ಗ್ರಹಣದ ಆಸುಪಾಸಲ್ಲಿ ಎರಡು ರೈಲು ಲಘು ಅಪಘಾತ
ಮೈಸೂರು

ಗ್ರಹಣದ ಆಸುಪಾಸಲ್ಲಿ ಎರಡು ರೈಲು ಲಘು ಅಪಘಾತ

December 27, 2019
  • ಮಾಲ್ಗುಡಿ ಎಕ್ಸ್‍ಪ್ರೆಸ್ ಹಳಿ ತಪ್ಪಿದರೆ, ಬಿಕನೇರ್ ಎಕ್ಸ್‍ಪ್ರೆಸ್‍ನಲ್ಲಿ ಬೆಂಕಿ ಅವಘಡ
  • ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ; ಮೈಸೂರು-ಬೆಂಗಳೂರು ರೈಲು ಸಂಚಾರ 4ರಿಂದ 5 ಗಂಟೆ ವ್ಯತ್ಯಯ, ಸಾವಿರಾರು ಪ್ರಯಾಣಿಕರ ಪರದಾಟ

ಬೆಂಗಳೂರು, ಡಿ.26(ಕೆಎಂಶಿ)- ಸೂರ್ಯಗ್ರಹಣ ಸಂಭವಿಸುವ ಆಸುಪಾಸಿನಲ್ಲೇ ಎರಡು ರೈಲುಗಳು ಲಘು ಅಪಘಾತಕ್ಕೀಡಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಮೈಸೂರು-ಬೆಂಗಳೂರು ನಡುವೆ ರೈಲು ಸಂಚಾರದಲ್ಲಿ ಐದು ಗಂಟೆ ವ್ಯತ್ಯಯವಾಗಿ, ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

ಮೈಸೂರು – ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು ಬೆಂಗಳೂರು ರೈಲ್ವೆ ನಿಲ್ದಾಣದ ಹತ್ತಿರ ವಿರುವ ಬಿನ್ನಿ ಮಿಲ್ ಬಳಿ ಅದರ ಇಂಜಿನ್ ಗಾಲಿಗಳು ಹಳಿ ತಪ್ಪಿದರೆ, ಯಶವಂತಪುರದಿಂದ ಬಿಕನೇರ್‍ಗೆ ಸಂಚರಿ ಸುವ ರೈಲು ನಗರದ ಹೊರ ವಲಯದಲ್ಲಿ ಬೆಂಕಿಗೆ ತುತ್ತಾಗಿದೆ.

ಮಾಲ್ಗುಡಿ ಎಕ್ಸ್‍ಪ್ರೆಸ್‍ನ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಬಿನ್ನಿ ಮಿಲ್ ಬಳಿ ನಿಧಾನವಾಗಿ ಚಲಿಸುತ್ತಿದ್ದಾಗ ಹಳಿ ತಪ್ಪಿದೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಸಂಭವಿಸ ಬಹುದಾದ ಅನಾಹುತ ತಪ್ಪಿದೆ. ನಂತರ ರೈಲ್ವೆ ಸಿಬ್ಬಂದಿ ಇಂಜಿನ್‍ನಿಂದ ಬೋಗಿಗಳನ್ನು ಬೇರ್ಪಡಿಸಿ, ಮತ್ತೆ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಸಿಗರೇಟ್ ತುಂಡಿನ ಬೆಂಕಿಯಿಂದ ಯಶವಂತ ಪುರದಿಂದ ರಾಜಸ್ತಾನ್‍ನ ಬಿಕನೇರ್‍ಗೆ ಸಂಚರಿಸುವ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಗರದ ಹೊರವಲಯದ ಚಿಕ್ಕಬಾಣವಾರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ರೈಲಿನ ಎಸಿ ಬೋಗಿಗೆ ಬೆಂಕಿ ಹೊತ್ತಿ ಕೊಂಡಿದ್ದು, ಕೂಡಲೇ ಪ್ರಯಾಣಿಕರು ಕೆಳಗಿಳಿದಿ ದ್ದಾರೆ. ಆದರೆ ಬೆಂಕಿಯ ಕೆನ್ನಾಲಗೆಗೆ ಬೋಗಿಗಳು ಸುಟ್ಪು ಕರಕಲಾಗಿವೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದರಿಂದ ಸಂಭವ ನೀಯ ಅನಾಹುತವೊಂದು ತಪ್ಪಿದಂತಾಗಿದೆ.

