ಬನ್ನಿಮಂಟಪದ ವೇಸ್ಟ್‍ಪೇಪರ್, ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ
ಮೈಸೂರು

ಬನ್ನಿಮಂಟಪದ ವೇಸ್ಟ್‍ಪೇಪರ್, ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ

February 10, 2020

ಮೈಸೂರು,ಫೆ.9(ಆರ್‍ಕೆ)- ಮೈಸೂರಿನ ಬನ್ನಿ ಮಂಟಪದ ಸಿವಿ ರಸ್ತೆಯಲ್ಲಿರುವ ವೇಸ್ಟ್ ಪೇಪರ್, ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತು ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.

ಮುಂಜಾನೆ ಸುಮಾರು 3.30 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದಾಗ ಗೋದಾಮು ಬೆಂಕಿ ಹೊತ್ತಿ ಉರಿ ಯುತ್ತಿದ್ದುದು ಕಂಡಿತು ಎಂದು ಮಾಲೀಕ ಲೋಹಿತ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮಾಹಿತಿ ಬಂದ ತಕ್ಷಣ ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಾಹನಗಳೊಂದಿಗೆ ತೆರಳಿ ಬೆಳಿಗ್ಗೆ 11 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರಾದರೂ, ಅಷ್ಟರಲ್ಲಿ ಲಕ್ಷಾಂತರ ರೂ. ಮೌಲ್ಯದ ವೇಸ್ಟ್ ಪೇಪರ್ ಮತ್ತು ಪ್ಲಾಸ್ಟಿಕ್ ಭಸ್ಮವಾದವು ಎಂದರು.

ಮುಂಜಾನೆ 1.30 ಗಂಟೆ ವೇಳೆಯೇ ಬೆಂಕಿ ಆರಂಭ ವಾಗಿತ್ತಾದರೂ, ಗೋದಾಮು ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದ್ದಾಗ ಮುಂಜಾನೆ 3.30 ಗಂಟೆ ವೇಳೆ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬೆಂಕಿ ಜ್ವಾಲೆ ವಿಸ್ತಾರ ಪ್ರದೇಶಕ್ಕೆ ಹರಡುತ್ತಿದ್ದರಿಂದ ಸರಸ್ವತಿಪುರಂ ಹಾಗೂ ಹೆಬ್ಬಾಳು ಅಗ್ನಿಶಾಮಕ ಠಾಣೆ ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆಸಿ ಕೊಂಡು ಕಾರ್ಯಾಚರಣೆ ನಡೆಸಿ ಗೋದಾಮಿನ ಬೆಂಕಿ ನಂದಿಸಿ ನೆರೆಹೊರೆಯ ಗೋದಾಮುಗಳಿಗೆ ಹರಡುವುದನ್ನು ತಡೆಗಟ್ಟಲಾಯಿತು. ಎನ್‍ಆರ್ ಠಾಣೆ ಇನ್‍ಸ್ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿಗಳೂ ಸಹ ಘಟನಾ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿ ಗಳೊಂದಿಗೆ ಬೆಂಕಿ ನಂದಿಸಲು ಸಹಕರಿಸಿದರಲ್ಲದೆ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿದ್ದೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂಬುದು ಮಹ ಜರಿನಿಂದ ತಿಳಿದು ಬಂದಿದ್ದು, ಎನ್.ಆರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »