ಬಿಎಸ್‍ಪಿ ಮೈಸೂರು ವಲಯ, ಜಿಲ್ಲಾ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ
ಮೈಸೂರು

ಬಿಎಸ್‍ಪಿ ಮೈಸೂರು ವಲಯ, ಜಿಲ್ಲಾ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

September 5, 2019

ಮೈಸೂರು,ಸೆ.4(ಆರ್‍ಕೆಬಿ)-ಬಹು ಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮತ್ತು ರಾಜ್ಯ ಅಧ್ಯಕ್ಷರ ಧೋರಣೆಯನ್ನು ವಿರೋ ಧಿಸಿ ಮೈಸೂರು ಜಿಲ್ಲೆಯ ಬಿಎಸ್‍ಪಿ ಪದಾ ಧಿಕಾರಿಗಳು, ಮುಖಂಡರು ಪಕ್ಷದ ಪ್ರಾಥ ಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀ ನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.

ಮೈಸೂರಿನ ರೋಟರಿ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ, ಬಿಎಸ್‍ಪಿ ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ವಿಭಾಗ ಉಸ್ತುವಾರಿ ಭೀಮನ ಹಳ್ಳಿ ಸೋಮೇಶ್, ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಮೈಸೂರು ನಗರಾಧ್ಯಕ್ಷ ಬಸವ ರಾಜು ಇನ್ನಿತರರು ತಾವು ಪಕ್ಷದ ನಾಯ ಕರ ಇತ್ತೀಚಿನ ಧೋರಣೆಯಿಂದ ಮನನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.

ಬಿಎಸ್‍ಪಿಯಲ್ಲಿ ಕೇಂದ್ರದಿಂದ ರಾಜ್ಯ ಉಸ್ತುವಾರಿಗಳಾಗಿ ನಿಯೋಜನೆಗೊಂಡಿ ರುವ ಸಂಯೋಜಕರು ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಗಾಂಧಿ ಆಜಾದ್ ಹಾಗೂ ಆರ್ಯನ್ ಆರ್ಯ ಅವರನ್ನು ಹೊರತು ಪಡಿಸಿ ಉಳಿದವರ್ಯಾರೂ ರಾಜ್ಯ ಪರಿಸ್ಥಿತಿ ಅರಿತುಕೊಳ್ಳುವಲ್ಲಿ ವಿಫಲರಾಗಿ, ಪಕ್ಷ ಸಂಘ ಟನೆಯನ್ನು ಹಾಳು ಮಾಡಿದ್ದಾರೆ ಎಂದು ದೂರಿದರು. ಪಕ್ಷದ ಮುಖಂಡ ಅಶೋಕ್ ಸಿದ್ದಾರ್ಥ ಮತ್ತು ಇತ್ತೀಚೆಗೆ ಉಸ್ತುವಾರಿ ಯಾಗಿ ನೇಮಕಗೊಂಡ ಎಂ.ಎಲ್.ತೋಮರ್ ಅವರು ಗುಂಪುಗಾರಿಕೆ ಮಾಡಿ ಪಕ್ಷವನ್ನು ಛಿದ್ರಗೊಳಿಸಿದ್ದಾರೆ. ಪಕ್ಷದ ಬೆಳ ವಣಿಗೆಗೆ ಮಾರಕವಾಗಿದ್ದಾರೆ ಎಂದು ಆರೋಪಿಸಿ ದರು. ತೋಮರ್ ಅವರು ಮೈಸೂರು ವಲ ಯದ ಪದಾಧಿಕಾರಿಗಳು ಮತ್ತು ಕಾರ್ಯ ಕರ್ತರಿಗೆ ಯಾವುದೇ ಮಾಹಿತಿ ನೀಡದೇ ಮೈಸೂರು ವಲಯದ ಪದಾಧಿಕಾರಿಗಳನ್ನು ವಿಸರ್ಜಿಸಿದ್ದಾರೆ. ಜೊತೆಗೆ ರಾಜ್ಯ ಸಂಯೋ ಜಕರು ಮತ್ತು ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು. ರಾಜೀ ನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರಿಗೆ ಕಳುಹಿಸಿರುವುದಾಗಿ ತಿಳಿಸಿದ ಅವರು, ತಮ್ಮ ಮುಂದಿನ ನಡೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ನಗರ ಪ್ರಧಾನ ಕಾರ್ಯದರ್ಶಿ ಅನಂತ್, ನಗರ ಉಸ್ತುವಾರಿ ದಿನಕರ್, ಕುಮಾರ್, ನಾಗ ರಾಜು ಹಾಗೂ ಪದಾಧಿಕಾರಿಗಳು ಇದ್ದರು.

Translate »