ಮೈಸೂರು ಜಿಲ್ಲಾ ಪದವೀಧರ, ಶಿಕ್ಷಕರ ಕಾಂಗ್ರೆಸ್  ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ
ಮೈಸೂರು

ಮೈಸೂರು ಜಿಲ್ಲಾ ಪದವೀಧರ, ಶಿಕ್ಷಕರ ಕಾಂಗ್ರೆಸ್ ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ

March 25, 2019

ಮೈಸೂರು: ಎಐಸಿಸಿ ವಕ್ತಾರರಾದ ಐಶ್ವರ್ಯ ಮಂಚನಹಳ್ಳಿ ಮಹದೇವು, ಮೇಯರ್ ಪುಷ್ಪಲತಾ ಜಗನ್ನಾಥ್, ಶಕ್ತಿ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 7 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಅವರನ್ನು ಭಾನುವಾರ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ಮೈಸೂರಿನ ದಾಸಪ್ಪ ವೃತ್ತದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಗ್ರಾಮಾಂತರ ಪದವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈ ಮೂವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಪದವೀಧರ ಮತ್ತು ಶಿಕ್ಷಕರ ಕಾರ್ಯಕಾರಣಿ ಸಮಿತಿ ಅಧ್ಯಕ್ಷೆ ಡಾ.ಸಾರಾಹಖ್ ಅವರು ತಮ್ಮ ನೂತನ ತಂಡವನ್ನು ಪ್ರಕಟಿಸಿದರು. ಪದಾಧಿಕಾರಿಗಳಾಗಿ ಡಾ. ಸಾರಾ ಹಖ್ (ಮೈಸೂರು ಜಿಲ್ಲಾಧ್ಯಕ್ಷೆ), ಮಹಮ್ಮದ್ ಅರ್ಫಾನ್ ಶಫಿ (ಅಡ್ಮಿನ್, ಪ್ರಧಾನ ಕಾರ್ಯದರ್ಶಿ), ಸೋಮಣ್ಣ (ಉಪಾ ಧ್ಯಕ್ಷ), ಓವೇಜ್ (ಪ್ರಧಾನ ಕಾರ್ಯದರ್ಶಿ), ಪ್ರತಾಪ್ (ಅಧ್ಯಕ್ಷ- ನಂಜನಗೂಡು), ಸರ್ತಾಜ್ (ಅಧ್ಯಕ್ಷ- ಪಿರಿಯಾಪಟ್ಟಣ), ಚೇತನ್, ಅಧ್ಯಕ್ಷ – ತಿ.ನರಸೀಪುರ), ಇಜûರ್ ಹುಸೇನ್ (ಅಧ್ಯಕ್ಷ- ವರುಣಾ), ನಂದೀಶ (ಅಧ್ಯಕ್ಷ- ಕೆ.ಆರ್.ನಗರ), ಮಹದೇವ (ಅಧ್ಯಕ್ಷ- ಹುಣ ಸೂರು), ಅಭಿಜಿತ್ (ಅಧ್ಯಕ್ಷ- ಹೆಚ್.ಡಿ.ಕೋಟೆ), ಹೇಮಂತ್ (ಅಧ್ಯಕ್ಷ -ಚಾಮುಂಡೇಶ್ವರಿ), ತಾಜಮುಲ್, ಅನಿತಾ, ಪುನೀತ್ (ಸಂಯೋ ಜಕರು) ನೇಮಕಗೊಂಡರು. ಇವರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಬಸವರಾಜ ನಾಯಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಪ್ರಕಾಶ್‍ಕುಮಾರ್, ಉತ್ತನಹಳ್ಳಿ ಶಿವಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »