ಮೈಸೂರು ಗ್ರಾಹಕರ ಪರಿಷತ್‍ನಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ: ಮೈಸೂರಿನ ಬಹುತೇಕರು ನೀಲನಕ್ಷೆಯಂತೆ ಕಟ್ಟಡ ನಿರ್ಮಿಸುತ್ತಿಲ್ಲ
ಮೈಸೂರು

ಮೈಸೂರು ಗ್ರಾಹಕರ ಪರಿಷತ್‍ನಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ: ಮೈಸೂರಿನ ಬಹುತೇಕರು ನೀಲನಕ್ಷೆಯಂತೆ ಕಟ್ಟಡ ನಿರ್ಮಿಸುತ್ತಿಲ್ಲ

June 11, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ನಿವಾಸಿಗಳು ನೀಲನಕ್ಷೆ ಪ್ರಕಾರ ಕಟ್ಟಡ ನಿರ್ಮಾಣ ಮಾಡಿಲ್ಲ. ಇದರಿಂ ದಾಗಿ `ಸಿಆರ್’ ಪಡೆಯಲು ಸಾಕಷ್ಟು ಗೊಂದಲಕ್ಕಿಡಾಗುತ್ತಿ ದ್ದಾರೆ ಎಂದು ವಲಯ ಕಚೇರಿ-2ರ ಆರ್‍ಓ ಅರಸು ಕುಮಾರಿ ಹಾಗೂ ವಲಯ ಕಛೇರಿ-4ರ ಎಆರ್‍ಓ ಪ್ರಸಾದ್ ಮೈಗ್ರಾಪ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಗರ ಪಾಲಿಕೆಯ ಪ್ರಾಪರ್ಟಿ ಬೈಲಾ ಪ್ರಕಾರ ಬಹುತೇಕರು ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ. ಬದಲಾಗಿ ರಸ್ತೆ, ಫುಟ್‍ಪಾತ್ ಒತ್ತುವರಿ ಮಾಡಿ ಕೆಲವರು ಕಟ್ಟಡ ನಿರ್ಮಾಣ ಮಾಡಿದರೆ, ಇನ್ನು ಕೆಲವರು ನೀಲನಕ್ಷೆ ಪ್ರಕಾರ ಮನೆಗಳನ್ನು ನಿರ್ಮಾಣ ಮಾಡಿರು ವುದಿಲ್ಲ. ಈ ವಿಷಯದ ಬಗ್ಗೆ ಸಾರ್ವಜನಿ ಕರಿಗೆ ಎಷ್ಟೇ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಗರ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ಮಾಡಬೇಕಾದರೆ, ಸರ್ಕಾರ ರೂಪಿಸಿರುವ ನೀತಿ-ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಆದರೆ, ಎಲ್ಲಾ ನೀತಿ-ನಿಯಮಗಳನ್ನು ಗಾಳಿಗೆ ತೂರಿ, ಕಟ್ಟಡ ನಿರ್ಮಾಣ ಮಾಡಲು ಮುಂದಾಗುತ್ತಾರೆ. ಇದಕ್ಕೆ ಸಿಆರ್ ನೀಡುವಂತೆ ಪಾಲಿಕೆ ಸಿಬ್ಬಂದಿ ಗಳ ಮೇಲೆ ಒತ್ತಡ ಹಾಕುತ್ತಾರೆ. ಆದರೆ, ಇದರಿಂದ ಯಾವುದೇ ಪ್ರಯೋ ಜನವಿಲ್ಲ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ಆಸ್ತಿ ತೆರಿಗೆಯನ್ನು ಆನ್‍ಲೈನ್‍ನಲ್ಲಿ ಪಾವತಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳು ತ್ತಿದೆ. ಆದರೆ, ಸ್ವಲ್ಪ ತಾಂತ್ರಿಕ ದೋಷದಿಂದಾಗಿ ಈ ವ್ಯವಸ್ಥೆ ಜಾರಿಗೆ ತರಲು ತಡವಾಗು ತ್ತಿದೆ. ನೂತನ ಪದ್ಧತಿಗಳನ್ನು ಅಳವಡಿ ಸಲು ಸಿಬ್ಬಂದಿಗಳಿಗೂ ತಂತ್ರಾಂಶದ ಬಗ್ಗೆ ಪರಿಚಯವಿರಬೇಕು ಹಾಗೂ ಸಾಮಾನ್ಯ ಜನರಲ್ಲೂ ಇದರ ಬಗ್ಗೆ ಗೊಂದಲವಿರ ದಂತೆ ನೋಡಿಕೊಳ್ಳುವುದು ಪಾಲಿಕೆಯ ಜವಾಬ್ದಾರಿ ಆಗಿರುವುದರಿಂದ ಆನ್‍ಲೈನ್ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳ್ಳಲು ನಿಧಾನವಾಗುತ್ತಿದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಹೊಸದಾಗಿ ಮುಡಾದಿಂದ ಪಾಲಿಕೆಗೆ ಹಸ್ತಾಂತರವಾಗಿರುವ ಬಡಾವಣೆಗಳ ನಿವಾಸಿಗಳು ಇನ್ನು ಮುಂದೆ ಮುಡಾಗೆ ಆಸ್ತಿ ತೆರಿಗೆಯನ್ನು ಕಟ್ಟುವುದು ಬೇಡ. ಪಾಲಿಕೆಗೆ ಒಮ್ಮೆ ಹಸ್ತಾಂತರಿಸಿದ ಮುಡಾ ಬಡಾವಣೆಗಳು, ಮುಂದಿನ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪಾಲಿಕೆಯಿಂದಲೇ ನಡೆಯತ್ತವೆ. ಆದ್ದರಿಂದ ಆಸ್ತಿ ತೆರಿಗೆ ಯನ್ನು ಪಾಲಿಕೆಗೆ ಪಾವತಿಸುವಂತೆ ಸದಸ್ಯ ರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಸಭೆಯಲ್ಲಿ ಬಾಮಿ ವಿ.ಶೆಣೈ, ಎಸ್. ಶೋಭನಾ, ಚಂದ್ರಪ್ರಕಾಶ್, ಡಾ.ನಿರ್ಮಲ, ಪಿ.ಎಂ.ಭಟ್, ಅಸೀಫ್ ಅಲಿ ಖಾನ್, ಎಂ.ಎಸ್.ಅಜಿತ್, ಎಂ.ಸಿ.ಮಿಶ್ರಾ, ಬಿ. ಅರವಿಂದ ಪ್ರಸಾದ್, ಸುರೇಶ್ ನಾಯಕ್, ಕೆ.ಆರ್. ಜೋಶಿ, ಅಂಜುಮ್, ನಿಶಾ, ಸಿ.ಆರ್. ಅಶ್ವತ್ ನಾರಾಯಣ, ಕೆ.ಎನ್. ರಾಧಾಕೃಷ್ಣ, ಆರ್.ಪುರುಷೋತ್ತಮ್, ಎನ್.ಟಿ. ಯದುರಾಜ್, ಉಷಾರಾಜ್, ಎಂ.ಜಾನಕಿ ರಾಮನ್, ಅರುಣ್‍ಕುಮಾರ್, ಮಾ. ಸುಬ್ರಹ್ಮಣ್ಯ ಭಟ್ಟ, ಫಣ ೀಶ್ ಮಧುಕರ್, ಎಸ್.ಸತ್ಯನಾರಾಯಣ, ರಘುಪತಿ, ಕೆ.ಎಸ್. ವೆಂಕಟೇಶ್ ಸೇರಿದಂತೆ ಇತರರಿದ್ದರು.

Translate »