ಕ್ಯಾನ್ಸರ್ ರೋಗಿ ಚಿಕಿತ್ಸೆಗೆ ಸಂಸದ ಪ್ರತಾಪ್‍ಸಿಂಹ ನೆರವು
ಮೈಸೂರು

ಕ್ಯಾನ್ಸರ್ ರೋಗಿ ಚಿಕಿತ್ಸೆಗೆ ಸಂಸದ ಪ್ರತಾಪ್‍ಸಿಂಹ ನೆರವು

July 10, 2018

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು, ಕ್ಯಾನ್ಸರ್‍ನಿಂದ ಬಳಲುತ್ತಿರುವ ಮತ್ತೋರ್ವರ ಚಿಕಿತ್ಸೆಗೆ ನೆರವಾಗಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಕೆ.ಪ್ರಕಾಶ್ ಅವರ ಪತ್ನಿ ವಿಜಯಾ ಅವರ ಚಿಕಿತ್ಸೆಗೆ `ಪ್ರಧಾನ ಮಂತ್ರಿಯವರ ಪರಿಹಾರ ನಿಧಿ’ಯಿಂದ 72,375 ರೂಗಳನ್ನು ಬಿಡುಗಡೆ ಮಾಡಿಸಿ, ಹಸ್ತಾಂತರಿಸಿದ್ದಾರೆ.

ಸುಮಾರು 65ರ ವಯೋಮಾನದ ವಿಜಯಾ ಅವರು, ಹಲವು ತಿಂಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಸಂಸದ ಪ್ರತಾಪ್‍ಸಿಂಹ ಅವರನ್ನು ಭೇಟಿಯಾಗಿ, ಸಹಾಯ ಕೋರಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಪ್ರತಾಪ್‍ಸಿಂಹ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸೆಗೆ ಅಗತ್ಯವಾಗಿದ್ದ ಹಣವನ್ನು ಬಿಡುಗಡೆ ಮಾಡಿಸಿ, ವಿಜಯಾ ಅವರಿಗೆ ಹಸ್ತಾಂತರಿಸಿ, ಶೀಘ್ರ ಗುಣಮುಖರಾಗುವಂತೆ ಆಶಿಸಿದ್ದಾರೆ.

Translate »