ಮೈಸೂರು ರೈಲು ನಿಲ್ದಾಣದಲ್ಲಿ 17 ಕೋಟಿ ರೂ. ವೆಚ್ಚದ ವಿವಿಧ  ಅಭಿವೃದ್ಧಿ ಕಾಮಗಾರಿಗೆ ಸಂಸದ ಪ್ರತಾಪ್ ಸಿಂಹ ಗುದ್ದಲಿ ಪೂಜೆ
ಮೈಸೂರು

ಮೈಸೂರು ರೈಲು ನಿಲ್ದಾಣದಲ್ಲಿ 17 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದ ಪ್ರತಾಪ್ ಸಿಂಹ ಗುದ್ದಲಿ ಪೂಜೆ

January 25, 2019

ಮೈಸೂರು: ರೈಲ್ವೆ ಇಲಾಖೆಯು 17 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣದ ನವೀಕರಣಕ್ಕೆ ಮುಂದಾಗಿದೆ. ಸಂಸದ ಪ್ರತಾಪ್‍ಸಿಂಹ ಅವರು ಮೈಸೂರು ರೈಲು ನಿಲ್ದಾಣ ಪ್ರವೇಶ ದ್ವಾರದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ನಂತರ ನಿಲ್ದಾಣದ ಆವ ರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮೈಸೂರಿಗೆ ಪ್ರತೀ ದಿನ ಹೆಚ್ಚು ಜನ ಆಗಮಿಸುತ್ತಿದ್ದು, ಆ ಪೈಕಿ ರೈಲು ಬಳಕೆದಾರರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಪ್ರತೀ ದಿನ 60,000 ಮಂದಿ, ಮೈಸೂರು ರೈಲು ನಿಲ್ದಾಣದಿಂದ ದಿನ 47 ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಾರ್ಷಿಕ ಸುಮಾರು 110 ಕೋಟಿ ರೂ. ವರಮಾನ ಬರುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದ ನಂತರ ರೈಲ್ವೇ ಸ್ಟೇಷನ್‍ಗಳ ಪುನರು ಜ್ಜೀವನಗೊಳಿಸಿ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಮೈಸೂರಿಗೆ ಇನ್ನೂ ಹೆಚ್ಚು ರೈಲು ಸೇವೆ, ಅಶೋಕಪುರಂ ರೈಲು ನಿಲ್ದಾಣದವರೆಗೆ ಕೆಲ ರೈಲುಗಳ ಸೇವೆ ವಿಸ್ತರಣೆ, ನಾಗನ ಹಳ್ಳಿ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡುವ ಮೂಲಕ ಇಲಾಖೆ ಪ್ರಯಾಣಿಕ ಸ್ನೇಹಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ಇದೀಗ 17 ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣದ ವಿವಿಧ ಅಭಿ ವೃದ್ಧಿ ಕೆಲಸ ಹಾಗೂ ಅಶೋಕಪುರಂ ರೈಲು ನಿಲ್ದಾಣದಲ್ಲಿ ಹಳಿ ದಾಟಲು ಪಾದಚಾರಿ ಗಳ ಮೇಲ್ಸೇತುವೆ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ಪ್ರತಾಪ್‍ಸಿಂಹ ಇದೇ ಸಂದರ್ಭ ನುಡಿದರು.

ವಿಧಾನಪರಿಷತ್ ಸದಸ್ಯ ಮರಿತಿಬ್ಬೇ ಗೌಡ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ, ಬಿಜೆಪಿ ಮುಖಂಡ ಬಿ.ಪಿ. ಮಂಜುನಾಥ ಹಾಗೂ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಡಾ. ಅಪರ್ಣ ಗರ್ಗ ಈ ಸಂದರ್ಭ ಉಪಸ್ಥಿತರಿದ್ದರು.

ಮೈಸೂರು ರೈಲು ನಿಲ್ದಾಣದ ಪ್ಲಾಟ್ ಫಾರಂಗಳಿಗೆ ಛಾವಣಿ ನಿರ್ಮಾಣ(2.21 ಕೋಟಿ ರೂ), ಪಶ್ಚಿಮ ಭಾಗದ ಪ್ರವೇಶ ಕಟ್ಟಡ ಅಭಿವೃದ್ಧಿ(2.24 ಕೋಟಿ ರೂ), ರಸ್ತೆ ಅಗಲೀಕರಣ, ನಿರೀಕ್ಷಣಾ ಕೊಠಡಿ ಗಳ ಪುನರುಜ್ಜೀವನ, ಎಕ್ಸಿಕ್ಯೂಟಿವ್ ಲಾಂಜ್ ನಿರ್ಮಾಣ, ಪಶ್ಚಿಮ ಭಾಗಕ್ಕೆ ಪಾರ್ಸಲ್ ಕಚೇರಿ ಸ್ಥಳಾಂತರ ಸೇರಿದಂತೆ ಒಟ್ಟು 16.25 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ಕಲ್ಪಿ ಸುವ ಕಾಮಗಾರಿಗೆ ಚಾಲನೆ ನೀಡಲಾ ಗಿದೆ. ಅಶೋಕಪುರಂ ರೈಲು ನಿಲ್ದಾಣದಲ್ಲಿ ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ (75 ಲಕ್ಷ ರೂ) ಸಂಸದ ಪ್ರತಾಪ ಸಿಂಹ ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು.

Translate »