ಫೆ.13ಕ್ಕೆ ಪ್ರೊ.ಎಂಡಿಎನ್ 84ನೇ ಜನ್ಮದಿನ, ರೈತ ವಿರೋಧಿ ಕಾಯಿದೆ ವಿರುದ್ಧ ಜಾಗೃತಿ ಸಮಾವೇಶ
ಮೈಸೂರು

ಫೆ.13ಕ್ಕೆ ಪ್ರೊ.ಎಂಡಿಎನ್ 84ನೇ ಜನ್ಮದಿನ, ರೈತ ವಿರೋಧಿ ಕಾಯಿದೆ ವಿರುದ್ಧ ಜಾಗೃತಿ ಸಮಾವೇಶ

February 10, 2020

ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಆಯೋಜನೆ
ಮೈಸೂರು,ಫೆ.9(ಎಂಟಿವೈ)- ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶತಮಾನೋ ತ್ಸವ ಭವನದಲ್ಲಿ ಫೆ.13ರ ಬೆಳಿಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ `ರೈತ ಚೇತನ’ ದಿ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 84ನೇ ಜನ್ಮದಿನ ಹಾಗೂ ರೈತ ವಿರೋಧಿ ಕಾಯಿದೆಗಳ ವಿರುದ್ಧ ಜಾಗೃತಿ ಸಮಾವೇಶ ಹಮ್ಮಿಕೊಳ್ಳ ಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧÀ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ರೈತ ಚಳವಳಿ ನೇತಾರ, ಹುಟ್ಟು ಹೋರಾಟಗಾರರಾಗಿದ್ದ ಪ್ರೊ.ಎಂಡಿಎನ್ ನಮ್ಮಿಂದ ದೈಹಿಕವಾಗಿ ಅಗಲಿದ್ದರೂ, ಮಾನಸಿಕವಾಗಿ ವಿಚಾರಧಾರೆಗಳ ಮೂಲಕ ದೃಢವಾಗಿ ನೆಲೆಸಿದ್ದಾರೆ. ಇಂದಿಗೂ ಅವರ ಆದರ್ಶ, ತತ್ವ-ಸಿದ್ಧಾಂತವನ್ನು ರೈತ ಸಂಘ ಅಳವಡಿಸಿಕೊಂಡು ಹೋರಾಟ ನಡೆಸು ತ್ತಿದೆ. ಫೆ.13ರ ಬೆಳಿಗ್ಗೆ 11.30ಕ್ಕೆ ಚನ್ನಪಟ್ಟ ಣದ ಶತಮಾನೋತ್ಸವ ಭÀವನದಲ್ಲಿ ಪೆÇ್ರ. ಎಂ.ಡಿ.ನಂಜುಂಡಸ್ವಾಮಿ ಅವರ 84ನೇ ಜನ್ಮದಿನಾಚರಣೆ ಹಾಗೂ ರೈತ ವಿರೋಧಿ ಕಾಯಿದೆಗಳ ವಿರುದ್ಧ ಜಾಗೃತಿ ಮೂಡಿಸುವ ಉz್ದÉೀಶದಿಂದ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10ಕ್ಕೆ ಚನ್ನಪಟ್ಟಣದ ಮಂಗಳಪೇಟೆ ವೃತ್ತದಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಮತ್ತಿತರ ಜಿಲ್ಲೆಗಳ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದರು. ರೈತ ಮುಖಂಡರಾದ ಲೋಕೇಶ್ ರಾಜೇ ಅರಸ್, ಹೆಚ್.ಸಿ.ಲೋಕೇಶ್ ರಾಜೇ ಅರಸ್, ಸರಗೂರು ನಟರಾಜು, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನೇತ್ರಾವತಿ ಸುದ್ದಿಗೋಷ್ಠಿಯಲ್ಲಿದ್ದರು.

Translate »