ನಾಳೆ ನಾಮಪತ್ರ ಸಲ್ಲಿಕೆಗೆ ಕಡೇ ದಿನ
ಮೈಸೂರು

ನಾಳೆ ನಾಮಪತ್ರ ಸಲ್ಲಿಕೆಗೆ ಕಡೇ ದಿನ

August 19, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾ ವಣೆಗೆ ನಾಮಪತ್ರ ಸಲ್ಲಿ ಸಲು ಆ.20ರಂದು ಕಡೇ ದಿನವಾಗಿದ್ದು, ಈವರೆಗೂ ಮೂರೂ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೂ ತೆರೆಮರೆಯಲ್ಲಿ ಅಭ್ಯರ್ಥಿ ಗಳ ಆಯ್ಕೆ ಮಾಡಿಕೊಂಡು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇ ಗೌಡ ಪ್ರತಿಕ್ರಿಯಿಸಿ, ಒಂದಷ್ಟು ಅಭ್ಯರ್ಥಿಗಳಿಗೆ ಈಗಾ ಗಲೇ `ಬಿ’ಫಾರಂ ವಿತರಿಸಲಾಗಿದ್ದು, ಇನ್ನೂ 30ಕ್ಕಿಂತ ಹೆಚ್ಚು ವಾರ್ಡ್‍ಗಳ ಅಭ್ಯರ್ಥಿಗಳ ಆಯ್ಕೆ ನಾಳೆ (ಆ.19) ಅಂತಿಮವಾಗಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಅವರು, ಒಟ್ಟು 65 ವಾರ್ಡ್‍ಗಳಿಂದ ಸುಮಾರು 250 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ನಾಳೆ(ಆ.19) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ ವಾರ್ಡ್‍ಗಳ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಈ ಎರಡೂ ಪಕ್ಷಗಳಿಗಿಂತ ಹೆಚ್ಚು ಆಕಾಂಕ್ಷಿಗಳನ್ನು ಒಳಗೊಂಡಿರುವ ಬಿಜೆಪಿಯಲ್ಲಿ ಒಂದಿಷ್ಟು ರಾಜಕೀಯ ಬದಲಾವಣೆಗಳಾಗಿದ್ದು, ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಕೆಲವೊಂದು ಹೊರತುಪಡಿಸಿ ಬಹುತೇಕ ಎಲ್ಲಾ ವಾರ್ಡ್‍ಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಚಾಮರಾಜ ಕ್ಷೇತ್ರ: ಲಕ್ಷ್ಮೀಕಾಂತನಗರ(1ನೇ ವಾರ್ಡ್)ದಿಂದ ಎಸ್.ತ್ರಿವೇಣಿ ಜಯಪ್ಪ, ಮಂಚೇಗೌಡನಕೊಪ್ಪಲು(2) ಎಂ.ಎಸ್.ಸೌಭಾಗ್ಯ ಕೃಷ್ಣ, ಮಹದೇಶ್ವರ ಬಡಾವಣೆ(3) ಕೆ.ಎಂ.ಸತೀಶ್‍ಚಂದ್ರ, ಲೋಕನಾಯಕನಗರ(4) ವೈ.