ಸುಳವಾಡಿ ವಿಷ ಪ್ರಸಾದ ಪ್ರಕರಣಕ್ಕೆ ತಿಂಗಳು: ಹಂತಕರು ಹೊರಬರದಿರಲಿ
ಮೈಸೂರು

ಸುಳವಾಡಿ ವಿಷ ಪ್ರಸಾದ ಪ್ರಕರಣಕ್ಕೆ ತಿಂಗಳು: ಹಂತಕರು ಹೊರಬರದಿರಲಿ

January 15, 2019

ಮೈಸೂರು: ಹನೂರು ತಾಲೂ ಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣಕ್ಕೆ ಒಂದು ತಿಂಗಳಾಯಿತು. ಗ್ರಾಮದಲ್ಲಿ ಈಗಲೂ ದುಃಖ, ಮೌನ ಮನೆ ಮಾಡಿದೆ. ಕಾರಾಗೃಹದಲ್ಲಿರುವ ಆರೋಪಿಗಳು ಪ್ರಭಾವ ಬಳಸಿ ಹೊರ ಬರುತ್ತಾರೆಂಬ ಆತಂಕವೂ ಅಲ್ಲಿನ ಜನರನ್ನು ಕಾಡುತ್ತಿದೆ.

ತಿಂಗಳ ಹಿಂದೆ (ಡಿ.14, 2018) ಚಾಮ ರಾಜನಗರ ಜಿಲ್ಲೆಯ ಹನೂರು ತಾಲೂ ಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಗೋಪುರÀ ಶಂಕುಸ್ಥಾಪನೆ ಪೂಜಾ ಮಹೋತ್ಸವದಲ್ಲಿ ಭಕ್ತರಿಗೆ ದೇವಾ ಲಯದ ವತಿಯಿಂದ ಪ್ರಸಾದ ರೂಪದಲ್ಲಿ ನೀಡಲಾದ ಟೊಮಟೋ ಬಾತ್ ತಿಂದು 17 ಅಮಾಯಕರು ಸಾವಿಗೀಡಾಗಿದ್ದು, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಕ್ರಿಮಿನಾಶಕ ಬೆರೆಸ ಲಾಗಿತ್ತು. ಇಂದಿಗೂ ಮೈಸೂರಿನ ನಾರಾ ಯಣ ಹೃದಯಾಲಯದಲ್ಲಿ ಮೋಹನ್ ಎಂಬ 10 ವರ್ಷದ ಬಾಲಕ ವೆಂಟಿ ಲೇಟರ್‍ನಲ್ಲಿದ್ದರೆ, ಇನ್ನೂ ಆರೇಳು ಮಂದಿ ಮೈಸೂರಿನ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಾದರೂ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾ ಲಯದ ವಿಷ ಪ್ರಸಾದ ಪ್ರಕರಣ ಅಲ್ಲಿನ ಗ್ರಾಮಸ್ಥರನ್ನು ಎಡೆಬಿಡದೆ ಕಾಡುತ್ತಿದ್ದು, ಭಯ ಹಾಗೂ ಆತಂಕದಲ್ಲೇ ದಿನ ದೂಡುವಂತೆ ಮಾಡಿದೆ.

