ಓಲಾ ನಿಷೇಧ ಹಿಂಪಡೆಯಲು  ಶಾಸಕ ಎಸ್.ಎ.ರಾಮದಾಸ್ ಆಗ್ರಹ
ಮೈಸೂರು

ಓಲಾ ನಿಷೇಧ ಹಿಂಪಡೆಯಲು ಶಾಸಕ ಎಸ್.ಎ.ರಾಮದಾಸ್ ಆಗ್ರಹ

March 25, 2019

ಮೈಸೂರು: ಓಲಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸೇವೆ ನೀಡುತ್ತಿರುವ ಆಟೋರಿಕ್ಷಾ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ನಿಷೇಧ ಹೇರಬಾರದು ಎಂದು ಶಾಸಕ ಎಸ್.ಎ.ರಾಮದಾಸ್ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಳಿ ಬಣ್ಣದ ಬೋರ್ಡ್ ಹೊಂದಿ ರುವ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡದೆ ಇದ್ದರೂ ಕೂಡ ಓಲಾ ಸಂಸ್ಥೆ ಬೈಕ್ ಟ್ಯಾಕ್ಸಿ ಸೇವೆ ಯನ್ನು ಆರಂಭಿಸಿತ್ತು. ಇದನ್ನು ನೆಪವಾಗಿಟ್ಟುಕೊಂಡು ಓಲಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸೇವೆ ನೀಡು ತ್ತಿರುವ ಮೂರು ಮತ್ತು ನಾಲ್ಕು ಚಕ್ರಗಳ ವಾಹನಗಳ ಸೇವೆಯನ್ನು ರದ್ದು ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದೆ. ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದಲ್ಲಿ 75 ಸಾವಿರ ವಾಹನಗಳು ಓಲಾದಲ್ಲಿ ಒಪ್ಪಂದದಲ್ಲಿ ಸಂಚರಿಸುತ್ತಿದ್ದು, 1.50 ಕೋಟಿ ಕುಟುಂಬ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಓಲಾ ಟ್ಯಾಕ್ಸಿಗಳ ಆದೇಶ ರದ್ದು ಮಾಡಿ ರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2021ರ ಮೇ 19ರವರೆಗೆ ಓಲಾ ಸಂಸ್ಥೆ ವಾಹನ ಸಂಚಾರಕ್ಕೆ ಅನುಮತಿ ನೀಡಿದೆ. ಮುದ್ರಾ, ಸ್ಟ್ಯಾಂಡ್ ಆಪ್, ಸ್ಟಾರ್ಟ್ ಆಪ್ ಯೋಜನೆಗಳ ಮೂಲಕ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಆರ್ಥಿಕ ನೆರವು ನೀಡಿ ಹೊಸ ಟ್ಯಾಕ್ಸಿ ಖರೀದಿಗೆ ಕ್ರಮ ಕೈಗೊಂಡಿತ್ತು. ಈ ಯೋಜನೆಯಡಿ ಹೊಸ ವಾಹನ ಖರೀದಿಸಿರುವ ಯುವಕರು ಓಲಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಚಾಮರಾಜ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹೇಮಂತ್, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಉಪಸ್ಥಿತರಿದ್ದರು.

Translate »