ಶಾಸಕ ಎಲ್.ನಾಗೇಂದ್ರರಿಗೆ ಪಿತೃವಿಯೋಗ
ಮೈಸೂರು

ಶಾಸಕ ಎಲ್.ನಾಗೇಂದ್ರರಿಗೆ ಪಿತೃವಿಯೋಗ

March 9, 2020

ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ ಸೇರಿ ಹಲವು ಗಣ್ಯರಿಂದ ಯಜಮಾನ್ ಲಿಂಗಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ
ಮೈಸೂರು,ಮಾ.8(ಆರ್‍ಕೆ)-ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ತಂದೆ ಯಜಮಾನ್ ಲಿಂಗಪ್ಪ (96) ಅವರು ಕೆ.ಜಿ. ಕೊಪ್ಪಲಿನ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು.

ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಿಂಗಪ್ಪ ಅವರು ಮುಂಜಾನೆ ಸುಮಾರು 4.20 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಶ್ರೀಮತಿ ಪುಟ್ಟಲಿಂಗಮ್ಮ (ಕರಗಮ್ಮ), ಪುತ್ರರಾದ ಶಾಸಕ ಎಲ್.ನಾಗೇಂದ್ರ, ಎಲ್.ಮಾದಪ್ಪ, ಎಲ್.ಚೌಡಪ್ಪ, ಎಲ್.ಮಂಜುನಾಥ, ಪುತ್ರಿಯರಾದ ಪುಟ್ಟಲಕ್ಷ್ಮಮ್ಮ, ಮಣಿಯಮ್ಮ, ಅಳಿಯಂದಿರು, ಸೊಸೆಯಂದಿರು, ಮೊಮ್ಮ ಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಭಾನುವಾರ ಮಧ್ಯಾಹ್ನ 4 ಗಂಟೆಗೆ ಕೆ.ಜಿ.ಕೊಪ್ಪಲಿನ ರುದ್ರಭೂಮಿಯಲ್ಲಿ ಲಿಂಗಪ್ಪ ಅವರ ಅಂತ್ಯಕ್ರಿಯೆ ನೆರವೇರಿಸ ಲಾಯಿತು. ಕನ್ನೇಗೌಡನಕೊಪ್ಪಲು, ಜಯನಗರ ನಿವಾಸಿಗಳು, ಸಂಬಂಧಿಕರು, ರಾಜಕೀಯ ಗಣ್ಯರು ಸೇರಿದಂತೆ ಅನೇಕ ಅನುಯಾಯಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಎಂ.ಮರಂಕಲ್, ವಿಧಾನ ಪರಿಷತ್ ಸದಸ್ಯರಾದ ಸಂದೇಶನಾಗರಾಜ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇ ಗೌಡ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ತೋಂಟದಾರ್ಯ, ಡಿ.ಮಾದೇ ಗೌಡ, ಮಾರುತಿರಾವ್ ಪವಾರ್, ಮುಖಂಡರಾದ ಹೆಚ್.ವಿ.ರಾಜೀವ್, ಸಿ.ಹೆಚ್. ವಿಜಯಶಂಕರ್, ಮುಡಾ ಮಾಜಿ ಅಧ್ಯಕ್ಷ ಡಿ.ಧೃವಕುಮಾರ್, ಯುವ ಕಾಂಗ್ರೆಸ್ ಮುಖಂಡ ಕವೀಶ್‍ಗೌಡ, ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ, ಅಯೂಬ್ ಖಾನ್, ಕಾರ್ಪೋರೇಟರ್ ಎಸ್‍ಬಿಎಂ ಮಂಜು, ಕಾಂಗ್ರೆಸ್ ಮುಖಂಡರಾದ ವಿಕ್ರಾಂತ್ ಪಿ.ದೇವೇಗೌಡ, ಭಾಸ್ಕರ್ ಎಲ್.ಗೌಡ, ಸಿ.ಮಾದೇಶ, ಮಾರ್ಕೆಟ್ ದಿನೇಶ, ಬಿ.ಎಂ. ರಾಮು, ಕಾರ್ಪೋರೇಟರ್‍ಗಳು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಪೊಲೀಸ್, ರೆವಿನ್ಯೂ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಲಿಂಗಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Translate »