ಮೈಸೂರು ನಗರಪಾಲಿಕೆ ಚುನಾವಣೆ: ಎಸ್‍ಡಿಪಿಐ ಮೊದಲ ಪಟ್ಟಿ ಬಿಡುಗಡೆ
ಮೈಸೂರು

ಮೈಸೂರು ನಗರಪಾಲಿಕೆ ಚುನಾವಣೆ: ಎಸ್‍ಡಿಪಿಐ ಮೊದಲ ಪಟ್ಟಿ ಬಿಡುಗಡೆ

August 19, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷದಿಂದ ಸ್ಪರ್ಧಿಸುತ್ತಿರುವ 13 ಅಭ್ಯರ್ಥಿಗಳ ಪಟ್ಟಿಯನ್ನು ಸಂಘದ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

10ನೇ ವಾಡ್- ಮಹಮ್ಮದ್ ಮುಜಾಮಿಲ್, 12ನೇ ವಾರ್ಡ್- ಹಾಜಿ ನಸ್ರುಲ್ಲಾ, 14ನೇ ವಾರ್ಡ್- ಮುಹೀಬ್, 15ನೇ ವಾರ್ಡ್- ದೀಪಕ್, 17ನೇ ವಾರ್ಡ್ – ಸುಮಯ್ಯ ಫಿರ್ದೊಸ್, 25ನೇ ವಾರ್ಡ್- ಮುಜಾಮ್ಮಿಲ್, 26ನೇ ವಾರ್ಡ್- ಆಸ್ಮಾ ಖಾನಂ, 27ನೇ ವಾರ್ಡ್- ಮೊಹಮ್ಮದ್ ತೌಸಿಫ್, 29ನೇ ವಾರ್ಡ್- ಜಹೀರ್, 31ನೇ ವಾರ್ಡ್- ಮತೀನ್ ಬೇಗ್, 33ನೇ ವಾರ್ಡ್- ಹಫೀಜ್ ಮುಬಾರಕ್, 38ನೇ ವಾರ್ಡ್- ರಿತೇಶ್, 39ನೇ ವಾರ್ಡ್- ಎಸ್.ಸ್ವಾಮಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ನಾಳೆಯೊಳಗೆ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಇತರೆ ಪಕ್ಷಗಳಿಗಿಂತ ಬಿನ್ನವಾಗಿರುವ ಎಸ್‍ಡಿಪಿಐ ಎಲ್ಲಾ ವರ್ಗದ ಜನರಿಗೂ ರಾಜಕೀಯ ವೇದಿಕೆ ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪುಟ್ಟನಂಜಯ್ಯ, ಕುಮಾರಸ್ವಾಮಿ, ಕೌಶನ್ ಬೇಗ್, ಅಜಂಪಾಷಾ, ತಬ್ರೇಜ್ ಸೇಠ್ ಉಪಸ್ಥಿತರಿದ್ದರು.

Translate »