ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಅಂತಿಮ ಕಣದಲ್ಲಿ 393 ಮಂದಿ
ಮೈಸೂರು

ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಅಂತಿಮ ಕಣದಲ್ಲಿ 393 ಮಂದಿ

August 24, 2018
  •  66 ಮಂದಿ ಕಣದಿಂದ ಹಿಂದಕ್ಕೆ
  •  65 ವಾರ್ಡ್‍ಗೆ ಒಟ್ಟು 484 ಮಂದಿ ನಾಮಪತ್ರ ಸಲ್ಲಿಕೆ, 25 ಮಂದಿ ನಾಮಪತ್ರ ತಿರಸ್ಕೃತವಾಗಿದ್ದವು
  • ಅತೀ ಹೆಚ್ಚು ಮಂದಿ ವಾರ್ಡ್ ನಂ.7ರ ಮೇಟಗಳ್ಳಿಯಲ್ಲಿದ್ದರೆ, ಅತೀ ಕಡಿಮೆ ವಾರ್ಡ್ ನಂ.22ರ ಪಡುವಾರಹಳ್ಳಿಯಲ್ಲಿ ಬರೀ ಇಬ್ಬರೆ
  •  ಆರು ದಿನ ಬಹಿರಂಗ ಪ್ರಚಾರಕ್ಕೆ ಅವಕಾಶ
  • ಆ.29ರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ
  • ಆ.31ರಂದು ಮತದಾನ
  • ಸೆ.3ರಂದು ಮತ ಎಣಿಕೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಒಟ್ಟು 65 ವಾರ್ಡ್‍ಗಳಿಗೆ 393 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಒಟ್ಟು 484 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 25 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ಗೊಂಡು 459 ಮಂದಿಯ ನಾಮಪತ್ರಗಳು ಕ್ರಮಬದ್ಧ ವಾಗಿದ್ದವು. ಇಂದು 66 ಮಂದಿ ನಾಮಪತ್ರ ಹಿಂತೆಗೆದಿದ್ದು, ಅಂತಿಮವಾಗಿ 393 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ 7ನೇ ವಾರ್ಡ್ (ಮೇಟ ಗಳ್ಳಿ)ನಲ್ಲಿ ಅತೀ ಹೆಚ್ಚು ಅಂದರೆ 16 ಮಂದಿ ನಾಮಪತ್ರ ಸಲ್ಲಿಸಿದ್ದು, ಒಬ್ಬರು ಮಾತ್ರ ಹಿಂತೆಗೆದು, 15 ಮಂದಿ ಕಣದಲ್ಲಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗ-ಎ ಮಹಿಳೆಗೆ ಮೀಸಲಾಗಿರುವ 22ನೇ ವಾರ್ಡ್ (ಪಡುವಾರಹಳ್ಳಿ)ನಲ್ಲಿ ಅತೀ ಕಡಿಮೆ ಎಂದರೆ ಮೂವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಒಬ್ಬರ ನಾಮಪತ್ರ ತಿರಸ್ಕೃತಗೊಂಡು ಅಂತಿಮವಾಗಿ ಇಬ್ಬರು ಮಾತ್ರ ಅಂತಿಮ ಕಣದಲ್ಲಿದ್ದು, ಈ ವಾರ್ಡ್‍ನಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ.
ಅಭ್ಯರ್ಥಿಗಳಿಗೆ ಬಹಿರಂಗ ಪ್ರಚಾರಕ್ಕೆ 6 ದಿನ ಅವಕಾಶವಿದ್ದು, ಆ.29ರಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಆ.31ರಂದು ಮತದಾನ ನಡೆಯಲಿದ್ದು,

