ಅರಬ್ಬೀತಿಟ್ಟು ವನ್ಯಧಾಮದಲ್ಲಿ ವಿಹರಿಸುತ್ತಿವೆ ಮೈಸೂರು ಮೃಗಾಲಯದ ಜಿಂಕೆಗಳು..!!!
ಮೈಸೂರು

ಅರಬ್ಬೀತಿಟ್ಟು ವನ್ಯಧಾಮದಲ್ಲಿ ವಿಹರಿಸುತ್ತಿವೆ ಮೈಸೂರು ಮೃಗಾಲಯದ ಜಿಂಕೆಗಳು..!!!

February 12, 2019

ಮೈಸೂರು: ಶಿಸುತ್ತಿರುವ ವನ್ಯಜೀವಿಗಳ ಸಂರಕ್ಷಣೆ ಹಾಗೂ ಯಶಸ್ವಿ ಸಂತಾನೋತ್ಪತ್ತಿಗೆ ಆಧ್ಯತೆ ನೀಡಿ ಉತ್ತಮ ವಾತಾವರಣ ಕಲ್ಪಿಸುವಲ್ಲಿ ಯಶಸ್ವಿಯಾಗಿ ರುವ ಮೈಸೂರು ಮೃಗಾಲಯದಲ್ಲಿ ದಿನೇ ದಿನೆ ಜಿಂಕೆಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ನೂರಾರು ಜಿಂಕೆಗಳನ್ನು ಅರಬ್ಬೀತಿಟ್ಟು ವನ್ಯಧಾಮಕ್ಕೆ ವರ್ಗಾಯಿಸಲು ನಿರ್ಧರಿಸ ಲಾಗಿದ್ದು, ಮೊದಲ ಹಂತದಲ್ಲಿ 52 ಚುಕ್ಕೆ ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ.

ಮೈಸೂರಿನ ಚಾಮರಾಜೇಂದ್ರ ಮೃಗಾ ಲಯ ಆನೆ, ಜಿರಾಫೆ, ಕಾಡೆಮ್ಮೆ, ನಿರಾನೆ, ಜಿಂಕೆ, ಜೀಬ್ರಾ, ಕಾಡು ನಾಯಿ, ತೋಳ ಸೇರಿದಂತೆ ವಿವಿಧ ಪ್ರಾಣಿಗಳ ಸಂತಾ ನೋತ್ಪತ್ತಿ ಕೇಂದ್ರವಾಗಿಯೂ ಮಾರ್ಪ ಟ್ಟಿದೆ. ಏಷ್ಯಾ ಖಂಡದಲ್ಲಿ ಗಮನ ಸೆಳೆದಿ ರುವ ಹಾಗೂ ಭಾರತದಲ್ಲಿಯೇ ಮುಂಚೂಣಿ ಯಲ್ಲಿರುವ ಮೈಸೂರು ಮೃಗಾಲಯ ದಿನ ದಿಂದ ದಿನಕ್ಕೆ ತನ್ನ ವಿವಿಧ ಕಾರ್ಯಕ್ರಮ ಮತ್ತು ವಿನೂತನ ಕಾರ್ಯ ಯೋಜನೆ ಗಳ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡುತ್ತಿದೆ.

ಜಿಂಕೆಗಳ ಸಂತತಿ ವೃದ್ಧಿ: ಮೈಸೂರು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸಂಖ್ಯೆ ಹೆಚ್ಚಾಗಿದೆ. ಸ್ಥಳಾಭಾವದ ಕೊರತೆ, ಸಮರ್ಪಕ ಸಂರಕ್ಷಣೆ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮ ಪಾಲಿಸಬೇಕಾದ ಅನಿವಾರ್ಯತೆಯಿದ್ದು, ಜಿಂಕೆಗಳನ್ನು ವನ್ಯಧಾಮಕ್ಕೆ ಬಿಡಲು ನಿರ್ಧರಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶಕ್ಕೆ ಪೋಷಿತ ಪ್ರಾಣಿಗಳನ್ನು ಬಿಡುವುದಕ್ಕೆ ಕಾನೂನು ತೊಡಕು ಇದೆ. ಈ ಹಿನ್ನೆಲೆಯಲ್ಲಿ ವನ್ಯ ಧಾಮಕ್ಕೆ ಜಿಂಕೆಗಳನ್ನು ಬಿಡಲಾಗಿದೆ.

ಮೈಸೂರಿನಿಂದ 35 ಕಿ.ಮಿ ದೂರದ ಹುಣಸೂರು ಅರಬ್ಬೀತಿಟ್ಟು ವನ್ಯಧಾಮ, ಜಿಂಕೆಗಳ ವಾಸಕ್ಕೆ ಯೋಗ್ಯವಾದ ಸ್ಥಳವಾಗಿರುವುದನ್ನು ಗುರುತಿಸಿರುವ ಮೃಗಾಲಯದ ಅಧಿಕಾರಿಗಳು ಸರ್ಕಾರದ ಒಪ್ಪಿಗೆ ಪಡೆದು ಕಳೆದ 15ದಿನದಿಂದ ಪ್ರತ್ಯೇಕ ತಂಡಗಳಲ್ಲಿ 52 ಜಿಂಕೆಗಳನ್ನು ಈಗಾಗಲೇ ಸ್ಥಳಾಂತರಿಸಿದ್ದು, ಅವುಗಳ ಸೌಖ್ಯವನ್ನು ಪರಿಗಣಿಸಿ, ಮತ್ತಷ್ಟು ಜಿಂಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ವಿಶೇಷ ಏನು: ಪ್ರಾಣಿಗಳನ್ನು ಸಾಗಿಸು ವಲ್ಲಿ ಎರಡು ವಿಧಾನಗಳಿವೆ. ಕಠಿಣ (ಹಾರ್ಡ್) ಹಾಗೂ ಮೃದು(ಸಾಫ್ಟ್) ವಿಧಾನ. ಮೈಸೂರು ಮೃಗಾಲಯವು ಜಿಂಕೆಗಳನ್ನು ಸಾಗಿಸಲು ಮೃದು ವಿಧಾನವನ್ನು ಅನುಸರಿ ಸಿದೆ. ಜಿಂಕೆಗಳನ್ನು ಸಾಗಿಸಲು ಕಳೆದ ಒಂದು ತಿಂಗಳಿಂದಲೇ ಜಿಂಕೆಗಳಿರುವ ಸ್ಥಳದಲ್ಲಿ ಬೋನ್ ಇಟ್ಟು ಅದರಲ್ಲಿ ಆಹಾರ ಪದಾರ್ಥ ಗಳನ್ನು ಹಾಕಿ ಅವುಗಳು ಒಳಗೆ ಬಂದ 10ರಿಂದ 12 ಜಿಂಕೆಯ ತಂಡವನ್ನು ಸುರಕ್ಷಿತ ವಾಗಿ ಲಾರಿಯಲ್ಲಿರಿಸಿ ಅರಬ್ಬೀತಿಟ್ಟು ವನು ಧಾಮಕ್ಕೆ ಸಾಗಿಸಿ, ಬಿಡಲಾಗಿದೆ. 52 ಜಿಂಕೆ ಗಳನ್ನು ಹೀಗೆ ಸಾಗಿಸಲಾಗಿದ್ದು, ಇನ್ನು 50 ಜಿಂಕೆಗಳನ್ನು ಬಿಡಲು ಉದ್ದೇಶಿಸಲಾಗಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »