ಮೈಸೂರು: ಜೆಎಸ್ಎಸ್ ನಿರ್ವಹಣಾ ಅಧ್ಯಯನ ಕೇಂದ್ರ ದಿಂದ ಎಂಬಿಎ ಪಡೆದ ಮೈಸೂರಿನ ಎಂ.ಆರ್.ನಿರಂತ್ ಅವರು ಜ.30ರಂದು ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಆರಂಭವಾಗಲಿರುವ ಏಷ್ಯ ವಿಶ್ವ ಮಾದರಿ `ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆ-ಮಾಲ್ಡೀವ್ಸ್ ಗಣರಾಜ್ಯ’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ನಿರಂತ್, ರಾಜ್ಯ ಜವಳಿ ಆಯುಕ್ತ ಹಾಗೂ ನಿರ್ದೇಶಕರೂ ಅಲ್ಲದೇ, `ಮೈಸೂರುಮಿತ್ರ’ ಅಂಕಣಕಾರರೂ ಆದ ಎಂ.ಆರ್.ರವಿ ಅವರ ಪುತ್ರ.