ಕುಟುಂಬಕ್ಕಿದ್ದ ಒಂದೇ ಕಣ್ಣು ಕಳೆದು ಕೊಂಡಿದ್ದೇವೆ: ಘಟನೆಗೆ ಸಂಬಂಧಿಸಿದಂತೆ ವಡ್ಡರದೊಡ್ಡಿ ನಿವಾಸಿ ಗೌರಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಜೈಲು ಪಾಲಾಗಿರುವ ಆರೋಪಿಗಳು ರಾಜಕಾರಣಿ ಗಳ ಬೆಂಬಲ ಪಡೆದು ಜೈಲಿನಿಂದ ಹೊರ ಬರುತ್ತಾರೆ ಎಂಬ ಅನುಮಾನ ನಮ್ಮಲ್ಲಿದೆ. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವುದನ್ನು ತಪ್ಪಿಸಬಾರದು. ನಮ್ಮ ಕುಟುಂಬಕ್ಕೆ ಇದ್ದ ಏಕೈಕ ಗಂಡು ಮಗ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿ ದ್ದಾನೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಹೆಣ್ಣು ಮಕ್ಕಳೇ. ನನ್ನ ಮೈದುನನ ಮಗ ಸತ್ಯವೇಲು (19) ಮಾತ್ರ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ ಆತನೂ ವಿಷ ಪ್ರಸಾದ ತಿಂದು ಮೃತಪಟ್ಟಿದ್ದಾನೆ. ಆರೋಪಿ ಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಅವರ ಕಣ್ಣುಗಳನ್ನು ಕೀಳಬೇಕು. ಅಂಬಿಕಾಗೆ ಹೆಣ್ಣು ಎಂದು ಬಿಡದೆ ಉಗ್ರಶಿಕ್ಷೆಯಾಗ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರಕ್ಕೆ ನೇತುಹಾಕಿ ಮೆಣಸಿನಕಾಯಿ ಹೊಗೆ ಹಾಕಬೇಕು: ವಡ್ಡರದೊಡ್ಡಿ (ಕೋಡೆ ಸಂದ್ರ) ಮಾದೇಶ ಮಾತನಾಡಿ, ಈ ಹಂತಕರಿಗೆ ಜೈಲಿನಲ್ಲಿ ಇರಿಸಿ, ಸಕಾಲಕ್ಕೆ ಊಟ, ತಿಂಡಿ ನೀಡಿದರೆ ಸಾಲದು. ಒಂದು ಅಥವಾ 2 ವರ್ಷದ ನಂತರ ಜೈಲಿನಿಂದ ಹೊರಗೆ ಬರುತ್ತಾರೆ. ಆದರೆ 17 ಜನ ಸಾವನ್ನಪ್ಪಿರುವ ಕುಟುಂಬಕ್ಕೆ ಆಗಿರುವ ನೋವನ್ನು ಭರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರಲ್ಲದೇ ಇವರನ್ನು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಬಳಿ ಕರೆತಂದು ಮರಕ್ಕೆ ಕಟ್ಟಿ ಹಾಕಿ, ಮೆಣಸಿನ ಕಾಯಿ ಹೊಗೆ ಹಾಕುವ ಶಿಕ್ಷೆ ನೀಡಬೇಕು. ಇದನ್ನು ಸ್ಥಳೀಯ ಗ್ರಾಮಸ್ಥರು ನೋಡ ಬೇಕು ಎಂದು ಕಿಡಿಕಾರಿದರು.

ಮಕ್ಕಳಿಂದಲೇ ಬಡಿಸಬೇಕು: ಮಾರ್ಟಳ್ಳಿ ನಿವಾಸಿ ಸುಕನ್ಯಾ ಮಾತನಾಡಿ, ನಮ್ಮ ದೇಶ ದಲ್ಲಿ ಅನೇಕ ಸ್ವಾಮೀಜಿಗಳಿದ್ದಾರೆ. ಆದರೆ ಸಾಲೂರು ಕಿರಿಯ ಸ್ವಾಮೀಜಿ ಪ್ರಸಾದಕ್ಕೆ ವಿಷ ಹಾಕುವ ಮೂಲಕ ಸ್ವಾಮೀಜಿಯ ಕುಲಕ್ಕೆ ಕಳಂಕ ತಂದಿದ್ದಾನೆ. ಅಂಬಿಕಾ ಹೆಣ್ಣಿನ ಕುಲಕ್ಕೆ ಮಾರಕ ಆಗಿದ್ದಾಳೆ. ಈ ಕಿರಾತಕರ ದುರಾಸೆಯಿಂದ ಸಾಕಷ್ಟು ಮಂದಿ ನರಕ ಅನುಭವಿಸಿದ್ದಾರೆ. ಊಟ, ತಿಂಡಿ ಇಲ್ಲದೇ ಪೋಷಕರು ನರಳಾಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಗಳನ್ನು ಕರೆತಂದು ಮಕ್ಕಳೊಂದಿಗೆ ಬಿಡ ಬೇಕು. ಮಕ್ಕಳೇ ಅವರನ್ನು ಕಲ್ಲಿನಿಂದ ಹೊಡೆದು ಸಾಯಿಸಬೇಕು. ಇದರಿಂದ ಇಂತಹ ಕಿರಾತಕರಿಗೆ ಪಾಠ ಕಲಿಸಿದಂತಾ ಗುತ್ತದೆ ಎಂದು ಹೇಳಿದರು.

ಎಂ.ಟಿ.ಯೋಗೇಶ್ ಕುಮಾರ್

Translate »