ಮೈಸೂರು: ನಗರದ ಸರಸ್ವತಿಪುರಂ ನಲ್ಲಿರುವ ಮೈಸೂರು ಸೆಂಟ್ರಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಂ.ಸಿ.ಉತ್ಸವ-2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ವೇದಿಕೆಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರಾಜ್ಯ ಆಯು ರ್ವೇದಿಕ್ ಸಂಶೋಧನಾ ಕೇಂದ್ರದ ಮೈಸೂರಿನ ಸಹಾಯಕ ನಿರ್ದೇಶಕರಾದ ಡಾ.ಲಕ್ಷ್ಮೀ ನಾರಾಯಣ ಶೆಣೈರವರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ‘ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹಳ ಪ್ರಮುಖವಾದ ಘಟ್ಟ. ಹಾಗಾಗಿ ಈ ಹಂತದಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಮನಸ್ಸನ್ನು ಏಕಾಗ್ರತೆ, ಸತತ ಪರಿ ಶ್ರಮ ಮತ್ತು ನಿರಂತರ ಅಭ್ಯಾಸ ಮಾಡಿ ದಾಗ ಉನ್ನತ ವ್ಯಾಸಂಗವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪಠ್ಯಪುಸ್ತಕದ ಜೊತೆಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಸಂಗೀತ, ನೃತ್ಯ, ಸಾಹಿತ್ಯ, ಯೋಗ, ಕ್ರೀಡೆ ಇವುಗಳನ್ನೂ ಕೂಡ ಮೈಗೂ ಡಿಸಿಕೊಂಡಾಗ ಪರಿಪೂರ್ಣ ವ್ಯಕ್ತಿಗಳಾಗಿ, ಆರೋಗ್ಯಕರವಾಗಿ ಬದುಕಬಹುದೆಂದು ತಿಳಿ ಹೇಳಿದ ಅವರು, ಇಂದಿನ ವೈದ್ಯ ಪದ್ಧತಿ ಗಿಂತ ಪ್ರಾಚೀನ ಕಾಲದ ಆಯುರ್ವೇದ ಪದ್ಧತಿಯ ಔಷಧಿಗಳನ್ನು ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗು ವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಖಜಾಂಚಿಗಳಾದ ಪಿ.ಎಸ್.ಪ್ರಸಾದ್ ಮಾತನಾಡುತ್ತಾ, ವಿದ್ಯಾರ್ಥಿ ದೆಸೆಯಲ್ಲಿ ಉನ್ನತ ಗುರಿಗಳನ್ನು ಇಟ್ಟುಕೊಂಡು ಗುರಿ ಸಾಧಿಸುವತ್ತ ಪ್ರಯತ್ನ ಶೀಲರಾಗಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಸೆಂಟ್ರಲ್ ಪಿಯು ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಎ.ಎಚ್.ಗೋಪಾಲ ಕೃಷ್ಣ ಅವರು ಮಾತನಾಡುತ್ತಾ, ಮುಂಬ ರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಸಮೂಹ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸ ಬೇಕೆಂದು ತಿಳಿಸಿದರು. ಇದೇ ಸಂದರ್ಭ ದಲ್ಲಿ ಕಾಲೇಜಿನ ಸಹಪಠ್ಯ ಚಟುವಟಿಕೆ ಗಳಲ್ಲಿ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ರನ್ನು ಗೌರವಿಸಿ, ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶು ಪಾಲರಾದ ಡಿ.ಬಿ.ಲತಾ, ಶೈಕ್ಷಣಿಕ ಸಲಹೆಗಾರ ಎಂ.ನಾಗೇಂದ್ರ ಉಪಸ್ಥಿತ ರಿದ್ದರು. ಸಭೆಗೆ ಡಿ.ಬಿ.ಲತಾ ಸ್ವಾಗತಿಸಿ, ಪರಿಚಯಿಸಿದರೆ, ಉಪನ್ಯಾಸಕ ಶ್ಯಾಂ ವಂದಿಸಿದರು. ಉಪನ್ಯಾಸಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕø ತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿ ಯಾಗಿ ನೆರವೇರಿತು.