ರೈಲ್ವೇ ಹಳಿಯ ಮೇಲೆ ಸೇದಿ ಎಸೆದ ಸಿಗರೇಟ್ ತುಂಡಿನಿಂದ ಬೆಂಕಿ ಕಿಡಿ ಹೊತ್ತಿಕೊಂಡು ಸಂಪೂರ್ಣ ಬೋಗಿಯನ್ನು ಆವರಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಎರಡು ರೈಲುಗಳು ದುರಂತಕ್ಕೊಳ ಗಾದರೂ, ಯಾವುದೇ ರೀತಿಯ ಪ್ರಾಣಹಾನಿ ಯಾಗಿಲ್ಲ. ಒಂದೆಡೆ ಚಾಲಕನ ಬುದ್ಧಿವಂತಿಕೆ ಯಿಂದ ಇಡೀ ರೈಲು ಹಳಿ ತಪ್ಪುವುದನ್ನು ತಪ್ಪಿದರೆ, ಮತ್ತೊಂದೆಡೆ ಸಾರ್ವ ಜನಿಕರು ಸಿಗರೇಟ್ ಸೇದಿ ಹಳಿಗಳ ಮೇಲೆ ಎಸೆದ ತುಂಡು ರೈಲ್ವೆಯ ಬೋಗಿಗಳನ್ನೇ ಬೆಂಕಿಗೆ ಆಹುತಿ ಪಡೆದಿದೆ.

ಮೈಸೂರು-ಬೆಂಗಳೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯ: ಮೈಸೂರು-ಬೆಂಗಳೂರು-ಯಲಹಂಕ ಮಾಲ್ಗುಡಿ ಎಕ್ಸ್‍ಪ್ರೆಸ್ ಹಳಿ ತಪ್ಪಿದ ಪರಿಣಾಮ ಮೈಸೂರು- ಬೆಂಗಳೂರು ರೈಲುಗಳ ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಯಿತು. ನಿಗದಿಯಂತೆ ಇಂದು ಬೆಳಿಗ್ಗೆ 8.25 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದ ರೈಲು, ಬೆಂಗ ಳೂರು ತಲುಪುತ್ತಿದ್ದಂತೆಯೇ ಬಿನ್ನಿ ಮಿಲ್ ಬಳಿ ಬೆಳಿಗ್ಗೆ ಸುಮಾರು 10.45 ಗಂಟೆಗೆ ಇಂಜಿನ್ ಹಳಿ ತಪ್ಪಿದೆ.

ಪರಿಣಾಮ ಮೈಸೂರು-ಬೆಂಗಳೂರು ನಡುವೆ ಸಂಚರಿ ಸುವ ಶತಾಬ್ಧಿ ಸೇರಿದಂತೆ ಹಲವು ರೈಲುಗಳು ಸುಮಾರು 4ರಿಂದ 5 ಗಂಟೆ ತಡವಾಗಿ ಚಲಿಸಿದವು. ಅದರಿಂದಾಗಿ ರೈಲು ಪ್ರಯಾಣಿಕರು ಪರದಾಡುವಂತಾಯಿತು.

ಮೈಸೂರು ಮತ್ತು ಬೆಂಗಳೂರು ರೈಲು ನಿಲ್ದಾಣ ಹಾಗೂ ನಡುವಿನ ಎಲ್ಲಾ ಸ್ಟೇಷನ್‍ಗಳಲ್ಲೂ ರೈಲುಗಳಿ ಗಾಗಿ ಗಂಟೆಗಟ್ಟಲೆ ಪ್ರಯಾಣಿಕರು ಕಾದು ಕಾದು ಬಳಲಿದರು. ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಗಂಟೆವರೆಗೆ ಪ್ರಯಾಣಿಕರು ವಿರಳವಾಗಿದ್ದರಾ ದರೂ, ಮಧ್ಯಾಹ್ನ 12 ಗಂಟೆ ನಂತರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

Translate »