ಸತೀಶ್, ಕುಂಬಾರಕೊಪ್ಪಲು(5) ಸುಷ್ಮಾ ಹಲಗೇಗೌಡ, ಗೋಕುಲಂ(6) ಗಿರೀಶ್‍ಪ್ರಸಾದ್, ಮೇಟಗಳ್ಳಿ(7) ಆರ್.ಭರತ್, ಯಾದವಗಿರಿ(18) ಗುರು ವಿನಾಯಕ, ಜಯಲಕ್ಷ್ಮೀಪುರಂ/ವಿವಿ ಮೊಹಲ್ಲಾ(19) ಹೇಮಾ ನಂದೀಶ್, ವಿಜಯನಗರ(20) ಎಂ.ಯು.ಸುಬ್ಬಯ್ಯ, ಗಂಗೋತ್ರಿ(21) ಸಿ.ವೇದಾವತಿ, ಪಡುವಾರಹಳ್ಳಿ(22) ನಮ್ರತಾ ರಮೇಶ್, ಸುಬ್ಬರಾಯನಕೆರೆ(23) ಎಂ.ಪ್ರಮಿಳಾ, ಮಂಡಿಮೊಹಲ್ಲಾ(24) ಆರ್.ರವಿಕುಮಾರ್, ಮೀನಾ ಬಜಾರ್(26) ವಿ.ಭಾರತಿ, ಲಕ್ಷ್ಕರ್ ಮೊಹಲ್ಲಾ(40) ಎಂ.ಸತೀಶ್, ದೇವರಾಜ ಮೊಹಲ್ಲಾ(41) ಕೆ.ಹರ್ಷ.(ತಿಲಕ್‍ನಗರ(25) ಹಾಗೂ ಕೆ.ಜಿ.ಕೊಪ್ಪಲು(42) ವಾರ್ಡ್‍ಗಳಿಗೆ ಆಯ್ಕೆಯಾಗಿಲ್ಲ)
ನರಸಿಂಹರಾಜ ಕ್ಷೇತ್ರ: ಬನ್ನಿಮಂಟಪ(8ನೇ ವಾರ್ಡ್) ಟಿ.ಎನ್.ಶಾಂತ, ಕೆಸರೆ(9) ಆರ್.ಚಂದ್ರಶೇಖರ್, ರಾಜೀವ್‍ನಗರ(10) ಮಹದೇವಪ್ರಸಾದ್, ಶಾಂತಿನಗರ1(11) ಡಿ.ಜೆ.ಜಗದೀಶ್, ಸತ್ಯನಗರ(14) ಸಿ.ಆರ್.ಜುನೇದ್ ಅಹಮ್ಮದ್, ರಾಜೇಂದ್ರನಗರ(15) ಸಿ.ಜಿ.ಶಿವಕುಮಾರ್, ಸುಭಾಷ್‍ನಗರ(16) ಬಿ.ಭಾನುಪ್ರಕಾಶ್, ಬನ್ನಿಮಂಟಪ(17) ಎಸ್.ಲೀಲಾವತಿ, ವೀರನಗೆರೆ(27) ಯಶೋಧ ಶ್ರೀನಿವಾಸ್, ಗಾಂಧಿನಗರ(28) ಡಾ.ಅಶ್ವಿನಿ ಶರತ್, ಎನ್.ಆರ್.ಮೊಹಲ್ಲಾ(29) ಲಕ್ಷ್ಮಣ್, ಗೌಸಿಯಾನಗರ(31) ಬಿ.ಪದ್ಮನಾಭ್, ಅಜೀಜ್‍ಸೇಠ್‍ನಗರ(33) ಎ.ಮಣಿಕಂಠ, ಕಲ್ಯಾಣಗಿರಿ(34) ಸಲ್ಮಾಬಾನು, ಸಾತಗಳ್ಳಿ(35) ಸಾತ್ವಿಕ್ ಸಂದೇಶ್‍ಸ್ವಾಮಿ ಅಥವಾ ಸ್ವಾಮಿಗೌಡ, ಯರಗನಹಳ್ಳಿ(36) ನಳಿನಿ ಚಂದ್ರಶೇಖರ್, ರಾಘವೇಂದ್ರನಗರ(37) ಎಸ್.ಜ್ಯೋತಿ, ಗಿರಿಯಾಭೋವಿಪಾಳ್ಯ(38) ಡಿ.ಗೋಪಿ, ಗಾಯಿತ್ರಿಪುರಂ 1ನೇ ಹಂತ(39) ಆರ್.ಸುಬ್ರಮಣಿ. (ಶಾಂತಿನಗರ2(12), ಉದಯಗಿರಿ(13), ಕ್ಯಾತಮಾರನಹಳ್ಳಿ(30) ಹಾಗೂ ಗೌಸಿಯಾನಗರ ಎ ಬ್ಲಾಕ್(32) ವಾರ್ಡ್‍ಗಳಿಗೆ ಆಯ್ಕೆಯಾಗಿಲ್ಲ)

