ಮಹಿಷನಿಗೆ ಪುಷ್ಪಾರ್ಚನೆಗೆ ಯತ್ನಿಸಿದವರು ಪೊಲೀಸರ ವಶಕ್ಕೆ, ನಂತರ ಬಿಡುಗಡೆ
ಮೈಸೂರು

ಮಹಿಷನಿಗೆ ಪುಷ್ಪಾರ್ಚನೆಗೆ ಯತ್ನಿಸಿದವರು ಪೊಲೀಸರ ವಶಕ್ಕೆ, ನಂತರ ಬಿಡುಗಡೆ

October 6, 2019

ಮೈಸೂರು, ಅ.5(ಪಿಎಂ)-ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಹೊರಟಿದ್ದ ಮಹಿಷ ದಸರಾ ಆಚರಣೆ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ.

ಮಹಿಷ ದಸರಾ ಆಚರಣೆ ಸಮಿತಿ, ದಸಂಸ, ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಚಾಮುಂಡಿಬೆಟ್ಟದಲ್ಲಿ ಇಂದು ಪ್ರತಿಭಟನಾ ಸಭೆ ನಡೆಸಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲು ಸಿದ್ಧತೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಅಲ್ಲದೆ, ಬೆಟ್ಟದ ಪಾದದ ತಾವರೆಕಟ್ಟೆ ಬಳಿಯೂ ಪೊಲೀಸ್ ದಂಡು ಬೀಡು ಬಿಟ್ಟಿತ್ತು.

ಮೈಸೂರಿನ ಎಂಜಿ ರಸ್ತೆಯ ಮಾರುಕಟ್ಟೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾವರೆಕಟ್ಟೆಗೆ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸುತ್ತಿ ದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದು, ಸಿಎಆರ್ ಮೈದಾನಕ್ಕೆ ಕರೆದೊಯ್ದು ಅಲ್ಲಿ ಕೆಲಕಾಲ ಇರಿಸಿದರು. ದಸಂಸ ಮುಖಂಡರಾದ ಬೆಟ್ಟಯ್ಯ ಕೋಟೆ, ಚೋರನ ಹಳ್ಳಿ ಶಿವಣ್ಣ, ರೈತ ಸಂಘದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಸೇರಿದಂತೆ ಕಾರ್ಯ ಕರ್ತರನ್ನು ವಶಕ್ಕೆ ಪಡೆಯಲಾಯಿತು.

ಅದೇ ರೀತಿ ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದ ತಂಡವನ್ನು ತಾವರೆಕಟ್ಟೆ ಬಳಿ ವಶಕ್ಕೆ ಪಡೆದು ಹಾಗೂ ಪುರಭವನದ ಆವರಣದಲ್ಲಿ ಡಾ.ಬಿ.ಆರ್. ಅಂಬೇ ಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಬೆಟ್ಟಕ್ಕೆ ತೆರಳಲು ಉದ್ದೇಶಿಸಿದ್ದ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ನೇತೃತ್ವದ ತಂಡವನ್ನೂ ವಶಕ್ಕೆ ಪಡೆದ ಪೊಲೀ ಸರು, ಅವರನ್ನು ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಸಿಎಆರ್ ಮೈದಾನದಲ್ಲಿ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸ ಲಾಯಿತು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಶಾಂತಿ ಯುತವಾಗಿ ಬೆಟ್ಟಕ್ಕೆ ತೆರಳಿ ಮಹಿಷನ ಪ್ರತಿಮೆಗೆ ಪುಷ್ಪಾ ರ್ಚನೆ ಮಾಡಲು ಹೊರಟಿದ್ದ ನಮ್ಮನ್ನು ತಡೆದಿದ್ದಾರೆ. ಪೊಲೀಸರ ಮೂಲಕ ಈ ರೀತಿ ನಮ್ಮ ಹೋರಾಟ ಹತ್ತಿಕ್ಕುವುದು ಖಂಡನೀಯ ಎಂದು ಕಿಡಿಕಾರಿದರು.

ಜಿಲ್ಲೆಯ ತಾಲೂಕು ಕೇಂದ್ರದಿಂದ ಬೆಟ್ಟಕ್ಕೆ ಹೊರ ಟಿದ್ದ ನಮ್ಮ ಕಾರ್ಯಕರ್ತರನ್ನು ಪೊಲೀಸರು ತಡೆದಿ ದ್ದಾರೆ. ಕಾರ್ಯಕರ್ತರಿದ್ದ ಸುಮಾರು 60ಕ್ಕೂ ಹೆಚ್ಚು ವಾಹನಗಳನ್ನು ಮಾರ್ಗ ಮಧ್ಯೆ ತಡೆದು ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಎಲ್ಲರನ್ನೂ ಬಿಡುಗಡೆಗೊಳಿಸಲಾಯಿತು.

Translate »