟು ಆಕ್ರೋಶ
ಸಿದ್ದಾಪುರ: ಶಬರಿಮಲೆಗೆ ಮಹಿಳೆ ಯರ ಪ್ರವೇಶ ವಿರೋಧಿಸಿ ಕೇರಳ ಸರಕಾ ರದ ವಿರುದ್ಧ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿ ಕೇರಳದ ಮುಖ್ಯಮಂತ್ರಿ ಪಿಣ ರಾಯಿ ವಿಜಯ್ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನೆಲ್ಯಹುದಿಕೇರಿಯ ಅಯ್ಯಪ್ಪ ಸೇವಾ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಮೆರ ವಣಿಗೆಯು ನೆಲ್ಯಹುದಿಕೇರಿಯ ಮುತ್ತಪ್ಪ ದೇವಸ್ಥಾನದಿಂದ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದ ವರೆಗೆ ನಡೆಸಿ ಪಟ್ಟಣದ ಶ್ರೀರಾಮ ಮಂದಿರ ಮುಂದೆ ಜಮಾಯಿ ಸಿದರು. ಪ್ರತಿಭಟನಾ ಮೆರವಣಿಗೆಯ ಉದ್ದಕ್ಕೂ ಕೇರಳ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿ ಘೋಷಣೆ ಕೂಗಿದ ಅಯ್ಯಪ್ಪ ಭಕ್ತರು, ಸಿಪಿಐಎಂ ಧ್ವಜ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಭಾವ ಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಪ್ರಮುಖ ವಿ.ಕೆ.ಲೋಕೇಶ್ ಮಾತನಾಡಿ, ಶಬರಿಮಲೆಗೆ ಇಬ್ಬರು ಮಹಿಳೆ ಯರ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಕೇರಳದ ಮುಖ್ಯಮಂತ್ರಿ ಪಿಣ ರಾಯ್ ವಿಜಯನ್ ಎಂಟುನೂರು ವರ್ಷ ಗಳ ಇತಿಹಾಸ ಇರುವ ಧಾರ್ಮಿಕ ಭಾವ ನೆಗಳಿಗೆ ಧಕ್ಕೆ ತರುವಂಥ ಕೆಲಸ ಮಾಡಿ ದ್ದಾರೆ. ಶಾಂತಿ ಸೌಹಾರ್ದತೆ ನೆಲೆಸಿರುವ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿರುವ ಕೇರಳದ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇ ಕೆಂದು ಒತ್ತಾಯಿಸಿದರು. ಈ ಸಂದರ್ಭ ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳ ಕಾರ್ಯ ಕರ್ತರು ಭಾಗವಹಿಸಿದ್ದರು.

ಇದೇ ವೇಳೆ ಜನವರಿ 8 ಮತ್ತು 9 ರಂದು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದೇಶಾ ದ್ಯಂತ ನಡೆಯಲಿರುವ ಸಾರ್ವತ್ರಿಕ ಮುಷ್ಕರದ ಭಿತ್ತಿ ಪತ್ರಗಳನ್ನು ಹರಿದು ಬೆಂಕಿ ಹಚ್ಚುವ ಸಂದರ್ಭ ಪೊಲೀಸರು ತಡೆ ಯೊಡ್ಡಿದರು. ವಿವಿಧ ಕಾರ್ಮಿಕ ಸಂಘ ಟನೆಗಳ ನೇತೃತ್ವದಲ್ಲಿ ನಡೆಯಲಿರುವ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಇಲ್ಲಿನ ಬಸ್ ನಿಲ್ದಾಣದ ಸಮೀಪದಲ್ಲಿ ನಡೆಯು ತ್ತಿದ್ದ ವಾಹನ ಜಾಥಾದ ಸಭೆಯ ಸಮೀ ಪಕ್ಕೆ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ, ಸಿಪಿಎಂ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣ ಸಿದ್ದಾ ಪುರ ಪಿಎಸ್‍ಐ ದಯಾನಂದ ನೇತೃತ್ವದ ಪೊಲೀಸ್ ತಂಡ ಮಧ್ಯ ಪ್ರವೇಶಿಸಿದರು. ಈ ಸಂದರ್ಭ ಪೊಲೀಸರಿಗೂ ಸಂಘಪರಿ ವಾರ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಪೊಲೀ ಸರು ಕಾರ್ಯಕರ್ತರನ್ನು ವಾಪಸು ಕಳಿಸಿದರು.

Translate »