ಕೃಷ್ಣರಾಜ ಕ್ಷೇತ್ರ: ಟಿ.ಕೆ.ಬಡಾವಣೆ(43ನೇ ವಾರ್ಡ್) ಕೆ.ಗೋಕುಲ್ ಗೋವರ್ಧನ್, ಶಾರದಾದೇವಿನಗರ(45) ಎಂ.ಪಾರ್ವತಿ ರಘು), ಕುವೆಂಪುನಗರ(47) ಲಕ್ಷ್ಮಣ್ ವಿಜಯಕುಮಾರ್ ಅಥವಾ ಅಶೋಕ್, ಜಯನಗರ(48) ಗೌರಿ ನಾಗರಾಜು, ಲಕ್ಷ್ಮೀಪುರಂ(49) ಎಸ್.ಸೌಮ್ಯ ಉಮೇಶ್‍ಕುಮಾರ್, ಅಗ್ರಹಾರ(51) ಬಿ.ವಿ.ಮಂಜುನಾಥ್, ಇಟ್ಟಿಗೆಗೂಡು(52) ಎಂ.ಛಾಯಾದೇವಿ ನವೀನ್, ಗುಂಡೂರಾವ್‍ನಗರ(54) ಚಿಕ್ಕಮ್ಮ ಬಸವರಾಜು, ಕೃಷ್ಣಮೂರ್ತಿಪುರಂ(56) ಗೌರಮ್ಮ ಗೋಪಾಲ್, ಕುವೆಂಪುನಗರ ಸಿಐಟಿಬಿ(57) ಎಂ.ಸಿ.ರಮೇಶ್, ಕುವೆಂಪುನಗರ ಎಂ ಬ್ಲಾಕ್(59) ಸುನಂದಾ ಪಾಲನೇತ್ರ, ಅಶೋಕಪುರಂ(60) ರಮ್ಯಾಕೃಷ್ಣ, ವಿದ್ಯಾರಣ್ಯಪುರಂ(61) ಎ.ವಿ.ವಿದ್ಯಾಅರಸ್, ವಿಶ್ವೇಶ್ವರ ನಗರ(62) ಆರ್.ಶಾಂತಮ್ಮ ವಡಿವೇಲು, ಜೆ.ಪಿ.ನಗರ(63) ಶಾರದಮ್ಮ, ಅರವಿಂದನಗರ (64) ದೀಪಾ ಶಿವಕುಮಾರ್ ಅಥವಾ ಅನುಷಾ ಗಿರೀಶ್, ಶ್ರೀರಾಂಪುರ(65) ಗೀತಾ ಯೋಗಾನಂದ್.(ಸುಣ್ಣದಕೇರಿ(50), ಕುರುಬಾರಹಳ್ಳಿ(53), ಚಾಮುಂಡಿಪುರಂ(55) ವಾರ್ಡ್‍ಗಳಿಗೆ ಆಯ್ಕೆಯಾಗಿಲ್ಲ.

ಚಾಮುಂಡೇಶ್ವರಿ ಕ್ಷೇತ್ರ: ಜನತಾನಗರ(44ನೇ ವಾರ್ಡ್) ಯಶೋದಾ ರೇವಣ್ಣ, ದಟ್ಟಗಳ್ಳಿ(46) ಲಕ್ಷ್ಮೀ ಮಾದೇಗೌಡ ಹಾಗೂ ರಾಮಕೃಷ್ಣನಗರ(58) ಆರ್.ಕೆ.ಶರತ್‍ಕುಮಾರ್.

Translate »