ಸರ್ಕಾರದ ನಿರ್ಧಾರಕ್ಕೆ ಕಾದಿರುವ ಮೈಸೂರು ಜಿಲ್ಲಾಡಳಿತ
ಮೈಸೂರು

ಸರ್ಕಾರದ ನಿರ್ಧಾರಕ್ಕೆ ಕಾದಿರುವ ಮೈಸೂರು ಜಿಲ್ಲಾಡಳಿತ

May 15, 2019

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ 120 ವರ್ಷಗಳ ಹಳೆಯದಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಪಾರಂ ಪರಿಕ ಕಟ್ಟಡಗಳ ಅಳಿವು-ಉಳಿವು ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ.

ಶಿಥಿಲಾವಸ್ಥೆಯಲ್ಲಿರುವ ಈ ಎರಡೂ ಕಟ್ಟಡಗಳನ್ನು ಯಥಾಸ್ಥಿತಿ ಕಾಯ್ದು ಕೊಂಡು ನವೀಕರಣ ಮಾಡಿ ಸಂರಕ್ಷಿಸಿ ಕೊಳ್ಳಬೇಕೋ ಅಥವಾ ಕೆಡವಿ ಅದೇ ಪಾರಂಪರಿಕ ಮಾದರಿಯಲ್ಲಿ ಹೊಸ ಕಟ್ಟಡ ನಿರ್ಮಿಸಬೇಕೋ ಎಂಬುದರ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ.

ಪಾರಂಪರಿಕ ನಗರವಾದ ಮೈಸೂರಲ್ಲಿ ಹಳೆಯ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳ ಮೇಲೆ ಜನರ ಭಾವನಾತ್ಮಕ ಸಂಬಂಧವಿರುವುದೇ ದೇವರಾಜ ಮಾರು ಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗಳ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಜಿಲ್ಲಾ ಡಳಿತ ಹಾಗೂ ಸರ್ಕಾರಕ್ಕೆ ಕಷ್ಟವಾಗಿದೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್, ಈ ಎರಡೂ ಕಟ್ಟಡಗಳೂ 120 ವರ್ಷಗಳ ಹಳೆಯ ದಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದರಿಂದ ವಾಸಕ್ಕೆ ಯೋಗ್ಯವಾಗಿಲ್ಲ. ಅವುಗಳನ್ನು ಕೆಡವಿ ಅದೇ ಸ್ಥಳದಲ್ಲಿ ಪಾರಂಪರಿಕ ಶೈಲಿ ಯಲ್ಲೇ ಹೊಸ ಕಟ್ಟಡ ನಿರ್ಮಿಸುವುದು ಒಳಿತು ಎಂದು ಕರ್ನಾಟಕ ಸರ್ಕಾರದ ‘Task Force Fro Quality Assurance in Public Constructions and Heritage Improvements and Restoration Committee (HIRC) ಶಿಫಾರಸು ಮಾಡಿದೆ ಎಂದರು.

ಮತ್ತೊಂದೆಡೆ ಜಿಲ್ಲಾ ಮಟ್ಟದ ಪಾರಂಪರಿಕ ಸಮಿತಿಯು ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳು ಸದೃಢ ವಾಗಿದ್ದು, ಪಾರಂಪರಿಕ ಶೈಲಿಯಲ್ಲಿ ಯಥಾ ವತ್ತಾಗಿ ನವೀಕರಿಸಿ ಸಂರಕ್ಷಿಸಬೇಕೆಂದು ವರದಿ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಎರಡೂ ತಜ್ಞರ ಸಮಿತಿಗಳು ವಿಭಿನ್ನ ರೀತಿಯಲ್ಲಿ ನೀಡಿರುವ ವ್ಯತಿರಿಕ್ತ ವರದಿಗಳನ್ನು ಕ್ರೋಢೀಕರಿಸಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ತಾವು ತಿಂಗಳ ಹಿಂದೆ ಯಷ್ಟೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸರ್ಕಾರದ ಮಟ್ಟದಲ್ಲಿ ಸಚಿವರು, ಶಾಸ ಕರು, ಜನಪ್ರತಿನಿಧಿಗಳು, ಪಾರಂಪರಿಕ ತಜ್ಞರು, ವಿವಿಧ ಸಂಘಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳ ಬೇಕಾಗಿದ್ದು, ಅದರಂತೆ ನಾವು ಮುಂದಿನ ಕ್ರಮ ವಹಿಸಲಾಗುವುದು ಎಂದು ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

ದೇವರಾಜ ಮಾರುಕಟ್ಟೆ ಉತ್ತರ ಭಾಗದ ಪ್ರವೇಶ ದ್ವಾರದ ಕಮಾನು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಹೆಚ್.ಸಿ. ಮಹದೇವಪ್ಪ ಅವರು ಭೇಟಿ ನೀಡಿ ಪರಿ ಶೀಲಿಸಿದ ನಂತರ ಈ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇ ಗೌಡ ಸಹ ಎರಡೂ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.

ಅಲ್ಲದೇ ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ದೇವರಾಜ ಮಾರುಕಟ್ಟೆಗೆ ತೆರಳಿ ಪರಿಶೀಲಿಸಿ, ಪರಿಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ದ್ದನ್ನು ಇಲ್ಲಿ ಸ್ಮರಿಸಬಹುದು.
ಕಟ್ಟಡಗಳನ್ನು ನವೀಕರಿಸಿ ಸಂರಕ್ಷಿಸ ಬೇಕು ಎಂದು ಒತ್ತಾಯಿಸಿರುವ ಎರಡೂ ಕಟ್ಟಡಗಳ ಬಾಡಿಗೆದಾರರು, ಕೆಡವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯುವರಾಜ ಯದುವೀರ್ ಸಹ ಸಂರಕ್ಷಿ ಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಉಳಿಸಿಕೊಂಡು ರಿಪೇರಿ ಮಾಡಿಸ ಬೇಕೋ ಅಥವಾ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೋ ಎಂಬ ಗೊಂದಲ ಉಂಟಾಗಿರುವುದರಿಂದ ಈಗ ನಿರ್ಧಾರ ಸರ್ಕಾರದ ಹಂತದಲ್ಲಿದೆ. ಚುನಾವಣಾ ನೀತಿ ಸಂಹಿತೆ ಅಂತ್ಯಗೊಂಡ ನಂತರ ಈ ವಿವಾದದ ಬಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚಿಸುವರು ಎಂದು ತಿಳಿದು ಬಂದಿದೆ.

Translate »