ರಥಸಪ್ತಮಿ ಹಿನ್ನೆಲೆಯಲ್ಲಿ `ಸಾಮೂಹಿಕ ಸೂರ್ಯ ನಮಸ್ಕಾರ’
ಮೈಸೂರು

ರಥಸಪ್ತಮಿ ಹಿನ್ನೆಲೆಯಲ್ಲಿ `ಸಾಮೂಹಿಕ ಸೂರ್ಯ ನಮಸ್ಕಾರ’

February 10, 2020

ಮೈಸೂರು,ಫೆ.9(ಎಂಟಿವೈ)-ರಥ ಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ `ಯೋಗ ಫೆಡರೇಷನ್ ಆಫ್ ಮೈಸೂರು’ ಸಂಸ್ಥೆ ಆಯೋಜಿಸಿದ್ದ `ಸಾಮೂಹಿಕ ಸೂರ್ಯ ನಮಸ್ಕಾರ’ದಲ್ಲಿ 1200ಕ್ಕೂ ಹೆಚ್ಚು ಯೋಗ ಪಟುಗಳು ಪಾಲ್ಗೊಂಡು ನೂರೆಂಟು ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು.

ಮೈಸೂರಿನ 5 ಯೋಗ ಸಂಸ್ಥೆಗಳು ಒಂದುಗೂಡಿ ರಚಿಸಲಾಗಿರುವ `ಯೋಗ ಫೆಡರೇಷನ್ ಆಫ್ ಮೈಸೂರು’ ವತಿಯಿಂದ ನಡೆದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮ ದಾಸ್ ಉದ್ಘಾಟಿಸಿದರು. ಬಳಿಕ ಮಾತನಾ ಡಿದ ಅವರು, ಯೋಗಾಸನದಿಂದ ಮಾನ ಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿ ಕೊಳ್ಳಬಹುದು. ಪ್ರಸ್ತುತ ಸಂದರ್ಭದಲ್ಲಿ ಯೋಗದ ಮಹತ್ವ ಅರಿತು ವಿದೇಶಿಯರೂ ಯೋಗಾಭ್ಯಾಸ ಮಾಡುತ್ತಿದ್ದಾರೆ. ಪ್ರತಿದಿನ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡುವುದರಿಂದ ಸದೃಢವಾಗಿರಬಹುದು. ಹಲವು ರೋಗಗಳು ಸುಳಿಯದಂತೆ ಯೋಗ ನೋಡಿಕೊಳ್ಳುತ್ತದೆ. ವೈದ್ಯಕೀಯ ಕ್ಷೇತ್ರದಲ್ಲೂ ಯೋಗದ ಮಹತ್ವ ಸಾಬೀತಾಗಿದೆ. ಇದ ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸುವ ಮೂಲಕ ವಿಶ್ವದ ನೂರಾರು ದೇಶಗಳು ಯೋಗ ಪ್ರದರ್ಶನ ಮಾಡುತ್ತಿರು ವುದು ಇದಕ್ಕೆ ಸಾಕ್ಷಿ. ರಥಸಪ್ತಮಿಗಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಆಯೋ ಜಿಸಿರುವುದು ಶ್ಲಾಘನೀಯ ಎಂದರು.

ಅರಮನೆ ಆವರಣಕ್ಕೆ ಮುಂಜಾನೆ 5.15ಕ್ಕೆ ಆಗಮಿಸಿದ ಯೋಗಪಟುಗಳು ಯೋಗ ಮ್ಯಾಟ್ ಹಾಸಿ ಸಿದ್ಧರಾದರು. ಬೆಳಿಗ್ಗೆ 5.30 ರಿಂದ ಸಾಮೂಹಿಕ ಸೂರ್ಯ ನಮಸ್ಕಾರ ಆರಂಭವಾಯಿತು. ಪ್ರಾರ್ಥನೆ ನೆರವೇರಿದ ಬಳಿಕ ಮಂತ್ರ ಪಠನೆಯೊಂದಿಗೆ 4 ಹಂತ ಗಳಲ್ಲಿ ಸೂರ್ಯ ನಮಸ್ಕಾರ ಪ್ರಕ್ರಿಯೆ ನಡೆ ಯಿತು. ಮೊದಲ ಹಂತದಲ್ಲಿ 24, 2ನೇ ಹಂತದಲ್ಲಿ 30, 3ನೇ ಹಂತದಲ್ಲಿ 30 ಹಾಗೂ 4ನೇ ಹಂತದಲ್ಲಿ 24 ಬಾರಿ ಸೂರ್ಯ ನಮಸ್ಕಾರ ಮಾಡಲಾಯಿತು. ಒಟ್ಟು 108 ಸೂರ್ಯ ನಮಸ್ಕಾರ ಪ್ರಕ್ರಿಯೆ ಬೆಳಿಗ್ಗೆ 8.30ಕ್ಕೆ ಪೂರ್ಣಗೊಂಡಿತು.

ಒಂದೊಂದು ಸುತ್ತಿನಲ್ಲೂ 10 ಆಸನ ಪ್ರದರ್ಶಿಸಲಾಯಿತು. ಒಟ್ಟು 108 ಸೂರ್ಯ ನಮಸ್ಕಾರದಿಂದ 1080 ಆಸನಗಳನ್ನು ಪ್ರದ ರ್ಶಿಸಲಾಯಿತು. ಮಕ್ಕಳು, ಯುವಕ-ಯುವತಿಯರು, ಪುರುಷರು, ಮಹಿಳೆ ಯರು, ಹಿರಿಯ ನಾಗರಿಕರೂ ಸೇರಿದಂತೆ ಎಲ್ಲಾ ವಯೋಮಾನದವರು ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು. ಇದೇ ವೇಳೆ 30ಕ್ಕೂ ಹೆಚ್ಚು ಯೋಗಪಟುಗಳು ಯೋಗ ನೃತ್ಯ ಪ್ರದರ್ಶಿಸಿದರು.

ಈ ಸಂದರ್ಭ ಯೋಗ ಫೆಡರೇಷನ್ ಆಫ್ ಮೈಸೂರು ಹಾಗೂ ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ, ವಿಜಯ ನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಶ್ರೀ ಭಾಷ್ಯಂ ಸ್ವಾಮೀಜಿ, ಮಾತಾಜಿ ಸುಚೇತ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಯೋಗಾ ಚಾರ್ಯ ಬಿ.ಪಿ.ಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾ ಲಕ್ಷ್ಮಿ, ಡಾ.ಶಶಿರೇಖಾ, ಯೋಗ ಸಂಸ್ಥೆಯ ಶಶಿಕುಮಾರ್, ಸತ್ಯನಾರಾಯಣ ಮತ್ತಿತ ರರು ಉಪಸ್ಥಿತರಿದ್ದರು.

Translate »