ಸೆ.3ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. 1ನೇ ವಾರ್ಡ್ (ಹೆಬ್ಬಾಳು ಲಕ್ಷ್ಮೀಕಾಂತನಗರ)ನಲ್ಲಿ 5 ಮಂದಿ ಅಂತಿಮ ಕಣದಲ್ಲಿದ್ದಾರೆ. 2ನೇ ವಾರ್ಡ್ (ಮಂಚೇಗೌಡನ ಕೊಪ್ಪಲು) 5, 3ನೇ ವಾರ್ಡ್ (ಮಹದೇಶ್ವರ ಬಡಾವಣೆ) 5, ನಾಲ್ಕನೇ ವಾರ್ಡ್ (ಹೆಬ್ಬಾಳು ಲೋಕನಾಯಕನಗರ) 5, 5ನೇ ವಾರ್ಡ್ (ಕುಂಬಾರಕೊಪ್ಪಲು) 4, 6ನೇ ವಾರ್ಡ್ (ಗೋಕುಲಂ) 5, 7ನೇ ವಾರ್ಡ್ (ಮೇಟಗಳ್ಳಿ) 15, 8ನೇ ವಾರ್ಡ್ (ಬನ್ನಿಮಂಟಪ ಹುಡ್ಕೊ ಬಡಾವಣೆ) 11, 9ನೇ ವಾರ್ಡ್ (ಕೆಸರೆ) 5, 10ನೇ ವಾರ್ಡ್ (ರಾಜೀವ್‍ನಗರ) 5, 11ನೇ ವಾರ್ಡ್ (ಶಾಂತಿನಗರ, ಮಹದೇವಪುರ ರಸ್ತೆ) 8, 12ನೇ ವಾರ್ಡ್ (ಶಾಂತಿನಗರ, ಇಂದಿರಾಗಾಂಧಿ ರಸ್ತೆ) 4, 13ನೇ ವಾರ್ಡ್ (ಉದಯಗಿರಿ) 4, 14ನೇ ವಾರ್ಡ್ (ಸತ್ಯನಗರ) 7, 15ನೇ ವಾರ್ಡ್ (ರಾಜೇಂದ್ರನಗರ) 12, 16ನೇ ವಾರ್ಡ್ (ಸುಭಾಷ್‍ನಗರ) 6, 17ನೇ ವಾರ್ಡ್ (ಬನ್ನಿಮಂಟಪ) 8, 18ನೇ ವಾರ್ಡ್ (ಯಾದವಗಿರಿ) 5, 19ನೇ ವಾರ್ಡ್ (ಜಯಲಕ್ಷ್ಮೀಪುರಂ, ವಿವಿ ಮೊಹಲ್ಲಾ) 4, 20ನೇ ವಾರ್ಡ್ (ವಿಜಯನಗರ) 5, 21ನೇ ವಾರ್ಡ್ (ಗಂಗೋತ್ರಿ) 4, 22ನೇ ವಾರ್ಡ್ (ಪಡುವಾರಹಳ್ಳಿ) 2, 23ನೇ ವಾರ್ಡ್ (ಸುಬ್ಬರಾಯನಕೆರೆ) 6.

24ನೇ ವಾರ್ಡ್ (ಮಂಡಿಮೊಹಲ್ಲಾ) 9, 25ನೇ ವಾರ್ಡ್ (ತಿಲಕ್‍ನಗರ) 8, 26ನೇ ವಾರ್ಡ್ (ಮೀನಾ ಬಜಾರ್) 5, 27ನೇ ವಾರ್ಡ್ (ವೀರನಗೆರೆ) 11, 28ನೇ ವಾರ್ಡ್ (ಗಾಂಧಿನಗರ) 4, 29ನೇ ವಾರ್ಡ್ (ಎನ್.ಆರ್.ಮೊಹಲ್ಲಾ) 7, 30ನೇ ವಾರ್ಡ್ (ಕ್ಯಾತಮಾರನಹಳ್ಳಿ) 6, 31ನೇ ವಾರ್ಡ್ (ಕೆ.ಎನ್.ಪುರಂ, ಗೌಸಿಯಾನಗರ) 7, 32ನೇ ವಾರ್ಡ್ (ಗೌಸಿಯಾನಗರ ಎ-ಬ್ಲಾಕ್, ಉಸ್ಮಾನಿಯಾ ವಾರ್ಡ್) 8, 33ನೇ ವಾರ್ಡ್ (ಅಜೀಜ್ ಸೇಠ್ ನಗರ) 6, 34ನೇ ವಾರ್ಡ್ (ಕಲ್ಯಾಣಗಿರಿ) 5, 35ನೇ ವಾರ್ಡ್ (ಸಾತಗಳ್ಳಿ ಬಡಾವಣೆ) 7, 36ನೇ ವಾರ್ಡ್ (ಯರಗನಹಳ್ಳಿ ಅಂಬೇಡ್ಕರ್ ಕಾಲೋನಿ) 4, 37ನೇ ವಾರ್ಡ್ (ರಾಜೇಂದ್ರನಗರ) 5, 38ನೇ ವಾರ್ಡ್ (ಗಿರಿಯಾಬೋವಿ ಪಾಳ್ಯ) 7, 39ನೇ ವಾರ್ಡ್ (ಗಾಯಿತ್ರಿಪುರಂ) 9, 40ನೇ ವಾರ್ಡ್ (ಲಷ್ಕರ್ ಮೊಹಲ್ಲಾ) 5, 41ನೇ ವಾರ್ಡ್ (ದೇವರಾಜ ಮೊಹಲ್ಲಾ) 6, 42ನೇ ವಾರ್ಡ್ (ಕೆ.ಜಿ.ಕೊಪ್ಪಲು) 5, 43ನೇ ವಾರ್ಡ್ (ಟಿ.ಕೆ.ಬಡಾವಣೆ) 3, 44ನೇ ವಾರ್ಡ್ (ಜನತಾ ನಗರ) 5, 45ನೇ ವಾರ್ಡ್ (ಶಾರದಾದೇವಿನಗರ) 3, 46ನೇ ವಾರ್ಡ್ (ದಟ್ಟಗಳ್ಳಿ) 6.

47ನೇ ವಾರ್ಡ್ (ಕುವೆಂಪುನಗರ) 4, 48ನೇ ವಾರ್ಡ್ (ಜಯನಗರ) 5, 49ನೇ ವಾರ್ಡ್ (ಲಕ್ಷ್ಮೀಪುರಂ) 7, 50ನೇ ವಾರ್ಡ್ (ಸುಣ್ಣದಕೇರಿ) 7, 51ನೇ ವಾರ್ಡ್ (ಅಗ್ರಹಾರ) 9, 52ನೇ ವಾರ್ಡ್ (ಇಟ್ಟಿಗೆಗೂಡು) 4, 53ನೇ ವಾರ್ಡ್ (ಕುರುಬಾರಹಳ್ಳಿ) 3, 54ನೇ ವಾರ್ಡ್ (ಗುಂಡೂರಾವ್ ನಗರ) 7, 55ನೇ ವಾರ್ಡ್ (ಚಾಮುಂಡಿಪುರಂ) 8, 56ನೇ ವಾರ್ಡ್ (ಕೃಷ್ಣಮೂರ್ತಿಪುರಂ) 4, 57ನೇ ವಾರ್ಡ್ (ಕುವೆಂಪುನಗರ ಸಿಐಟಿಬಿ) 7, 58ನೇ ವಾರ್ಡ್ (ರಾಮಕೃಷ್ಣನಗರ) 12, 59ನೇ ವಾರ್ಡ್ (ಕುವೆಂಪುನಗರ ಎಂ-ಬ್ಲಾಕ್) 5, 60ನೇ ವಾರ್ಡ್ (ಅಶೋಕಪುರಂ) 6, 61ನೇ ವಾರ್ಡ್ (ವಿದ್ಯಾರಣ್ಯಪುರಂ) 7, 62ನೇ ವಾರ್ಡ್ (ವಿಶ್ವೇಶ್ವರನಗರ) 6, 63ನೇ ವಾರ್ಡ್ (ಜೆ.ಪಿ.ನಗರ) 7, 64ನೇ ವಾರ್ಡ್ (ಅರವಿಂದನಗರ) 3, 65ನೇ ವಾರ್ಡ್ (ಶ್ರೀರಾಂಪುರ) 4 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಇಂದಿನಿಂದ ಅಧಿಕೃತ ಪ್ರಚಾರ ಪೈಪೋಟಿ
ಮೈಸೂರು: ಮೈಸೂರು ಮಹಾ ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಳೆ (ಆ.24)ಯಿಂದ ಅಧಿಕೃತ ವಾಗಿ ಪ್ರಚಾರದ ಪೈಪೋಟಿಗಿಳಿಯಲಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕೆಲವರು ತಾವು ಸ್ಪರ್ಧಿಸಲಿಚ್ಛಿಸಿದ್ದ ವಾರ್ಡ್‍ಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು. ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಪ್ರಚಾರಕ್ಕಿಳಿದಿದ್ದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಂತಿಮವಾಗಿ ಕಣದಲ್ಲಿ ಉಳಿದವರನ್ನು ಅಧಿಕೃತ ಅಭ್ಯರ್ಥಿಗಳು ಎಂದು ಪರಿಗಣಿಸಿ ಚುನಾವಣಾಧಿಕಾರಿಗಳು ಅವರಿಗೆ ಕ್ರಮ ಸಂಖ್ಯೆ ಮತ್ತು ಚಿಹ್ನೆಗಳನ್ನು ಒದಗಿಸಿರುವುದರಿಂದ ಇಂದು ಸಂಜೆಯ ನಂತರ ಕಣದಲ್ಲುಳಿದಿರುವ ಎಲ್ಲರೂ ಅಧಿಕೃತ ಅಭ್ಯರ್ಥಿಗಳಾಗಿದ್ದು, ಕೆಲವರು ಇಂದು ಸಂಜೆಯೇ ಕ್ರಮ ಸಂಖ್ಯೆ ಸಮೇತ ಪ್ರಚಾರಕ್ಕಿಳಿದಿದ್ದರು. ತಮಗೆ ಕ್ರಮ ಸಂಖ್ಯೆ ಮತ್ತು ಚಿಹ್ನೆ ದೊರೆಯುತ್ತಿದ್ದಂತೆಯೇ ಬಹುತೇಕ ಅಭ್ಯರ್ಥಿಗಳು ಕರಪತ್ರ ಮುದ್ರಿಸಲು ಮುದ್ರಣಾಲಯಗಳ ಮೊರೆ ಹೋಗಿದ್ದು, ಎಲ್ಲಾ ಅಭ್ಯರ್ಥಿಗಳು ನಾಳೆಯಿಂದ ಅಧಿಕೃತವಾಗಿ ಪ್ರಚಾರ ಪೈಪೋಟಿಗಿಳಿಯಲಿದ್ದಾರೆ.

Translate »